ಸಮರ್ಪಕ ಕಸ ವಿಲೇ, ತೆರಿಗೆ ವಸೂಲಿಗೆ ನಿರ್ಲಕ್ಷ್ಯ

klr cmc meeting
ಸಾಮಾನ್ಯ ಸಭೆಯಲ್ಲಿ ಸ್ವಚ್ಚತೆ ಬಗ್ಗೆ ಧ್ವನಿ ಎತ್ತಿದ್ದ ಸದಸ್ಯರು.
Published on

ಕೋಲಾರ: ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಗೆ ಸ್ಪಂದಿಸದ ಹಾಗೂ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಸಾಧಿಸದ ಅಧಿಕಾರಿ, ಸಿಬ್ಬಂದಿಯನ್ನು ಕೋಲಾರ ನಗರಸಭೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತರಾಟೆಗೆ ತೆಗೆದುಕೊಂಡರು.

ನಮ್ಮ ವಾರ್ಡಿನ ರಸ್ತೆಯ ಮಧ್ಯ ಭಾಗದಲ್ಲಿರುವ ವಿದ್ಯುತ್​ ಕಂಬ ಸ್ಥಳಾಂತರ ಮಾಡಲು ಮನವಿ ಮಾಡಿ 6 ತಿಂಗಳಾದರೂ, ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಬೆಸ್ಕಾಂ ಇಂಜಿನಿಯರ್​ನನ್ನು ಅಂಬರೀಷ್​ ಅವರನ್ನು ತರಾಟೆಗೆ ತೆಗೆದುಕೊಂಡರು.

ಗಾಂಧಿ ನಗರದಲ್ಲಿ ಟಿಸಿ ಅಳವಡಿಸಲಾಗಿದ್ದು, ಇದುವರೆಗೂ ವಿದ್ಯುತ್​ ಸಂಪರ್ಕ ಕಲ್ಪಿಸಿಲ್ಲ, ನಗರ ಎಂದರೆ ಯಾಕೆ ರ್ನಿಲಕ್ಷ$್ಯ?..ಈ ಸಮಸ್ಯೆ ವಾರದಲ್ಲಿ ಬಗೆಹರಿಸದಿದ್ದರೆ ಇಲಾಖೆ ಎದುರು ಪ್ರತಿಭಟಿಸಲಾಗುವುದು ಎಂದು ಪ್ರವಿಣ್​ ಗೌಡ ಎಚ್ಚರಿಸಿದರು.

ಅಧ್ಯೆ ಲಕ್ಷಿ$್ಮದೇವಮ್ಮ, ಅಧಿಕಾರಿಗಳ ರ್ನಿಲಕ್ಷ$್ಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ನೋಟಿಸ್​ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಬೆಸ್ಕಾಂ ಇಂಜಿನಿಯರ್​ ವಿಜಯ್​ ಕುಮಾರ್​ ಪ್ರತಿಕ್ರಿಯಿಸಿ ಸಭೆಯಲ್ಲಿ ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ವಾರದಲ್ಲಿ ಬಗೆಹರಿಸುವುದಾಗಿ ತಿಳಿಸಿದರು.

ಪೌರಾಯುಕ್ತ ನವೀನ್​ ಚಂದ್ರ ಮಾತನಾಡಿ, ಸಭೆಗೆ ಬಂದು ಕೌನ್ಸಿಲ್​ಗೆ ನೋಟಿಸ್​ ನೀಡಲು ಸಾಧ್ಯವಾಗದಿದ್ದರೆ ಎಇಇ ಅಧ್ಯಕ್ಷರಿಗೆ ಪತ್ರ ಬರೆದು ವಿನಾಯಿತಿ ಕೇಳಬೇಕು ಎಂದು ಸೂಚಿಸಿದರು.

ಉಪಾಧ್ಯಕ್ಷ ಸಂಗೀತಾ ಜಗದೀಶ್​, ಸ್ಥಾಯಿ ಸಮಿತಿ ಅಧ್ಯಕ್ಷ ೈರೋಜ್​ ಖಾನ್​ ಇದ್ದರು.

* ತಗ್ಗುತ್ತಿರುವ ಆದಾಯ ಜಮಾ

ತೆರಿಗೆ ಆದಾಯವು ಏಪ್ರಿಲ್​ನಲ್ಲಿ 3.6 ಕೋಟಿ ರೂ., ಮೇನಲ್ಲಿ 2.40 ಕೋಟಿ ರೂ. ಜಮಾ ಆಗಿತ್ತು. ಆನಂತರ ಜೂನ್​ನಲ್ಲಿ 91 ಲಕ್ಷಕ್ಕೆ ಇಳಿಕೆಯಾಗಿದ್ದು, ಬಹುತೇಕ ಪ್ರತಿಷ್ಠಿತ ಕಟ್ಟಡಗಳವರು ದೊಡ್ಡಮಟ್ಟದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಅದನ್ನು ವಸೂಲಿ ಮಾಡುವಂತೆ ಪ್ರಸಾದ್​ ಬಾಬು, ಎಸ್​.ಆರ್​.ಮುರಳಿಗೌಡ ಒತ್ತಾಯಿಸಿದ್ದರು.

* ಡಿಸೇಲ್​ ಸೋರಿಕೆ ತಡೆಗೆ ಯಾಕಿಲ್ಲ ಕ್ರಮ..?

ಕಸ ನಿರ್ವಹಣೆ ಹೆಸರಿನಲ್ಲಿ ಡಿಸೇಲ್​ ಸೋರಿಕೆ ವ್ಯಾಪಕವಾಗಿದೆ. ಇದನ್ನು ತಡೆಯಲು ಹಲವು ಬಾರಿ ತಿಳಿಸಿದ್ದರೂ ಆರೋಗ್ಯ ನಿರೀಕ್ಷಕರು ಏಕೆ ಕ್ರಮಕೈಗೊಂಡಿಲ್ಲ ಎಂದು ಮುರಳಿಗೌಡ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಂಜುನಾಥ್​, ಶಿವಗಿರಿ ಮಟ್ಟದ ಸಮೀಪ ಲೋಡ್​ ಗಟ್ಟಲೇ ರಾಶಿ ಹಾಕ್ತಿದ್ದಾರೆ ಎಂದು ದೂರಿದರು.

ಬಡಾವಣೆಗಳ ಸ್ವಚ್ಛತೆಗೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ, ಸ್ವಚ್ಛತೆಗಾಗಿ ಸಿಬ್ಬಂದಿ ಹೆಚ್ಚಿಸಿ ಎಂದರೂ ಹೆಚ್ಚಿಸದೇ ಆರೋಗ್ಯ ನಿರೀಕ್ಷಕರು ಉದಾಸೀನ ತೋರುತ್ತಿದ್ದಾರೆ ಎಂದು ನಜೀಯಾ ಸುಲ್ತಾನ, ನಾರಾಯಣಮ್ಮ ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ನಿರೀಕ್ಷಕ ನವಾಜ್​, ಟ್ರಾ$್ಯಕ್ಟರ್​, ಕಂಪ್ಯಾಕ್ಟರ್​ಗೆ ಲೋಡ್​ ಲೆಕ್ಕದಲ್ಲಿ ಹಾಗೂ ಜೆಸಿಬಿಗಳಿಗೆ ತಾಸು ಲೆಕ್ಕದಲ್ಲಿ ಡಿಸೇಲ್​ ನೀಡಲಾಗುತ್ತಿದೆ. ತಿಂಗಳಿಗೆ 10 ಲಕ್ಷ ರೂ. ವೆಚ್ಚವಾಗುತ್ತಿದೆ ಎಂದಾಗ, ಗರಂ ಆದ ಸದಸ್ಯರು ನಿಮ್ಮ ಮನೆ ಸಮೀಪ ಕಸ ಹಾಕಿದರೆ ಹಾಗೆ ಬಿಡ್ತೀರಾ, ತಾರತಮ್ಯ ಬಿಟ್ಟು ಕೆಲಸ ಮಾಡಿ ಎಂದು ತಾಕೀತು ಮಾಡಿದರು.

* ಸ್ವಚ್ಛತೆ ವಿಚಾರದಲ್ಲಿ ಕಾವಲುಗಾರನಂತೆ ಕೆಲಸ

ಪೌರಾಯುಕ್ತ ನವೀನ್​ ಚಂದ್ರ ಮಾತನಾಡಿ, ನಗರದಲ್ಲಿ ಹಿಂದೆ ಸ್ವಚ್ಛತೆ ಯಾವ ಮಟ್ಟದಲ್ಲಿತ್ತು ಎಂಬುದು ಗೊತ್ತಿಲ್ಲ, ನಾನು ಬಂದಮೇಲೆ ಮೇಲೆ ಪ್ರತಿದಿನ ಬೆಳಗ್ಗೆ 6 ರಿಂದ 8ರತನಕ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹಂತಹಂತವಾಗಿ ಚರಂಡಿ ಸ್ವಚ್ಛತೆ ಮಾಡಿಸಲಾಗುತ್ತಿದೆ. ಸ್ವಚ್ಛತೆ ಮೇಸ್ತ್ರಿಗಳಿಗೆ ಜವಾಬ್ದಾರಿ ನೀಡಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಆ ಸಂದರ್ಭದಲ್ಲಿ ಸದಸ್ಯರಿಗೂ ತಿಳಿಸಲು ಸೂಚಿಸಲಾಗಿದೆ. ಕಾರ್ಮಿಕರಿಂದ ಬೆಳಗ್ಗೆ ಹಾಜರಾತಿ ತೆಗೆದುಕೊಂಡು ಕೆಲಸಕ್ಕೆ ಕಳುಹಿಸಲಾಗುತ್ತಿತ್ತು, ಕೆಲಸದ ನಂತರವು ಹಾಜರಾತಿ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ಅದು ಆಗುತ್ತಿಲ್ಲ. ರಾಜ್ಯದಲ್ಲಿ ಎಲ್ಲೂ ತಿಂಗಳ 2ನೇ ಮತ್ತು 4ನೇ ಶನಿವಾರ ರಜೆ ನೀಡಿಲ್ಲ. ಆದರೆ ಇಲ್ಲಿ ಮಾತ್ರ ನೀಡಲಾಗುತ್ತಿತ್ತು ಅದನ್ನು ರದ್ದುಗೊಳಿಸಲಾಗಿದೆ ಎಂದರು.

* ನಗರಸಭೆ ಅಸ್ತಿಗಳ ಕುರಿತು ನಿರ್ಲಕ್ಷ್ಯ ಸಲ್ಲದು

ಸದಸ್ಯ ಪ್ರವಿಣ್​ ಗೌಡ ಮಾತನಾಡಿ, ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದ್ದ ನಗರಸಭೆಯ ಅಸ್ತಿಯ ಸಂಬಂಧ ದಾಖಲೆಗಳ ಸಂಬಂಧ ಹುಡುಕಿಕೊಟ್ಟರು, ನಗರಸಭೆಯವರು ಅದನ್ನು ರಕ್ಷಣೆ ಮಾಡುವ ಕೆಲಸ ಮಾಡಿಲ್ಲ. ಖಾದ್ರಿಪುರ ಸರ್ವೇ ನಂ.29ರ ಪೈಕಿ ಜಮೀನು ಸಂಬಂಧ ಇದುವರೆಗೂ ಏನಾಗಿದೆ ಎಂಬುದು ಗೊತ್ತಿಲ್ಲ, ಅಸ್ತಿಗಳ ಸಂಬಂಧ ಅಧಿಕಾರಿಗಳಲ್ಲಿ ಯಾಕೆ ಗಂಭೀರತೆಯಿಲ್ಲ, ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಿ ನಗರಸಭೆಪರವಾಗಿ ಆದೇಶವಾಗುವಂತೆ ಕ್ರಮವಹಿಸಿ ಎಂದು ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net