ಭುವನೇಶ್ವರ ಮೆಟ್ರೋ ಒಪ್ಪಂದ ರದ್ದು: ಬಿಜೆಪಿ ಸರ್ಕಾರದ ವಿರುದ್ಧ ನವೀನ್ ಪಟ್ನಾಯಕ್ ಕಿಡಿ | Naveen Patnaik

Naveen Patnaik
Published on

Naveen Patnaik : ತಮ್ಮ ಅಧಿಕಾರಾವಧಿಯಲ್ಲಿ ಆರಂಭಿಸಲಾದ ಭುವನೇಶ್ವರ ಮೆಟ್ರೋ ರೈಲು ಯೋಜನೆಯ ಒಪ್ಪಂದವನ್ನು ರದ್ದುಗೊಳಿಸಿದ ಬಿಜೆಪಿ ಸರ್ಕಾರದ ಕ್ರಮವನ್ನು ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಟೀಕಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಹಂಚಿಕೊಂಡಿರುವ ಅವರು, ದೆಹಲಿ ಮೆಟ್ರೋ ರೈಲು ನಿಗಮದೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ್ದಕ್ಕಾಗಿ, ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ನೇತೃತ್ವದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇಂತಹ ಸೇಡಿನ ಕ್ರಮದ ಮೂಲಕ ರಾಜ್ಯದ ಜನರಿಗೆ ದ್ರೋಹ ಬಗೆದಿದೆ, ಇದು ಭುವನೇಶ್ವರ ನಗರವನ್ನು 10 ವರ್ಷ ಹಿಂದಕ್ಕೆ ಕೊಂಡೊಯ್ಯಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಟ್ವೀಟ್​​ನಲ್ಲೇನಿದೆ..?

ಭುವನೇಶ್ವರ ಮೆಟ್ರೋ ರೈಲು ಒಪ್ಪಂದಗಳನ್ನು ಬಿಜೆಪಿ ನೇತೃತ್ವದ ಒಡಿಶಾ ಸರ್ಕಾರ ರದ್ದುಗೊಳಿಸಿರುವುದನ್ನು ಎಂದು ತಿಳಿದು ಆಘಾತವಾಯಿತು. ಭುವನೇಶ್ವರವನ್ನು ವಿಶ್ವ ದರ್ಜೆಯ ನಗರವನ್ನಾಗಿ ಅಭಿವೃದ್ಧಿಪಡಿಸುವುದು ನಮ್ಮ ಕನಸಾಗಿದೆ. ಕ್ರೀಡಾ ಮೂಲಸೌಕರ್ಯ, ಮಾರ್ಕ್ಯೂ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವುದು, ತಡೆರಹಿತ ಆಧುನಿಕ ಸಾರಿಗೆಯನ್ನು ಒದಗಿಸುವುದು ಮತ್ತು ಐಟಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರ ಮೇಲೆ ನಾವು ಗಮನಹರಿಸದ್ದೇವೆ" ಎಂದು ಪಟ್ನಾಯಕ್ ಟ್ವೀಟ್ ಮಾಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net