NDA ಒಕ್ಕೂಟ ಬಿಹಾರವನ್ನು ದೇಶದ ಕ್ರೈಂ ರಾಜಧಾನಿಯನ್ನಾಗಿ ಮಾಡಿದೆ: ರಾಹುಲ್​ ಗಾಂಧಿ ಆರೋಪ

dk - 2025-07-06T194421.546
Published on

ಆಡಳಿತಾರೂಢ NDA ಒಕ್ಕೂಟವು "ಬಿಹಾರವನ್ನು ಭಾರತದ ಅಪರಾಧ ರಾಜಧಾನಿಯನ್ನಾಗಿ ಮಾಡಿದೆ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

ಪಾಟ್ನಾ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಭಾನುವಾರ ನಿತೀಶ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ಬಿಹಾರ ಲೂಟಿ, ಗುಂಡಿನ ದಾಳಿ ಮತ್ತು ಕೊಲೆಯ ನೆರಳಿನಲ್ಲಿ ಬದುಕುತ್ತಿದೆ. ಅಪರಾಧವು ಸಾಮಾನ್ಯವಾಗಿದೆ ಮತ್ತು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದಾರೆ.

"ಪ್ರತಿ ಕೊಲೆ, ಪ್ರತಿ ದರೋಡೆ, ಪ್ರತಿ ಗುಂಡು ಬದಲಾವಣೆಯ ಕೂಗು. ಹೊಸ ಬಿಹಾರಕ್ಕೆ ಸಮಯ ಬಂದಿದೆ - ಪ್ರಗತಿಯದ್ದು, ಭಯದದ್ದಲ್ಲ. ಈ ಬಾರಿ, ನಿಮ್ಮ ಮತವು ಸರ್ಕಾರವನ್ನು ಬದಲಾಯಿಸಲು ಮಾತ್ರವಲ್ಲ - ಬಿಹಾರವನ್ನು ಉಳಿಸಲು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ "ನಿಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದ" ಸರ್ಕಾರಕ್ಕೆ ಮತ ಹಾಕಬೇಡಿ ಎಂದು ಕಾಂಗ್ರೆಸ್ ಸಂಸದರು ಬಿಹಾರದ ಜನರಿಗೆ ಮನವಿ ಮಾಡಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net