ಐಸ್ ಬಾತ್ ಮಾಡಿದ ನಟಿ ನೇಹಾ ಶರ್ಮಾ; ಹಾಟ್ ವಿಡಿಯೋ ನೋಡಿ...

Neha Sharma
Published on

ಮುಂಬೈ: ಬಾಲಿವುಡ್ ನಟಿ ನೇಹಾ ಶರ್ಮಾ ಅವರು ಕೂಡ ಐಸ್ ಬಾತ್ ಮಾಡಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಟಬ್ ಒಂದರಲ್ಲಿ ಐಸ್ ನೀರನ್ನು ಇಡಲಾಗಿದೆ. ಸ್ವಿಮ್ ಸ್ಯೂಟ್ ಹಾಕಿ ಅವರು ಐಸ್ ಬಾತ್ ಮಾಡಿದ್ದಾರೆ.  ಅವರಿಗೆ ಐಸ್​ನಲ್ಲಿ ಸ್ನಾನ ಮಾಡಬೇಕು ಎನ್ನುವ ಯಾವುದೇ ಉದ್ದೇಶ ಇರಲಿಲ್ಲ. ಆದರೆ, ಅವರ ಫ್ರೆಂಡ್ಸ್ ಇದಕ್ಕೆ ಒತ್ತಾಯ ಮಾಡಿದರು. ಮೊದಲ ಬಾರಿಗೆ ನೀರಿಗೆ ಇಳಿದ ಅವರು, ನಂತರ ಎದ್ದು ಬಂದರು. ಫ್ರೆಂಡ್ಸ್ ಬಿಡಲಿಲ್ಲ. ಒತ್ತಾಯ ಮಾಡಿದರು. ಕೊನೆಗೆ ಅವರು ಸ್ನಾನ ಮಾಡೋಕೆ ಒಪ್ಪಿದರು. ಕೊನೆಗೂ ಅವರು ನೀರಿಗೆ ಇಳಿದರು. ಕೆಲ ಹೊತ್ತು ಅವರು ನೀರಿನಲ್ಲಿ ಮುಳುಗಿದ್ದರು.

ನೇಹಾ ಶರ್ಮಾ ಅವರು ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನಿಜಕ್ಕೂ ಈ ಸ್ನಾನ ಅದ್ಭುತ. ಎಲ್ಲರೂ ಒಮ್ಮೆ ಮಾಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net