Neenasam Sathish - ಒಟಿಟಿಯಲ್ಲಿ ಅಶೋಕನ ದಿಗ್ವಿಜಯ

The Raise of Ashoka
The Raise of Ashoka
Published on
Neenasam Sathish -
"ದ ರೈಸ್​ ಆಫ್​ ಅಶೋಕ' ಸಿನಿಮಾ "ದ ರೈಸ್​ ಆಫ್​ ಸತೀಶ್​ ನೀನಾಸಂ'ಗೂ ಸಾಕ್ಷಿಯಾಗುತ್ತಿದೆ. ಸತೀಶ್​ ಕರಿಯರ್​ನಲ್ಲೇ ಅತಿ ದೊಡ್ಡ ಬಜೆಟ್​ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದ್ದ "ದ ರೈಸ್​ ಆಫ್​ ಅಶೋಕ' ಫೆ. 27ರಂದು ರಿಲೀಸ್​ ಆಗಿತ್ತು. ಚಿತ್ರಕ್ಕೆ ಥಿಯೇಟರ್​ಗಳಲ್ಲಿ ಉತ್ತಮ ರೆಸ್ಪಾನ್ಸ್​ ಸಿಕ್ಕಿತ್ತು. ಇದೀಗ ಸಿನಿಮಾ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಿ 100 ದಿನಗಳ ನಂತರ, ಒಟಿಟಿಯಲ್ಲಿ ರಿಲೀಸ್​ ಆಗಿದೆ. ಹೌದು, ಕಳೆದ ಜೂ. 5ರಂದು ಸಿನಿಮಾ ಸನ್​ ನೆಕ್ಸ್ಟ್​ನಲ್ಲಿ ರಿಲೀಸ್​ ಆಗಿದ್ದು, ಒಂದು ವಾರದಲ್ಲಿ ದಾಖಲೆ ಬಾರಿ ವೀಕ್ಷಣೆ ಕಂಡಿದೆ. ಈ ಬಗ್ಗೆ ವಿಜಯವಾಣಿ ಜತೆ ಸಂತಸ ಹಂಚಿಕೊಳ್ಳುವ ಸತೀಶ್​ ನೀನಾಸಂ, "ಹೋರಾಟದ ಕಥೆಯನ್ನು ಹೆಚ್ಚು ಜನ ನೋಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಥಿಯೇಟರ್​ ಬಳಿಕ ಇದೀಗ ಒಟಿಟಿಯಲ್ಲಿ "ದ ರೈಸ್​ ಆಫ್​ ಅಶೋಕ' ಬಿಡುಗಡೆಯಾಗಿದ್ದು, ಲಾಂತರ ಸಂಖ್ಯೆಯಲ್ಲಿ ವೀಸಲ್ಪಡುತ್ತಿದ್ದೆ. ಸನ್​ ನೆಕ್ಸ್ಟ್​ ಒಟಿಟಿಯಲ್ಲಿ ಅತಿಹೆಚ್ಚು ವೀವ್ಸ್​ ಕಂಡ ಸಿನಿಮಾಗಳಲ್ಲಿ ಸಾಲಿಗೆ ನಮ್ಮ ಚಿತ್ರ ಕೇವಲ ಒಂದೇ ವಾರದಲ್ಲಿ ಸೇರಿರುವುದು ಖುಷಿ ನೀಡಿದೆ' ಎನ್ನುತ್ತಾರೆ. ಚಿತ್ರದಲ್ಲಿ ಸತೀಶ್​ಗೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಬಿ. ಸುರೇಶ್​, ಸಂಪತ್​ ಮೈತ್ರೇಯ, ಗೋಪಾಲಕೃಷ್ಣ ದೇಶಪಾಂಡೆ, ಯಶ್​ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. "ದ ರೈಸ್​ ಆಫ್​ ಅಶೋಕ' 70ರ ಕಾಲಟ್ಟದ ಕಥೆಯಾಗಿದ್ದು, ಕ್ರಾಂತಿಕಾರಿ ಯುವಕನ ಹೋರಾಟ, ಬದುಕು, ಸಂರ್ಷಗಳ ಸುತ್ತ ಸಾಗುತ್ತದೆ.

ಹುಟ್ಟುಹಬ್ಬಕ್ಕೆ ಮೊದಲ ಹಾಡು

ಇದೇ ತಿಂಗಳ 20ರಂದು ಶನಿವಾರ ನಟ ಸತೀಶ್​ ನೀನಾಸಂ 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಂದು ಅವರು ನಟಿಸುತ್ತಿರುವ "ಅಯೋಗ್ಯ 2' ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. 2018ರ ಹಿಟ್​ "ಅಯೋಗ್ಯ' ಸಿನಿಮಾದ ಸೀಕ್ವೆಲ್​ ಆಗಿದ್ದು, ಸತೀಶ್​, ನಾಯಕಿ ರಚಿತಾ ರಾಮ್​ ಮತ್ತು ನಿರ್ದೇಶಕ ಮಹೇಶ್​ ಎಂಟು ವರ್ಷಗಳ ನಂತರ ಮತ್ತೆ ಒಂದಾಗಿರುವುದು ನಿರೀಕ್ಷೆ ಹೆಚ್ಚಿಸಿದೆ. ಸತೀಶ್​ ಹುಟ್ಟುಹಬ್ಬದಂದು ಡುಯೆಟ್​ ಸಾಂಗ್​ ಬಿಡುಗಡೆಯಾಗಲಿದ್ದು, "ಏನಮ್ಮಿ'ಯಂತೆಯೇ ಹಿಟ್​ ಲಿಸ್ಟ್​ ಸೇರುವ ನಿರೀೆ ಚಿತ್ರತಂಡದ್ದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net