ಮೊದಲ ಹೆರಿಗೆ ವೇಳೆ ಹೊಟ್ಟೆಯಲ್ಲಿ ಬಿಟ್ಟಿದ್ದ ಸೂಜಿ ಎರಡನೇ ಡೆಲಿವರಿಯಲ್ಲಿ ಪತ್ತೆ; ವೈದ್ಯರ ಅಚಾತುರ್ಯದ ಕುರಿತು ಮಹಿಳೆ ಹೇಳಿದ್ದಿಷ್ಟು | Negligence

dk - 2025-01-07T191428.058
Published on

ನವದೆಹಲಿ: ಮೊದಲ ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ(Negligence) ಹೊಟ್ಟೆಯಲ್ಲಿ ಸೂಜಿಯೊಂದನ್ನು ಅಕಸ್ಮಿಕವಾಗಿ ಹಾಗೆ ಬಿಡಲಾಗಿದೆ. ಬಳಿಕ ಎರಡನೇ ಹೆರಿಗೆಯಲ್ಲಿ ಸೂಜಿಯನ್ನು ಹೊರ ತೆಗೆದ ಅತಂಕಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.

ಮಧ್ಯಪ್ರದೇಶದ ರೇವಾ ಪ್ರದೇಶದಿಂದ ಹೊಟ್ಟೆ ನೋವು ಚಿಕಿತ್ಸೆಗೆ ಬಂದಿದ್ದ ಮಹಿಳೆ, ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯರು ತನ್ನ ಮೊದಲ ಹೆರಿಗೆಯ ಸಮಯದಲ್ಲಿ ತನ್ನ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಯ ಸೂಜಿಯನ್ನು ಬಿಟ್ಟಿದ್ದಾರೆ.ಇದು ನವಜಾತ ಶಿಶುವಿಗೆ ಗಾಯಗಳನ್ನು ಉಂಟುಮಾಡುತ್ತದೆ ಎಂದು ಆರೋಪ ಮಾಡಿದ್ದಾಳೆ.

ಎರಡನೇ ಹೆರಿಗೆ ಸಮಯದಲ್ಲಿ ಪತ್ತೆ

ರೇವಾದ ಘೋಘರ್ ಪ್ರದೇಶದ ನಿವಾಸಿ ಹಿನಾ ಖಾನ್ 2023ರ ಮಾರ್ಚ್ 5ರಂದು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮೊದಲ ಹೆರಿಗೆಗೆ ಒಳಗಾಗಿದ್ದಾರೆ. ಆರಂಭದಲ್ಲಿ ತಾಯಿ ಮತ್ತು ಮಗು ಇಬ್ಬರೂ ಉತ್ತಮ ಆರೋಗ್ಯದಿಂದ ಬಿಡುಗಡೆಯಾಗಿದ್ದರು. ಮನೆಗೆ ಹಿಂದಿರುಗಿದ ಕೆಲ ದಿನಗಳ ಬಳಿಕ ಹಿನಾ ನಿರಂತರ ಹೊಟ್ಟೆ ನೋವನ್ನು ಅನುಭವಿಸಲು ಪ್ರಾರಂಭಿಸಿದ್ದಾಳೆ. ಪುನ ವೈದ್ಯರ ಬಳಿಗೆ ಬಂದಾಗ ಹೊಲಿಗೆ ಸಂಬಂಧಿಸಿದ ನೋವು ಎಂದು ಹೇಳಿ ಮನೆಗೆ ಕಳುಹಿಸಿದ್ದಾರೆ.

ಎರಡು ವರ್ಷಗಳ ನಂತರ, ಜಿಲ್ಲಾಸ್ಪತ್ರೆಯಲ್ಲಿ ಆಕೆಯ ಎರಡನೇ ಹೆರಿಗೆ ಸಂದರ್ಭದಲ್ಲಿ ಆಘಾತಕಾರಿ ಸತ್ಯ ಹೊರಬಿದ್ದಿದೆ. ವೈದ್ಯರು ಹಿನಾ ಅವರ ಹೊಟ್ಟೆಯೊಳಗೆ ಶಸ್ತ್ರಚಿಕಿತ್ಸಾ ಸೂಜಿಯನ್ನು ಎಂದು ವೈದ್ಯರು ಪತ್ತೆ ಹಚ್ಚಿದ್ದಾರೆ. ಶಿಶುವಿನ ದೇಹದಾದ್ಯಂತ ಅನೇಕ ಗಾಯಗಳನ್ನು ಉಂಟುಮಾಡಿದೆ. ಈ ಹಿನ್ನೆಲೆ, ಐಸಿಯುನಲ್ಲಿ ದಾಖಲಿಸಲಾಗಿದೆ. ಬಳಿಕ ಮಹಿಳೆ ಮೊದಲ ಹೆರಿಗೆ ಮಾಡಿದ ವೈದ್ಯರ ಬಗ್ಗೆ ಆರೋಪ ಮಾಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net