

ಶಿವಮೊಗ್ಗ: ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಸಂಸ್ಥೆಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಕೌಶಲ ರೂಪಿಸಲು ಹಾಗೂ ವಾಣಿಜ್ಯ ಕ್ಷೇತ್ರದ ವಾಸ್ತವ ಜ್ಞಾನವನ್ನು ಮತ್ತಷ್ಟು ಉನ್ನತೀಕರಿಸಲು ನಗರದ ಎನ್‌ಇಎಸ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಕಾಲೇಜು, ಬೆಂಗಳೂರಿನ ಮೈಲಾಜಿಕ್ ಬಿಜಿನೆಸ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್.ಶಿವಪ್ರಸಾದ್ ಮತ್ತು ಮ್ಯಾನೇಜ್‌ಮೆಂಟ್ ಸ್ಕೂಲ್ ಸಿಇಒ ವಿನೋದ್ ಚಂದ್ರನ್ ಒಡಂಬಡಿಕೆಗೆ ಸಹಿ ಹಾಕಿದರು. ಜಾಗತೀಕರಣದ ನಂತರ ವಾಣಿಜ್ಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಲಭ್ಯವಿದೆ. ಅಂತಹ ಅವಕಾಶಗಳನ್ನು ಪಡೆಯುವಲ್ಲಿ ವಿದ್ಯಾರ್ಥಿಗಳನ್ನು ತಯಾರಿ ಮಾಡಲು ಈ ಒಡಂಬಡಿಕೆ ಪೂರಕವಾಗಿದೆ.
ಈ ಒಡಂಬಡಿಕೆ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಬಗೆಯ ಅಧ್ಯಯನ ಸಾಮಗ್ರಿಗಳು, ತರಬೇತಿ ಆನ್‌ಲೈನ್ ಮತ್ತು ನೇರ ಚರ್ಚೆಯ ಮೂಲಕ ಸಿಗಲಿದೆ. ಇದರಿಂದ ವಿದ್ಯಾಭ್ಯಾಸದ ಹಂತದಲ್ಲಿಯೇ ಯುಎಸ್-ಸಿ.ಎಂ.ಎ (ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟಿಂಗ್) ಪರೀಕ್ಷೆಗಳಲ್ಲಿ ತಯಾರಾಗಲು ಹಾಗೂ ಉತ್ತೀರ್ಣ ಹೊಂದುವ ಅವಕಾಶ ಸಿಗಲಿದೆ.