ಎನ್‌ಡಿಆರ್‌ಎಫ್ ತಂಡ ಆಗಮನ

ndrf
Published on

ಮಡಿಕೇರಿ:

ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗುತ್ತಿದ್ದಂತೆಯೇ ಮುನ್ನೆಚ್ಚರಿಕೆ ಕ್ರಮವಾಗಿ ಮಡಿಕೇರಿಗೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ. ಸಾಮಾನ್ಯವಾಗಿ ಮುಂಗಾರು ಆರಂಭವಾದ ನಂತರ ಜೂನ್‌ನಲ್ಲಿ ಬರುತ್ತಿದ್ದ ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ ಯೋಧರು ಈ ಬಾರಿ ಅವಧಿಗೆ ಮುಂಚಿತವಾಗಿ ಕೊಡಗಿನಲ್ಲಿ ಬೀಡುಬಿಟ್ಟಿದ್ದಾರೆ. 30 ಸಿಬ್ಬಂದಿ ಒಳಗೊಂಡಿರುವ ಈ ತಂಡ ತುರ್ತು ಸಂದರ್ಭಗಳಿಗೆ ಅವಶ್ಯಕತೆ ಇರುವ ಎಲ್ಲಾ ಸಲಕರಣೆಗಳೊಂದಿಗೆ ಮಳೆಗಾಲದ ಅನಾಹುತಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ.

ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಂಡುಬರುತ್ತಿದ್ದು, ಮುಂಗಾರು ಮಳೆ ನೆನಪಿಸುವ ರೀತಿಯಲ್ಲಿ ತೀವ್ರತೆ ಪಡೆದುಕೊಂಡಿದೆ. ಕಾವೇರಿ, ಲಕ್ಷö್ಮಣತೀರ್ಥ, ಹಾರಂಗಿ, ಹೇಮಾವತಿ ಸೇರಿದಂತೆ ಜಿಲ್ಲೆಯ ನದಿ, ಕೊಳ್ಳಗಳು ಮೇ ತಿಂಗಳಿನಲ್ಲೇ ತುಂಬಿ ಹರಿಯುತ್ತಿದೆ. ಅಲ್ಲಲ್ಲಿ ಮರ ಬಿದ್ದು ಸಾಕಷ್ಟು ಅನಾಹುತಗಳೂ ಆಗಿದೆ. ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚ್ಚಾದರೆ ಅನಾಹುತದ ಪ್ರಮಾಣವೂ ಜಾಸ್ತಿ ಆಗುವ ಸಾಧ್ಯತೆ ಇದ್ದು, ಸಂಕಷ್ಟದ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಮಧ್ಯೆ ಮಂಗಳವಾರ (ಮೇ27) ಎನ್‌ಡಿಆರ್‌ಎಫ್ ತಂಡ ಕೂಡ ಕೊಡಗಿಗೆ ಆಗಮಿಸಿದೆ.

ಕಮಾಂಡರ್ ಹರಿಶ್ಚಂದ್ರ ಪಾಂಡೆ ನೇತೃತ್ವದ 30 ಸಿಬ್ಬಂದಿ ಒಳಗೊಂಡ ಎನ್‌ಡಿಆರ್‌ಎಫ್ ತಂಡ ಮಡಿಕೇರಿ ಮೈತ್ರಿ ಹಾಲ್‌ನಲ್ಲಿ ಬೀಡುಬಿಟ್ಟಿದೆ. ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಕೇಂದ್ರದ ಮೂಲಕ ತುರ್ತು ಪರಿಸ್ಥಿತಿಗಳಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದೆ. ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳು, ಸಂಭವನೀಯ ಭೂಕುಸಿತ ಪ್ರದೇಶಗಳು, ಅಪಾಯ ಮಟ್ಟದಲ್ಲಿ ನದಿ ಹರಿಯವ ಜಾಗ ಮತ್ತಿತರ ಮಾಹಿತಿಗಳನ್ನು ಈ ತಂಡ ಈಗಾಗಗಲೇ ಕಲೆ ಹಾಕಿದ್ದು, ಒಂದು ವೇಳೆ ಇಲ್ಲಿಯ ಪರಿಸ್ಥಿತಿ ಬಿಗಡಾಯಿಸಿದರೆ ಯಾವ ಕ್ಷಣದಲ್ಲಾದರೂ ಕಾರ್ಯಾಚರಣೆಗೆ ತೊಡಗಿಕೊಳ್ಳಲು ಎನ್‌ಡಿಆರ್‌ಎಫ್ ಯೋಧರು ಸಜ್ಜಾಗಿದ್ದಾರೆ.

ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಲು ಅಗತ್ಯವಿರುವ ಸಲಕರಣಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ. ದೋಣಿಗಳು, ಮರ ಕತ್ತರಿಸುವ ಯಂತ್ರ, ಕಟ್ಟಡಗಳನ್ನು ಬೇಧಿಸುವ ಯಂತ್ರ, ವಿವಿಧ ರೀತಿಯ ಹಗ್ಗಗಳು, ಜನರೇಟರ್, ದೀಪ, ಲೈಫ್ ಜಾಕೆಟ್, ಪ್ರಥಮ ಚಿಕಿತ್ಸೆಯ ಔಷಧಿಗಳು, ಪ್ರವಾಹ ರಕ್ಷಣೆಯ ಉಪಕರಣಗಳು, ಭೂಕಸಿತದಿಂದ ರಕ್ಷಣೆ ಮಾಡುವ ಸಾಧನಗಳು, ಹುಡುಕಾಟ ಮತ್ತು ರಕ್ಷಣೆಗೆ ಬಳಸುವ ಸಲಕರಣೆಗಳು, ಸ್ವಯಂ ರಕ್ಷಣೆಯ ಕಿಟ್‌ಗಳು ಸೇರಿದಂತೆ ಪ್ರವಾಹದ ಸ್ಥಿತಿ ಎದುರಿಸಲು ಬೇಕಾಗುವ ಯಂತ್ರಗಳನ್ನು ಎನ್‌ಡಿಆರ್‌ಎಫ್‌ನ ತಂಡ ಹೊಂದಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಪ್ರವಾಹ, ಭೂಕುಸಿತ, ಭೂಕಂಪದAಥ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಇರುವ ಯೋಧರ ತಂಡ ಕೊಡಗಿನ ಜನರ ರಕ್ಷಣೆಗಾಗಿ ತಯಾರಾಗಿದೆ.

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ವಿವಿಧ ಇಲಾಖೆಗಳ ಮೂಲಕ ತಂಡಗಳನ್ನು ರಚಿಸಿಕೊಂಡಿದೆ. ಕಂದಾಯ, ಅರಣ್ಯ, ಪೊಲೀಸ್, ಗೃಹರಕ್ಷಕ ದಳ, ಸೆಸ್ಕ್, ನೀರಾವರಿ, ಆರೋಗ್ಯ, ಅಗ್ನಿಶಾಮಕ ದಳ..ಹೀಗೆ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಅನುಕೂಲ ಆಗುವಂತೆ ನೋಡಲ್ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದ್ದು, ಎನ್‌ಡಿಆರ್‌ಎಫ್ ತಂಡಕ್ಕೆ ಪೂರಕವಾಗಿ ಇವು ಕಾರ್ಯ ನಿರ್ವಹಿಸಲಿವೆ.

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು 2018ರಿಂದ ಈಚೆಗೆ ಎನ್‌ಡಿಆರ್‌ಎಫ್ ಯೋಧರನ್ನು ನಿಯೋಜಿಸಲಾಗುತ್ತಿದೆ. 2017ರ ತನಕವೂ ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಉಂಟಾಗುತ್ತಿದ್ದ ಸಂಕಷ್ಟಗಳನ್ನು ಪೊಲೀಸ್ ಇಲಾಖೆ, ಅಗ್ನಿಶಾಮಕ ಹಾಗೂ ಗೃಹರಕ್ಷಕ ದಳದ ಪರಿಣಿತ ಸಿಬ್ಬಂದಿಯೇ ಎದುರಿಸುತ್ತಿದ್ದರು. ಆದರೆ 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ವಿಕೋಪದ ನಂತರ ಪರಿಸ್ಥಿತಿ ಬದಲಾಯಿತು. ಗುಡ್ಡಗಳು ಜರಿದು, ನದಿಗಳು ಉಕ್ಕೇರಿದಾಗ ರಕ್ಷಣಾ ಕಾರ್ಯಕ್ಕೆ ಪರಿಣಿತರೇ ಬೇಕಾಯಿತು.

2018ರ ನಂತರ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಯೋಧರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದರು. ಕುಸಿದ ಗುಡ್ಡಗಳ ಮಧ್ಯೆ, ನದಿ ಪ್ರವಾಹದಲ್ಲಿ ಸಿಲುಕಿದ್ದ ಸಾಕಷ್ಟು ಮಂದಿಯನ್ನು ರಕ್ಷಿಸಿದ್ದರು. 2019, 2020ರಲ್ಲೂ ಎನ್‌ಡಿಆರ್‌ಎಫ್ ತಂಡ ಜನ, ಜಾನುವಾರು ಮಾತ್ರವಲ್ಲದೆ ಆಸ್ತಿ ರಕ್ಷಣೆಯಲ್ಲೂ ಮಹತ್ವದ ಸೇವೆ ಸಲ್ಲಿಸಿದ್ದರು. ನಂತರದ ವರ್ಷಗಳಲ್ಲಿ ಪ್ರತಿ ವರ್ಷವೂ ಎನ್‌ಡಿಆರ್‌ಎಫ್‌ನ ಒಂದು ತಂಡವನ್ನು ಮಳೆಗಾಲ ಆರಂಭವಾಗುತ್ತಿದ್ದAತೆಯೇ ಕೊಡಗಿಗೆ ಕರೆಯಿಸಿಕೊಳ್ಳಲಾಗುತ್ತಿದೆ.

ಮಕ್ಕಂದೂರು, ಹೆಬ್ಬಟಗೇರಿ, ಮಾದಾಪುರ, ಹಟ್ಟಿಹೊಳೆ, ಕಾಲೂರು, ಜೋಡುಪಾಲ, ಮೊಣ್ಣಂಗೇರಿ, ಮಂಗಳಾದೇವಿನಗರ, ತಂತಿಪಾಲ ಸೇರಿದಂತೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಭೂಕುಸಿತ ಸಂಭವಿಸಬಹುದಾದ ಸ್ಥಳಗಳು, ಪ್ರವಾಹ ನುಗ್ಗುವ ಗ್ರಾಮಗಳನ್ನು ಜಿಲ್ಲಾಡಳಿತ ಈಗಾಗಲೇ ಗುರುತು ಮಾಡಿದೆ. ಇಂಥ ಪ್ರದೇಶಗಳಿಗೆ ಎನ್‌ಡಿಆರ್‌ಎಫ್ ತಂಡಗಳನ್ನು ಕರೆದೊಯ್ಯಲಾಗುತ್ತದೆ.

ಅಪಾಯಕಾರಿ ಎಂದು ಗುರುತಿಸಲಾಗಿರುವ ಗ್ರಾಮಗಳಿಗೆ ಎನ್‌ಡಿಆರ್‌ಎಫ್ ತಂಡ ಭೇಟಿ ಕೊಡುವುದರಿಂದ ಸಿಬ್ಬಂದಿಗೆ ಸ್ಥಳದ ಪರಿಚಯ ಆಗುತ್ತದೆ. ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಣೆಗೆ ಯೋಜನೆ ರೂಪಿಸಲು ಅನುಕೂಲ ಆಗತ್ತದೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತ್ಮಸ್ಥೆöÊರ್ಯ ತುಂಬಿದAತೆಯೂ ಆಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ವಿಪತ್ತಿನ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮನ್ನು ಮತ್ತು ತಮ್ಮ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಲು ತರಬೇತಿ ಕೂಡ ಎನ್‌ಡಿಆರ್‌ಎಫ್ ಸಿಬ್ಬಂದಿ ನೀಡಲಿದ್ದಾರೆ.

ವಿಪತ್ತು ನಿರ್ವಹಣೆಗಾಗಿಯೇ ಮೀಸಲಾಗಿರುವ ವಿಶ್ವದ ಏಕೈಕ ದೊಡ್ಡ ಪಡೆ ಎನ್ನುವ ಹೆಗ್ಗಳಿಕೆಯನ್ನು ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ ಹೊಂದಿದೆ. ವಿಪತ್ತು ನಿರ್ವಹಣಾ ಕಾಯಿದೆ ಅಡಿಯಲ್ಲಿ ರಚನೆ ಆಗಿರುವ ಎನ್‌ಡಿಆರ್‌ಎಫ್ 2006ರಲ್ಲಿ ಅಸ್ತಿತ್ವಕ್ಕೆ ಬಂತು. ಆರಂಭದಲ್ಲಿ 8 ಬೆಟಾಲಿಯನ್‌ಗಳು ಇದ್ದವು. ಪ್ರಸ್ತುತ 12 ಬೆಟಾಲಿಯನ್‌ಗಳು ಇದೆ. ಪ್ರತಿ ಬೆಟಾಲಿಯನ್‌ನಲ್ಲೂ 1149 ಸಿಬ್ಬಂದಿ ಇದ್ದಾರೆ. ಮೊದಲೆಲ್ಲಾ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಕ್ಕೂ ನಿಯೋಜನೆ ಮಾಡಲಾಗುತ್ತಿತ್ತು. ಆದರೆ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿನ ರಕ್ಷಣಾ ಕಾರ್ಯಕ್ಕೆ ಮಾತ್ರ ಮೀಸಲು ಪಡೆಯೊಂದರ ಅಗತ್ಯ ಕಂಡುಬAದಿದ್ದರಿAದ 2008ರ ಫೆ.14ರಿಂದ ಈಚೆಗೆ ಎನ್‌ಡಿಆರ್‌ಎಫ್ ಅನ್ನು ಕೇವಲ ವಿಪತ್ತು ನಿರ್ವಹಣೆಗಾಗಿಯೇ ಮೀಸಲಿಡಲಾಗಿದೆ. ವಿದೇಶಗಳಲ್ಲೂ ಪ್ರಾಕೃತಿಕ ವಿಕೋಪ ಸಂದರ್ಭ ಎನ್‌ಡಿಆರ್‌ಎಫ್ ತಂಡ ಸೇವೆ ಸಲ್ಲಿಸಿದೆ. ದೇಶವಿದೇಶ ಸೇರಿದಂತೆ ಈತನಕ 1.55 ಲಕ್ಷಕ್ಕೂ ಹೆಚ್ಚು ಅಮೂಲ್ಯ ಮಾನವ ಜೀವಗಳನ್ನು ರಕ್ಷಣೆ ಮಾಡಿದೆ. 8 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳ ಸೇರಿಸಿದೆ. ಸ್ಥಳಾಂತರಿಸಿದೆ. 2011ರ ಜಪಾನ್ ವಿಪತ್ತು, 2015ರ ನೇಪಾಳ ಭೂಕಂಪ, 2023ರ ಟರ್ಕಿ ಭೂಕಂಪ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಯೋಧರು ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ.

ಈ ಬಾರಿ ಕೊಡಗಿಗೆ ಮಳೆ ಅವಧಿಗೆ ಮುಂಚೆಯೇ ಕಾಲಿಟ್ಟಿರುವುದರಿಂದ ನಾವು ಕೂಡ ಮುಂಗಾರು ಶುರು ಆಗುವುದಕ್ಕಿಂತ ಮೊದಲೇ ಬಂದಿದ್ದೇವೆ. ಜಿಲ್ಲಾಡಳಿತ ಗುರುತಿಸಿರುವ ಪ್ರವಾಹಪೀಡಿತ ಸ್ಥಳಗಳು, ಅಪಾಯಕಾರಿ ಸ್ಥಳಗಳನ್ನು ವೀಕ್ಷಿಸಿ ಅಲ್ಲಿಗೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ನಾವು ಕಾರ್ಯ ನಿರ್ವಹಿಸಲಿದ್ದೇವೆ. ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲ್ಲಾ ರೀತಿಯ ಪರಿಕರಗಳ ಜತೆಗೆ ನಾವು ಸಜ್ಜಾಗಿದ್ದೇವೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.

ಹರಿಶ್ಚಂದ್ರ ಪಾಂಡೆ, ಕಮಾಂಡರ್, ಎನ್‌ಡಿಆರ್‌ಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net