‘ಇಬ್ಬರು ಮೂವರಾಗೋ ಸಮಯ’; ಮದುವೆಯಾದ 6 ವರ್ಷಗಳ ಬಳಿಕ ಸಿಹಿ ಸುದ್ದಿ ಕೊಟ್ಟ ನೇಹಾ ಗೌಡ

neha
Published on

ಬೆಂಗಳೂರು: ಕಿರುತೆರೆ ನಟಿ ನೇಹಾ ಗೌಡ. ಅವರು ನಟಿಯಾಗಿ, ಮಾಡೆಲ್ ಆಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಮದುವೆಯಾದ 6 ವರ್ಷಗಳ ಬಳಿಕ ನೇಹಾ - ಚಂದನ್‌ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್‌ಗಾಗಿ ನೇಹಾ ಗೌಡ ಹಾಗೂ ಚಂದನ್ ಗೌಡ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ಸ್ಕ್ಯಾನಿಂಗ್‌ ಇಮೇಜಸ್ ತೋರಿಸುವ ಮುಖಾಂತರ ಸಿಹಿ ಸುದ್ದಿಯನ್ನ ನೇಹಾ - ಚಂದನ್ ದಂಪತಿ ಹಂಚಿಕೊಂಡಿದ್ದಾರೆ. ನೇಹಾ - ಚಂದನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

2018ರಲ್ಲಿ ನೇಹಾ ಹಾಗೂ ಚಂದನ್ ಮದುವೆ ಆದರು. ಆರು ವರ್ಷಗಳ ಬಳಿಕ ಇವರ ಕಡೆಯಿಂದ ಗುಡ್​ನ್ಯೂಸ್ ಸಿಕ್ಕಿದೆ. ನೇಹಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಬರುತ್ತಿದೆ. ಎಲ್ಲರೂ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ನೇಹಾ ಪತಿ ಚಂದನ್ ಗೌಡ ಸದ್ಯ ‘ಅಂತರಪಟ’ ಸೀರಿಯಲ್‌ನಲ್ಲಿ ಕಥಾನಾಯಕನಾಗಿ ಅಭಿನಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net