ಎನ್​ಟಿಎ ವೆಬ್‌ಸೈಟ್‌ನಲ್ಲಿ ನೀಟ್​-ಯುಜಿ ಫಲಿತಾಂಶ.. ಆನ್​ಲೈನ್​ನಲ್ಲಿ ಹೀಗೆ ಪರಿಶೀಲಿಸಬಹುದು..

neet 2
Published on

ನವದೆಹಲಿ: ಈ ವರ್ಷ ನೀಟ್​- ಯುಜಿ ಮುಖ್ಯ ಪರೀಕ್ಷೆಯು ಮೇ 5 ರಂದು ನಡೆದಿದ್ದು, ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ exam.nta.ac.in/NEET/ ನಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಫಲಿತಾಂಶಗಳನ್ನು neet.ntaonline.in ನಲ್ಲಿಯೂ ಪರಿಶೀಲಿಸಬಹುದಾಗಿದೆ.

ಈ ವರ್ಷ ನೀಟ್​ ಯುಜಿ ಪರೀಕ್ಷೆಯನ್ನು ಮೇ 5 ರಂದು 4750 ಕೇಂದ್ರಗಳಲ್ಲಿ ನಡೆಸಲಾಯಿತು. ಫಲಿತಾಂಶಗಳನ್ನು ಜೂನ್ 4, 2024 ರಂದು ಘೋಷಿಸಲಾಯಿತು. ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1563 ಅಭ್ಯರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿದ್ದರು.

ಇದನ್ನೂ ಓದಿ:

ಫಲಿತಾಂಶವನ್ನು ಶನಿವಾರ ಮಧ್ಯಾಹ್ನ 12 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಫಲಿತಾಂಶವನ್ನು ನಗರ, ಕೇಂದ್ರವಾರು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಆನ್‌ಲೈನ್‌ನಲ್ಲಿ ಅಂಕಗಳನ್ನು ಹೀಗೆ ಪರಿಶೀಲಿಸಬಹುದು.

ಎನ್​ಟಿಎ-ನೀಟ್​ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಮುಖಪುಟದಲ್ಲಿ ಲಭ್ಯವಿರುವ ನೀಟ್​ ಯುಜಿ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಅಪ್ಲೇ ಕ್ಲಿಕ್ ಮಾಡಿದರೆ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಫಲಿತಾಂಶ ಮತ್ತು ಡೌನ್‌ಲೋಡ್ ಪುಟವನ್ನು ಪರಿಶೀಲಿಸಿ ಮುಂದಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಪಡೆದುಕೊಳ್ಳಬಹುದಾಗಿದೆ.

ಜುಲೈ 18 ರಂದು, ಸುಪ್ರೀಂ ಕೋರ್ಟ್ ಜುಲೈ 20, 12 ರೊಳಗೆ ನೀಟ್​ ಫಲಿತಾಂಶಗಳನ್ನು ಪ್ರಕಟಿಸಲು ಎನ್​ಟಿಎ ಗೆ ಆದೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net