ತೆರಿಗೆ ವಸೂಲಿ, ಆಸ್ತಿಗಳ ರಕ್ಷಣೆಗೆ ನಿರ್ಲಕ್ಷ್ಯ

klr cmc meeting
ಕೋಲಾರ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪುಸ್ತುಗಳನ್ನು ಅಧ್ಯೆ ಲಕ್ಷಿ$್ಮದೇವಮ್ಮ ಅವರಿಗೆ ತೋರಿಸುತ್ತಿರುವುದು.
Published on

ಕೋಲಾರ: ವಿವಿಧ ರೀತಿಯ ತೆರಿಗೆ ವಸೂಲಿ ಹಾಗೂ ನಗರಸಭೆ ಆಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ಪ್ರಗತಿ ಸಾಧಿಸದೆ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯನ್ನು ನಗರಸಭೆ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.

ಕೋಲಾರ ನಗರಸಭೆ ಆವರಣದಲ್ಲಿ ಬುಧವಾರ ಅಧ್ಯೆ ಲಕ್ಷಿ$್ಮದೇವಮ್ಮ ಅಧ್ಯಕ್ಷತೆಯಲ್ಲಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ವಿಷಯವಾರು ಚರ್ಚೆ ನಡೆಯುತ್ತಿತ್ತು. ಆಗ ತೆರಿಗೆ ವಿಚಾರ, ನಗರಸಭೆ ಆಸ್ತಿಗಳ ವಿಚಾರವನ್ನು ಸದಸ್ಯರು ಕೈಗೆತ್ತಿಕೊಂಡಾಗ ಬಿಸಿ ಬಿಸಿ ಚರ್ಚೆಯಾಯಿತು.

ಸದಸ್ಯ ಅಂಬರೀಶ್​ ಮಾತನಾಡಿ, ನಗರಸಭೆಗೆ ಸಾಕಷ್ಟು ಆದಾಯ ಮೂಲಗಳಿದ್ದರೂ ಸಿಬ್ಬಂದಿ ಸಮರ್ಪಕವಾಗಿ ವಸೂಲಿ ಮಾಡುತ್ತಿಲ್ಲ. ಸಂಪನ್ಮೂಲ ಕ್ರೂಡಿಕರಿಸಿಲ್ಲ ಎಂದರೆ ಅಪಹಾಸ್ಯಕ್ಕೆ ಒಳಗಾಗಬೇಕಾಗುತ್ತದೆ ಅಧ್ಯಕ್ಷರೆ ಎಂದು ಎಚ್ಚರಿಸಿದರು.

ಬಿಲ್​ ಕಲೆಕ್ಟರ್​ಗಳ ಕೆಲಸ ಖಾತೆ ಮಾಡಲು ಸಿಮೀತ ಅಷ್ಟೇನಾ..?, ಕರ್ತವ್ಯದಲ್ಲಿ ಬೇಜವಬ್ದಾರಿ ಪರಮಾವಾದಿ ತೋರಬಾರದು. ಆದಾಯ ಬರುವ ವಿಚಾರದಲ್ಲಿ ಯಾರದೇನೂ ತಕರಾರಿಲ್ಲ, ಪ್ರತಿ ಸಭೆಯಲ್ಲೂ ಚರ್ಚೆ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ತೆರಿಗೆ ವಸೂಲಿಗೆ ಹೋಗುತ್ತಿಲ್ಲ, ಸೇವೆ ಕೊಡ್ತಿರೊದು ನಿಜ ಆದರೆ ಯಾಕೆ ವಸೂಲಿ ಮಾಡಬಾರದು ಎಂದು ಪ್ರಶ್ನಿಸಿದರು.

ಮನೆ ನಿರ್ಮಿಸಿಕೊಳ್ಳುವವರು ಕಡ್ಡಾಯವಾಗಿ ಪರವಾನಗಿ ತೆಗೆದುಕೊಳ್ಳಬೇಕು, ಯುಜಿಡಿ, ನೀರಿನ ಸಂಪರ್ಕ ಎಲ್ಲ ಸೌಲಭ್ಯ ತೆಗೆದುಕೊಳ್ಳುತ್ತಾರೆ. ಆದಾಯ ಬಂದರೆ ತಾನೇ ವಾಲ್​ಮನ್​ಗಳಿಗೆ ಎಲ್ಲ ಸಂಬಂಧ ಮಾಡಲು ಸಾಧ್ಯ. ಯಾವ ತಿಂಗಳಾದರೂ ಬಿಲ್​ ಕಲೆಕ್ಟರ್​ ಸಂಬಳ ಬಾಕಿ ನಿಂತಿದಿಯಾ, ಬದ್ಧತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಎಸ್​.ಪ್ರಸಾದ್​, ಬಿಲ್​ ಕಲೆಕ್ಟರ್​ಗಳನ್ನು ಪ್ರತಿ ವಾರ್ಡಿಗೂ ಕಳುಹಿಸಿ ತೆರಿಗೆ ವಸೂಲಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಧ್ವನಿಗೂಡಿಸಿದ ಸದಸ್ಯ ರಾಕೇಶ್​, ಟ್ರೇಡ್​ ಲೈಸನ್ಸ್​ ತೆರಿಗೆಯೂ ಸಹ ಸೋರಿಕೆಯಾಗುತ್ತಿದೆ. ಸಮರ್ಪಕವಾಗಿ ವಸೂಲಿಯಾಗುತ್ತಿಲ್ಲ. ಸಿಬ್ಬಂದಿಯೇ ನಗರಸಭೆಗೆ ವಂಚನೆ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಆರೋಗ್ಯ ನಿರೀಕ್ಷಕ ನವಾಜ್​ ಉತ್ತರಿಸಿ, ನಗರದಲ್ಲಿ 6,000ಕ್ಕೂ ಹೆಚ್ಚು ವಾಣಿಜ್ಯ ಅಂಗಡಿಗಳಿವೆ, ಪರವಾನಗಿ ಸಲ್ಲಿಕೆಯಾಗಿರುವ 120 ಅರ್ಜಿಗಳನ್ನು ವಿಲೇ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದಕ್ಕೆ ಗರಂ ಆದ ಸದಸ್ಯರು ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಡಿ, ಸಮರ್ಪಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯೆ ಸಂಗೀತಾ, ಪೌರಾಯುಕ್ತ ಎಸ್​.ಪ್ರಸಾದ್​ ಉಪಸ್ಥಿತರಿದ್ದರು.

* ಚಿತ್ತು ಮಾಡಿರುವ ದಾಖಲೆ ಪ್ರದರ್ಶನ

ಸದಸ್ಯರಾದ ಮಂಜುನಾಥ್​, ಸೂರಿ ಮಾತನಾಡಿ, ಎಂಜಿ ರಸ್ತೆ ಸಮೀಪದ ಕನ್ಸರ್ವೇನ್ಸಿ ರಸ್ತೆಯನ್ನು ಅಧಿಕಾರಿಗಳು ಖಾಸಗಿಯವರಿಗೆ ಖಾತೆ ಮಾಡಿದೀರಾ, ಯಾಕೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿ ನಗರಸಭೆ ಆಸ್ತಿ ಎಂದು ಸಾಬೀತುಪಡಿಸಲು ಆಗಲಿಲ್ಲವೇ, ಯಾರು ನಗರಸಭೆ ವಕೀಲರು ಎದುರುದಾರರೊಂದಿಗೆ ಶಾಮೀಲಾಗಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಪುಸ್ತಕಗಳನ್ನು ತರಿಸಿ ನಮೂದು ಮಾಡಿರುವ ವಿಚಾರ ಚಿತ್ತು ಮಾಡಿರುವುದನ್ನು ಪ್ರದರ್ಶಿಸಿದರು. ಹಿಂದೆ ದಾಖಲೆಗಳಲ್ಲಿ ರಸ್ತೆ ಅಂತ ತೋರಿಸಿದೀರಾ, ಯಾರೊ ಒಬ್ಬರು ಕೋರ್ಟ್​ಗೆ ಅರ್ಜಿ ಸಲ್ಲಿಸಿ ಜಾಗ ನಮ್ಮುದು ಅಂದ ತಕ್ಷಣ ವಿಭಜನೆ ಮಾಡಿ ಖಾತೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು?, ಚಂಪಕ್​ ಕಾಂಪ್ಲೆಕ್ಸ್​ ಹಿಂದೆ ರಸ್ತೆಯಲ್ಲಿ ಕಟ್ಟಡ ನಿಮಾರ್ಣ ಮಾಡಲಾಗಿದೆ. ದಾಖಲೆಗಳಲ್ಲಿ ನಗರಸಭೆಯ ರಸ್ತೆ ಎಂದು ನಮೂದಾಗಿದೆ. ದಾಖಲೆಗಳಲ್ಲಿ 1993-&94ರಲ್ಲಿ ನಗರಸಭೆಗೆ ಸೇರಿದ್ದು ಅಂತನೂ ಇದೆ, ಆದರೆ ಸಹಿಯಿಲ್ಲ. ದಾಖಲೆಗಳು ಇದ್ದರೂ ನ್ಯಾಯಾಲಯಕ್ಕೆ ಯಾಕೆ ಸಲ್ಲಿಸಲಿಲ್ಲ. ನ್ಯಾಯಾಲಯವನ್ನು ದಿಕ್ಕು ತಪ್ಪಿಸಲಾಗಿದೆ ಎಂದು ಗರಂ ಆದರು.

2014ರಲ್ಲಿ ನಗರಸಭೆಯಿಂದ 1.50 ಲಕ್ಷ ರೂ. ವೆಚ್ಚ ಮಾಡಿ ಸಿಸಿ ರಸ್ತೆ ಸಹ ನಿಮಾರ್ಣ ಮಾಡಲಾಗಿದೆ. ಅದಾಗಿಯೂ ಇಷ್ಟ ಬಂದಹಾಗೆ ಖಾತೆ ಮಾಡಿದರೆ ಏನರ್ಥ. ಜಿಲ್ಲಾಧಿಕಾರಿಗಳು ಸ್ವಯಂ ದೂರು ದಾಖಲಿಸಿಲೊಂಡು ಖಾತೆ ರದ್ದು ಪಡಿಸಬೇಕು, ಜಾಗ ಕಬಳಿಸುವಲ್ಲಿ ಯಾರ್ಯಾರ ಪಾತ್ರ ಇದೆ ಎಲ್ಲರ ಮೇಲೂ ಮತ್ತು ಹಿಂದಿನ ಪೌರಾಯುಕ್ತ ಶಿವಾನಂದ, ಕಂದಾಯ ಅಧಿಕಾರಿ ಅನಿಲ್​, ಬಿಲ್​ ಕಲೆಕ್ಟರ್​ ಅಭಿಷೆೇಕ್​ ಮಾನೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಎಸ್​.ಪ್ರಸಾದ್​, ಹೈಕೋಟ್​ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತರಬೇಕು. ಆನಂತರ ದೂರು ದಾಖಲಿಸಿ ಕ್ರಮವಹಿಸಲಾಗುವುದು ತಿಳಿಸಿದರು.

* ನಗರಸಭೆ ಆಸ್ತಿಗಳ ಪಟ್ಟಿ ಪ್ರಕಟಿಸಿ

ನಗರಸಭೆ ಸ್ವತ್ತುಗಳು ಮತ್ತು ಆಶ್ರಯ ಸಮಿತಿಗೆ ಕ್ರಯ ಆಗಿರುವ ಜಮೀನುಗಳ ಸಂಬಂಧ ಮೂಲ ದಾಖಲೆಗಳು ಕಾಣೆ ಆಗಿವೆ ಎಂದರೆ ಏನರ್ಥ, ಇದಕ್ಕೆ ಕಾರಣರಾಗಿರುವವರ ವಿರುದ್ಧ ದೂರು ದಾಖಲಿಸಬೇಕು, ಒಂದು ವಾರದಲ್ಲಿ ನಗರಸಭೆಯ ಆಸ್ತಿಗಳ ಪಟ್ಟಿ ಬಿಡುಗಡೆ ಮಾಡಬೇಕು ಸದಸ್ಯ ಪ್ರವಿಣಗೌಡ ಒತ್ತಾಯಿಸಿದರು. ಕಡತಗಳ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಜೀವನ್​ನನ್ನು ಕರೆಸಿ ಏನಾಯಿತು ಎಂದು ಪ್ರಶ್ನಿಸಿದಾಗ, ಇದಕ್ಕೆಲ್ಲ ದಾಖಲೆಗಳು ಇವೆ ಎಂದು ಉತ್ತರಿಸಿದ, ದಾಖಲೆ ಇರೊದಲ್ಲ, ಮೂಲ ದಾಖಲೆಗಳು ಇವೆಯೇ ಎಂದು ಸಮರ್ಪಕವಾಗಿ ಉತ್ತರ ನೀಡಲು ತಡಬಡಿಸಿದ. ಇದಕ್ಕೆ ಆಕ್ರೋಶಗೊಂಡ ಸದಸ್ಯ ಪ್ರವಿಣ್​ ಗೌಡ ಮೊದಲು ಜೀವನ್​ ಮೇಲೆ ದೂರು ದಾಖಲಿಸಬೇಕು ಎಂದರು. ಈ ಮಧ್ಯ ಪ್ರವೇಶ ಮಾಡಿದ ಅಪ್ಸರ್​, ಬಡಪಾಯಿ ಮೇಲೆ ಅಲ್ಲ ದೂರು ದಾಖಲಿಸುವುದು ಎಂದು ಪರವಹಿಸಿಕೊಂಡು ಮಾತನಾಡಿದರು. ಇದರಿಂದ ಇತರೆ ಸದಸ್ಯರು ಗರಂ ಆದರು. ನದಕ್ಕೆ ಪ್ರತಿಕ್ರಿಯಿಸಿದ ಅಧ್ಯೆ ನಗರಸಭೆ ಆಸ್ತಿ, ಆಶ್ರಯ ಸಮಿತಿಗೆ ಆಗಿರುವ ಜಮೀನುಗಳನ್ನು ರಕ್ಷಣೆ ಮಾಡಲು ಸಮಿತಿ ರಚನೆ ಮಾಡಲಾಗುವುದು, ಪ್ರತಿ 10 ದಿನಕ್ಕೊಮ್ಮೆ ಸಭೆ ಕರೆದು ಬಡವರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net