ಬಸವೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಇಂದಿನಿಂದ

Published on

ಸುಂಟಿಕೊಪ್ಪ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.

ಸೆ.22 ರಿಂದ ಅ.1 ರವರೆಗೆ ವಿಶೇಷ ಪೂಜೆಗಳು ನಡೆಯಲಿದ್ದು, ಶ್ರೀರಂಗಪೂಜೆ, ಪಂಚಾಮೃತ ಅಭಿಷೇಕ, ಸಹಸ್ರನಾಮ ಕುಂಕುಮಾರ್ಚನೆ, ಶ್ರೀಸೂಕ್ತಾಭಿಷೇಕ ಮತ್ತು ಪುಷ್ಪಾಂಲಕಾರ ನಡೆಯಲಿವೆ. ಪಂಚಾಮೃತ ಅಭಿಷೇಕವು ಬೆಳಗ್ಗಿನ ಹೊತ್ತು ನಡೆಯಲ್ಲಿದ್ದು, ಸೇವಾ ಸಂಕಲ್ಪವು ಸಂಜೆ 6 ರಿಂದ ಪ್ರಾರಂಭಗೊಳ್ಳಲಿದೆ. ಭಕ್ತಾಧಿಗಳು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.

ಸೆ.27 ರಂದು ಶ್ರೀ ಲಲಿತ ಪಂಚಮಿ ಪ್ರಯುಕ್ತ ಸಾಮೂಹಿಕ ಶ್ರೀದೇವಿ ಶ್ರೀದೇವಿ ಸಪ್ತಶತಿ ಪಾರಾಯಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net