ನೇತಾ, ಬಾಬುಗಳಿಗೆ ಟೋಲ್ ವಿನಾಯಿತಿ!

Suddi Samagra
Published on

ರಸ್ತೆ ಟೋಲ್ ಪಾವತಿಸಿಯೇ ಎಲ್ಲರೂ ಸಂಚರಿಸಬೇಕು. ಇದರಲ್ಲಿ ವಿನಾಯಿತಿ ಇಲ್ಲ ಎಂದು ಹೇಳಿದರೂ, ಅದು ಸಾರ್ವಜನಿಕರಿಗೆ ಅನ್ವಯ ಎಂಬುದು ಅನುಷ್ಠಾನದಲ್ಲಿ ವ್ಯಕ್ತವಾಗಿದೆ. ಪತ್ರಕರ್ತರಿಗೆ ಟೋಲ್ ವಿನಾಯಿತಿ ಕುರಿತು ಕೇಳಿದ್ದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ‘ಉಚಿತ, ವಿನಾಯಿತಿಗಳನ್ನೆಲ್ಲ ಪ್ರೋತ್ಸಾಹಿಸುವ ಜಾಯಮಾನ ನನ್ನದಲ್ಲ’ ಎಂದು ಉತ್ತರಿಸಿದ್ದರು. ಆದರೆ, ಅವರ ಮಾತಿಗೂ ಕೃತಿಗೂ ತಾಳಮೇಳವಿಲ್ಲ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಿಸಿರುವ ಶುಲ್ಕ ಸಂಬಂಧಿ ಅಧಿಸೂಚನೆಗಳು ಇದಕ್ಕೆ ಸಾಕ್ಷಿಯಾಗಿ ಕಣ್ಣೆದುರಿವೆ.

ಜನರ ಮೇಲೆ ಸುಂಕದ ಹೊರೆ

  • 1958ರಿಂದೀಚೆಗೆ ಮೋಟಾರು ವಾಹನ ತೆರಿಗೆ
  • 1958ರಿಂದೀಚೆಗೆ ಪ್ಯಾಸೆಂಜರ್ ಮತ್ತು ಗೂಡ್ಸ್ ತೆರಿಗೆ
  • 1996ರಿಂದೀಚೆಗೆ ಏಕ ಕಂತಿನ ರಸ್ತೆ ತೆರಿಗೆ
  • 2000ದಿಂದೀಚೆಗೆ ಪೆಟ್ರೋಲ್/ಡೀಸೆಲ್ ಸೆಸ್

2000 ದಿಂದ 2010ರ ತನಕದ ಅವಧಿಯಲ್ಲಿ ಶುಲ್ಕ ವಿನಾಯಿತಿ ಕೆಟಗರಿಯಲ್ಲಿದ್ದುದು 9 ಮಾತ್ರ.

ಒಂಬತ್ತು ಕೆಟಗರಿಗಳು ಇಂತಿವೆ: ಡಿಫೆನ್ಸ್, ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್, ಅಂತಿಮ ಸಂಸ್ಕಾರವಾಹನ, ಕೇಂದ್ರ ಮತ್ತು ರಾಜ್ಯಗಳ ಆಯ್ದ ಅಧಿಕಾರಿಗಳು, ರಾಷ್ಟ್ರಪತಿ, ಪ್ರಧಾನಮಂತ್ರಿ, ಸಂಸದರು, ಶಾಸಕರು.

  • ಕಳೆದ 10 ವರ್ಷಗಳ ಅವಧಿಯಲ್ಲಿ ಈ ಕೆಟಗರಿಗಳ ಸಂಖ್ಯೆ 25ಕ್ಕೆ ಏರಿಕೆ
  • ನ್ಯಾಯಾಧೀಶರು, ಸೆಕ್ರೆಟರಿಗಳು, ವಿವಿಧ ಸಚಿವಾಲಯಗಳ ಅಧಿಕಾರಿಗಳು, ಎನ್​ಎಚ್​ಎಐ ಅಧಿಕಾರಿಗಳದ್ದು ಹೊಸ ಸೇರ್ಪಡೆ.
  • ರಾಜ್ಯ ಸರ್ಕಾರಗಳ ಟೋಲ್ ವಿನಾಯಿತಿಗೆ ಪ್ರತ್ಯೇಕ ಪಟ್ಟಿಯೇ ಇದೆ.

ಫಾಸ್​ಟ್ಯಾಗ್​ ವಿನಾಯಿತಿ ಕಥೆ

  • 354 - ಪ್ರಧಾನಮಂತ್ರಿಯವರಿಗೆ ಟೋಲ್ ವಿನಾಯಿತಿ ಇದೆ; ವಿನಾಯಿತಿ ಹೊಂದಿದ 354 ಫಾಸ್ಟ್ಯಾಗ್​ ಪಿಎಂ ಬಳಿ ಇವೆ.
  • 788 - ಸಂಸತ್ತಿನ ಸದಸ್ಯರಿಗೆ ವಿತರಣೆಯಾಗಿರುವ ವಿನಾಯಿತಿ ಫಾಸ್ಟಾ್ಯಗ್ ಸಂಖ್ಯೆ 788.
  • 1,136 - ಸಂಸದರಿಗೆ ವಿತರಣೆಯಾಗಿರುವ ಫಾಸ್ಟಾ್ಯಗ್​ಗಳ ಸಂಖ್ಯೆ 1,136 ಆಗಿದ್ದು, ವಿನಾಯಿತಿ ಸೌಲಭ್ಯ ಅಳವಡಿಕೆಯಾಗಿದೆ.

ಆರೋಪ: ವೈಯಕ್ತಿಕ ಪ್ರವಾಸಕ್ಕೂ ಟೋಲ್ ವಿನಾಯಿತಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ನೇತಾಗಳು ಮತ್ತು ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net