

ತಿ.ನರಸೀಪುರ: ತಾಲೂಕಿನ ನೆರಗ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಟರಾಜಪ್ಪ, ಉಪಾಧ್ಯಕ್ಷರಾಗಿ ಮಂಜುಳಾ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ 5 ವರ್ಷಗಳ ಅವಧಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಟರಾಜಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಇಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿ ಸಹಕಾರ ಅಭಿವೃದ್ಧಿ ಅಧಿಕಾರಿ ರಾಜಣ್ಣ ಇಬ್ಬರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಸಂಘದ ನಿರ್ದೇಶಕರಾದ ಎನ್.ಗುರುಸ್ವಾಮಿ, ಎನ್.ಆರ್.ಚಂದ್ರಶೇಖರ್, ಚಂದ್ರಶೇಖರಪ್ಪ, ನಂದೀಶ, ಮಹೇಶ್, ಶಿವಕುಮಾರ್, ದುಂಡಪ್ಪ, ಮಹದೇವಮ್ಮ ಹಾಗೂ ರತ್ನಮ್ಮ ಹಾಜರಿದ್ದು ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಸಮ್ಮತಿ ಸೂಚಿಸಿದರು.
ಅಧ್ಯಕ್ಷ -ಉಪಾಧ್ಯಕ್ಷರಾದ ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಡೇರಿ ಮುಂಭಾಗ ನೆರೆದಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ತಾಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಸಹಕಾರ ಸಂಘದ ಅಧ್ಯಕ್ಷ ಜಯಪ್ಪ, ಡೇರಿ ಗುರುಮೂರ್ತಿ, ಕೊಳತ್ತೂರು ಮಾಜಿ ಅಧ್ಯಕ್ಷ ಮಹದೇವ ಸ್ವಾಮಿ, ಹೆಮ್ಮಿಗೆ ಕುಮಾರ್, ಎನ್.ಆರ್.ಬಸವರಾಜಪ್ಪ, ಪ್ರಭು, ಗುಣ, ಕುಮಾರಸಿದ್ದಯ್ಯ, ದೊಳ್ಳಯ್ಯ, ಹಲವಾರ ಮಹದೇವಸ್ವಾಮಿ, ದುಂಡಪ್ಪ, ಗಿರೀಶ್, ಗ್ರಾಪಂ ಅಧ್ಯಕ್ಷ ರವಿ, ಬೆನಕನಹಳ್ಳಿ ನಟೇಶ್, ಶಂಕರ್, ಎನ್.ಎಸ್.ಗುರುಪಾದ ಸ್ವಾಮಿ, ಗವಿಮಠ ಶಂಕರ್ ಮತ್ತಿತರರಿದ್ದರು.