ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

24-RNR-05
Published on

ರಾಣೆಬೆನ್ನೂರ: ತಾಲೂಕಿನ ನೆರೆಪೀಡಿತ ನದಿ ತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರ ನದಿಯಲ್ಲಿ ಜಲಾವೃತಗೊಂಡಿರುವ ಶ್ರೀ ಅಂಬಿಗರ ಚೌಡ್ಯನವರ ಐಕ್ಯಮಂಟಪ ವೀಕ್ಷಿಸಿದರು. ಈ ಸಮಯದಲ್ಲಿ ಗ್ರಾಮಸ್ಥರು ಕೂಡಲ ಸಂಗಮ ಮಾದರಿಯಲ್ಲಿ ಐಕ್ಯ ಮಂಟಪ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ನೀರಾವರಿ ಇಲಾಖೆಯಿಂದ ಐಕ್ಯಮಂಟಪ ಅಭಿವೃದ್ಧಿಗಾಗಿ 32 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಆದರೆ, ಐಕ್ಯಮಂಟಪ ಅಭಿವೃದ್ಧಿಗೊಳಿಸದೆ ವಿವಿಧ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರಕ್ರಿಯಿಸಿದ ಜಿಲ್ಲಾಧಿಕಾರಿ, ಐಕ್ಯಮಂಟಪ ಅಭಿವೃದ್ಧಿ ಬಗ್ಗೆ ಪರಿಶೀಲಿಸುತ್ತೇನೆ. ನದಿ ತೀರದ ಜನರು ಎಚ್ಚರಿಕೆಯಿಂದ ಇರಬೇಕು ಎಂದರು. ನಂತರ ಚಂದಾಪುರ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹಕ್ಕೆ ತುತ್ತಾದ ಜಮೀನುಗಳನ್ನು ವೀಸಿದರು.
ತಹಸೀಲ್ದಾರ್​ ಗುರುಬಸವರಾಜ, ಜಿಪಂ ಇಓ ಶ್ರೀಧರ, ತಾಪಂ ಇಓ ಸುಮಲತಾ ಎಸ್​.ಪಿ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net