VIDEO| 11ನೇ ಕ್ಲಾಸ್​ನಲ್ಲಿ ಇಂಡಿಯನ್​​ ಐಡಲ್​​ಗೆ ಆಡಿಷನ್​ ಕೊಟ್ಟಿದ್ದ ನೇಹಾ ಕಕ್ಕರ್​! ಹೇಗಿದೆ ನೋಡಿ ಆಗಿನ ವಿಡಿಯೋ

neha
Published on

ಮುಂಬೈ: ನೇಹಾ ಕಕ್ಕರ್​ ಯಾರಿಗೆ ಗೊತ್ತಿಲ್ಲ ಹೇಳಿ? ಅದ್ಭುತ ಕಂಠಸಿರಿಯಿಂದ ದೇಶದ ಸಂಗೀತ ಪ್ರಿಯರ ಮನಸ್ಸು ಗೆದ್ದಿರುವ ನೇಹಾ ಇತ್ತೀಚೆಗೆ ನಟನೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದೇ ನೇಹಾ ಕೆಲ ವರ್ಷಗಳ ಹಿಂದೆ ಹೇಗಿದ್ದರು? ಇಂಡಿಯನ್​ ಐಡಲ್ಲ್ನಲ್ಲಿ ಹೇಗೆ ಕಾಣಿಸಿಕೊಂಡಿದ್ದರು ಗೊತ್ತಾ?

ನೇಹಾ 11ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇಂಡಿಯನ್​ ಐಡಲ್​​ಗೆ ಆಡಿಷನ್​ ನೀಡಿದ್ದರು. ಶಾಲೆ, ಕಾಲೇಜಲ್ಲಿ ಅದಾಗಲೇ ಸಿಂಗರ್​ ಆಗಿ ಗುರುತಿಸಿಕೊಂಡಿದ್ದ ಅವರು ಪೂರ್ತಿ ದೇಶದಲ್ಲಿ ಗುರುತಿಸಕೊಳ್ಳಬೇಕೆಂಬ ಬಯಕೆ ಬಿಚ್ಚಿಟ್ಟಿದ್ದರು. "ನಾನು ಓಡಾಡುತ್ತಿದ್ದರೆ ಎಲ್ಲರೂ 'ನೋಡು ನೇಹಾ ಕಕ್ಕರ್​' ಎಂದು ನನ್ನನ್ನು ಬೆರಗು ಕಣ್ಣಿನಿಂದ ನೋಡಬೇಕು " ಎಂದು ಕನಸನ್ನು ಹೊತ್ತಿರುವುದಾಗಿ ತಿಳಿಸಿದ್ದರು. ಆಡಿಷನ್​ನಲ್ಲಿ ಸೆಲೆಕ್ಟ್​ ಆಗಿ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದರು.

ಆಗಿನ್ನೂ ಕಾಲೇಜು ಮೆಟ್ಟಿಲು ಹತ್ತಿದ್ದ ನೇಹಾ, ಒಮ್ಮೆ ಹಾಡಿನ ವಿಚಾರದಲ್ಲಿ ತೀರ್ಪುಗಾರರಿಂದ ಬೈಯಿಸಿಕೊಂಡಿದ್ದರು ಕೂಡ. ಅನು ಮಲಿಕ್​, ಸೋನು ನಿಗಮ್​ ಹಾಗೂ ಫರಾಹ್​ ಖಾನ್​ ಹಾಡಿನ ವಿಚಾರದಲ್ಲಿ ನೇಹಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಾದ ಮೇಲೆ ಮತ್ತೊಂದು ರಾಕಿಂಗ್​ ಪರ್ಫಾರ್ಮೆನ್ಸ್​ ನೀಡಿ ಎಲ್ಲರ ಮನಸ್ಸು ಕದ್ದಿದ್ದರು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:

ನೇಹಾ ಅವರ ಇಂಡಿಯನ್​ ಐಡಲ್​​​ನ ಸಣ್ಣದೊಂದು ಜರ್ನಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. "ಹೇಗಿದ್ದ ನೇಹಾ ಹೇಗಾದರು, ಅದೂ ಇಷ್ಟು ಕಡಿಮೆ ವರ್ಷದಲ್ಲಿ ಅದೆಷ್ಟು ಫೇಮಸ್​ ಆದರು" ಎಂದು ಜನರು ಹುಬ್ಬೇರಿಸಿಕೊಂಡು ವಿಡಿಯೋ ನೋಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net