ಅಯ್ಯೋ ನಯನತಾರಾ ಮದುವೆ ಇಷ್ಟೊಂದು ಸರಳವಾ!?

nayanthara-vignesh-shivan
Published on

ಸೌತ್​ ಲೇಡಿ ಸೂಪರ್​ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಆಗ ಮದುವೆಯಾಗುತ್ತಾರೆ, ಈಗ ಮದುವೆಯಾಗುತ್ತಾರೆ ಅಥವಾ ಈಗಾಗಲೇ ಇಬ್ಬರದ್ದೂ ಮದುವೆ ಆಗಿದೆಯಾ? ... ಹೀಗೆ ಈ ಜೋಡಿಯ ಬಗ್ಗೆ ಚಾಲ್ತಿಯಲ್ಲಿರುವ ಮದುವೆ ಬಗೆಗಿನ ಮಾತುಗಳಿವು. ಆದರೆ, ಈ ಜೋಡಿ ಇನ್ನೂ ಮದುವೆ ಆಗಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ತಿಂಗಳಲ್ಲಿ ನಯನತಾರಾ ಮತ್ತು ವಿಘ್ನೇಶ್​ ಕಲ್ಯಾಣ ನಡೆದಿರುತ್ತಿತ್ತು. ಅದಕ್ಕೆ ಕರೊನಾ ಅಡ್ಡಿಯಾಯ್ತು. ಇದೀಗ, ಕರೊನಾ ಲಾಕ್​ಡೌನ್​ ನಡುವೆಯೂ ಸರಳ ವಿವಾಹದ ಮೊರೆ ಹೋಗಿದೆ ಈ ಜೋಡಿ.

ಹೌದು, ಸಹಜವಾಗಿ ಸಿನಿಮಾ ಮಂದಿಯ ಮದುವೆ ಕಾರ್ಯಕ್ರಮ ಅಂದರೆ ಅಲ್ಲಿ ಅದ್ದೂರಿತನಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಸ್ವರ್ಗವನ್ನೇ ಹೋಲುವ ಕಲ್ಯಾಣ ಮಂಟಪ, ಬಗೆಬಗೆ ಚೆಂದದ ಹೂಗಳ ಅಲಂಕಾರ, ಹತ್ತಾರು ಥರಹದ ಖಾದ್ಯ, ಒಟ್ಟಾರೆ ಸೆಲೆಬ್ರಿಟಿಗಳ ಮದುವೆ ಅಂದಮೇಲೆ ಅದೊಂದು ಹಬ್ಬವಿದ್ದಂತೆ. ಹೀಗಿರುವಾಗ ಇದೆಲ್ಲವನ್ನು ಬದಿಗಿಟ್ಟು, ದೇವಸ್ಥಾನವೊಂದರಲ್ಲಿ ತೀರಾ ಸರಳ ವಿವಾಹಕ್ಕೆ ನಯನತಾರಾ ಮತ್ತು ವಿಘ್ನೇಶ್​ ಸಿದ್ಧತೆ ನಡೆಸಿದ್ದಾರೆ. ಕುಟುಂಬದ ಆಪ್ತರಷ್ಟೇ ಆ ಮದುವೆಗೆ ಸಾಕ್ಷಿಯಾಗಲಿದ್ದಾರೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮವನ್ನು ನಿಷೇಧಿಸಲಾಗಿತ್ತು. ಕೊನೆಗೆ ಸೀಮಿತ ಜನರ ಸಮ್ಮುಖದಲ್ಲಿ ನೆರವೇರಿಸಿಕೊಳ್ಳಲು ಅವಕಾಶ ನೀಡಿತ್ತು. ಆ ಕಾರಣಕ್ಕೆ ಈ ಜೋಡಿ, ದೇವಸ್ಥಾನವನ್ನು ಆಯ್ದುಕೊಂಡಿದ್ದು, ಶೀಘ್ರದಲ್ಲಿ ಮದುವೆ ದಿನಾಂಕ ಮತ್ತು ಎಲ್ಲಿ ನಡೆಯಲಿದೆ ಎಂಬ ವಿವರವನ್ನು ಹಂಚಿಕೊಳ್ಳಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net