ಪರ್ತಕರ್ತರಿಗೆ ಸಿಗಬೇಕು ಅಗತ್ಯ ಸೌಕರ್ಯ

Health Checkup Camp
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಡಿಸಿ ಗುರುದತ್ತ ಹೆಗಡೆ ಉದ್ಘಾಟಿಸಿದರು. ಕೆ.ವಿ.ಶಿವಕುಮಾರ್, ಎನ್.ರವಿಕುಮಾರ್, ವಿ.ಟಿ.ಅರುಣ್, ದೀಪಕ್ ಸಾಗರ್, ಕೆ.ಆರ್.ಸೋಮನಾಥ್, ಡಾ. ಶೈಲೇಶ್, ಡಾ. ಅಭಿಲಾಷ್ ಇದ್ದರು.
Published on

ಶಿವಮೊಗ್ಗ: ಪತ್ರಕರ್ತರು ಪ್ರಜಾಪ್ರಭುತ್ವದ ಅಂಗ. ಆದರೆ ಅವರಿಗೆ ಇಲ್ಲಿಯವರೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬೇಸರ ವ್ಯಕ್ತಪಡಿಸಿದರು.

ನಗರದ ಶಿವಮೂರ್ತಿ ವೃತ್ತ ಸಮೀಪದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಭಾನುವಾರ ಜಿಲ್ಲೆಯ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪತ್ರಿಕಾ ಕ್ಷೇತ್ರ ಕೌಶಲ ವೃತ್ತಿ. ಅವರಿಗೆ ಸೇವಾ ಭದ್ರತೆ, ಪಿಂಚಣಿ, ಆರ್ಥಿಕ ಭದ್ರತೆ, ಸೌಕರ್ಯ ಸಿಗಬೇಕಿದೆ. ಅದು ಸಾಧ್ಯವಾದರೆ ಇನ್ನೂ ಹೆಚ್ಚಿನ ಯುವಕರನ್ನು ಈ ಕ್ಷೇತ್ರಕ್ಕೆ ಕರೆತರಬಹುದು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ರಾಜ್ಯ ನಿರ್ದೇಶಕ ಎನ್.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ವೈದ್ಯರಾದ ಡಾ. ಶೈಲೇಶ್, ಡಾ.ಅಭಿಲಾಷ್ ಉಪಸ್ಥಿತರಿದ್ದರು. 90ಕ್ಕೂ ಅಧಿಕ ಪತ್ರಕರ್ತರು ಶಿಬಿರದ ಪ್ರಯೋಜನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net