ನೇಪಾಳದಲ್ಲಿ ಚೀನಾಗೆ ಮುಖಭಂಗ; ಭಾರತದ ಪರವಾಗಿ ಬೀದಿಗಿಳಿದ ಜನರು

Nepal protest
Published on

ಕಾಠ್ಮಂಡು: ನೇಪಾಳ ಪ್ರಧಾನಿ ಕೆಪಿ. ಶರ್ಮ ಓಲಿಯ ಚೀನಾ ಪರ ನಿಲುವು ಅವರಿಗೇ ತಿರುಗು ಬಾಣವಾಗಿ ಪರಿಣಮಿಸಿದೆ. ಪ್ರಧಾನಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿರುವ ಓಲಿ ನೀತಿಯನ್ನು ಖಂಡಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಈ ನಡುವೆ, ನೇಪಾಳದಲ್ಲಿ ಚೀನಾದ ರಾಯಭಾರಿಯಾಗಿರುವ ಹೌ ಯಾಂಕಿ ಚೀನಾದ ಪ್ರಭಾವವನ್ನು ಉಳಿಸಲು ಹಾಗೂ ಓಲಿಯನ್ನು ಚೀನಾದ ಕೈಗೊಂಬೆಯಾಗಿರುವಂತೆ ನೋಡಿಕೊಳ್ಳುವ ತನ್ನ ಯತ್ನವನ್ನು ಮುಂದುವರಿಸಿದ್ದಾರೆ.

ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್​ ಪಕ್ಷದ ಹಲವು ಮುಖಂಡರನ್ನು ಭೇಟಿಯಾಗಿರುವ ಯಾಂಕಿ ಓಲಿಯನ್ನು ಅಧಿಕಾರದಿಂದ ಕೆಳಗಿಳಿಸದಂತೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಕಚೇರಿಯೊಂದಿಗೂ ಆಕೆ ಸಂಪರ್ಕ ಹೊಂದಿದ್ದಾಳೆ.

ಕಳೆದ ಎರಡು ದಿನಗಳಲ್ಲಿ ಮಾಜಿ ಪ್ರಧಾನಿ ಮಾಧವ್​ಕುಮಾರ್​, ಝಾಲಾನಾಥ್​ ಕನ್ನಲ್​ ಭೇಟಿಯಾಗಿ ಓಲಿ ಹಾಗೂ ಪ್ರಚಂಡ ನಡುವಿನ ಅಧಿಕಾರ ಹಂಚಿಕೆಯ ಚರ್ಚೆ ನಡೆಸಿದ್ದಾಳೆ ಎಂದು ಹೇಳಲಾಗಿದೆ.

ಯಾಂಕಿಯ ಈ ಚಟುವಟಿಕೆಗಳನ್ನು ನೇಪಾಳದ ಜನರು ವಿರೋಧಿಸಿದ್ದಾರೆ. ಸಾರ್ವಭೌಮ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ನೇಪಾಳದ ಆಂತರಿಕ ವಿಚಾರಗಳಲ್ಲಿ ಮೂರನೇಯವರ ಹಸ್ತಕ್ಷೇಪವನ್ನು ವಿರೋಧಿಸುವುದಾಗಿ ರಾಜಕೀಯ ಮುಂಖಂಡರು ಬಹಿರಂಗವಾಗಿ ಹೇಳೀಕೆ ನೀಡಿದ್ದಾರೆ. ಇದು ಚೀನಾದ ಮುಖಭಂಗಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net