ಬರೋಬ್ಬರಿ 36 ವರ್ಷಗಳ ಬಳಿಕ ಪೊಲೀಸ್​ ಬಲೆಗೆ ಬಿದ್ದ ನೆಕ್ಲೇಸ್​​ ಕದ್ದು ತಲೆಮರೆಸಿಕೊಂಡಿದ್ದ ಖದೀಮ!

Necklace theft
Published on

ತಿರುವನಂತಪುರಂ: ನೆಕ್ಲೇಸ್​ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಖದೀಮನನ್ನು ಬರೋಬ್ಬರಿ 36 ವರ್ಷಗಳ ಬಳಿಕ ಬಂಧನ ಮಾಡಿರುವ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.

ಬಂಧಿತ ಖದೀಮನನ್ನು ಸಂತೋಷ್​ (57) ಎಂದು ಗುರುತಿಸಲಾಗಿದೆ. ಈತ ಕೇರಳದ ಪಪ್ಪನಂಕೊಡೆ ಮೂಲದ ನಿವಾಸಿ. ನೆಕ್ಲೇಸ್​ ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು ಪೊಲೀಸರ ಸಂಪರ್ಕಕ್ಕೆ ಸಿಗದೇ 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಂತೋಷ್​ನನ್ನು ಪರಸ್ಸಾಲ ಪೊಲೀಸರು ಬಂಧಿಸಿದ್ದಾರೆ.

ಉದಿಯಂಕುಲಂಗರಾ ಸ್ಟೇನ್ಲಿ ಆಸ್ಪತ್ರೆಯ ಉದ್ಯೋಗಿಯೊಬ್ಬರ ಬಳಿ 12 ಗ್ರಾಂ ನೆಕ್ಲೇಸ್​ ಕದ್ದ ಆರೋಪದ ಮೇಲೆ 1988ರಲ್ಲಿ ಸಂತೋಷ್​ನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಜಾಮೀನು ಪಡೆದ ಬಳಿಕ ಕಾಣೆಯಾಗಿದ್ದನು. ಸಂಪರ್ಕ ಮಾಡಲು ಪೊಲೀಸರು ಎಷ್ಟೇ ಪ್ರಯತ್ನಿಸಿದರು. ಆತನ ಸುಳಿವು ಸಿಗಲೇ ಇಲ್ಲ. ಅನೇಕ ಸ್ಥಳಗಳಲ್ಲಿ ಆತನಿಗಾಗಿ ಜಾಲಾಡಿದರೂ ಕೂಡ ಪರಸ್ಸಾಲ ಪೊಲೀಸರಿಗೆ ಆತ ಸಿಗಲೇ ಇಲ್ಲ.

36 ವರ್ಷಗಳ ಬಳಿಕ ಕೊನೆಗೂ ಖದೀಮ ಸಂತೋಷ್​ ಸಿಕ್ಕಿಬಿದ್ದಿದ್ದಾನೆ. ಆತನ ವಿರುದ್ಧ ವಿವಿಧ ಪೊಲೀಸ್​ ಠಾಣೆಗಳಲ್ಲಿ ಸುಮಾರು 50ಕ್ಕೂ ಅಧಿಕ ಕಳ್ಳತನ ಪ್ರಕರಣಗಳಿವೆ ಎಂದು ಶಂಕಿಸಲಾಗಿದೆ. ಬಂಧಿತ ಸಂತೋಷ್​ ವಿಚಾರಣೆ ನಡೆಯುತ್ತಿದ್ದು, ಕೋರ್ಟ್​ ಮುಂದೆ ಹಾಜರುಪಡಿಸಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net