

ಸಿಂಹಸನಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಮ್ |
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ||
ಈಕೆಯು ಸ್ಕಂದ ಅಥವಾ ಸುಬ್ರಹ್ಮಣ್ಯನ ತಾಯಿಯಾದ್ದರಿಂದ ದೇವಿಯನ್ನು ಸ್ಕಂದಮಾತಾ ಎಂದು ಕರೆಯುತ್ತಾರೆ. ಈ ದೇವಿಯ ವಾಹನ ಕೂಡ ಸಿಂಹ. ಈ ದೇವಿ ಎರಡೂ ಕೈಗಳಲ್ಲೂ ಕಮಲದ ಹೂಗಳನ್ನು ಹಿಡಿದಿರುತ್ತಾಳೆ. ಸ್ಕಂದನು ಇವಳ ತೊಡೆಯ ಮೇಲೆ ಕುಳಿತಿದ್ದು, ಬಲಗೈಯಿಂದ ಅವನನ್ನು ಹಿಡಿದಿರುತ್ತಾಳೆ, ಎಡಗೈಯಿಂದ ಆಶೀರ್ವಾದ ರೂಪಕವಾದ ಅಭಯಮುದ್ರೆಯನ್ನು ಧರಿಸಿದ್ದಾಳೆ. ಬಿಳಿಯ ವರ್ಣದಿಂದ ಕಂಗೊಳಿಸುತ್ತಿರುವ ಈ ಮಾತೆ ಕಮಲದಲ್ಲಿ ಪದ್ಮಾಸೀನಳಾಗಿರುವುದರಿಂದ ಈಕೆಯನ್ನು ಪದ್ಮಾಸನಾ ದೇವಿ, ಅಗ್ನಿಯ ದೇವತೆ ಎಂದೂ ಹೇಳುತ್ತಾರೆ.
ಸ್ಕಂದಮಾತೆಯ ಆರಾಧನೆಯಿಂದ ಮೋಕ್ಷವು ಸುಗಮವಾಗಿ ದೊರೆಯುತ್ತದೆ. ಅಲ್ಲದೆ ಈ ತಾಯಿಯ ಪೂಜೆಯಿಂದ ಸುಖ-ಶಾಂತಿ, ಎಲ್ಲ ರೀತಿಯ ಕಾಮನೆಗಳು ಈಡೇರುತ್ತವೆ. ದೇವಿ ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುತ್ತಾಳೆ. ಈ ದೇವಿಯ ಆರಾಧನೆಯಿಂದ ಭಕ್ತರು ಯಶಸ್ಸು ಹಾಗೂ ಖ್ಯಾತಿ ಪಡೆಯುತ್ತಾರೆ, ಅಲ್ಲದೆ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಾರೆ. ದೇವಿಯ ಈ ರೂಪದ ಪೂಜೆಯಿಂದ ಸಾಧಕನಿಗೆ ಅಲೌಕಿಕ ತೇಜಸ್ಸು ಹಾಗೂ ಪ್ರಭೆ ಸಿಗುವುದರಿಂದ ಐಹಿಕ ಬಂಧನಗಳಿಂದ ಮುಕ್ತನಾಗುತ್ತಾನೆ.
ನವರಾತ್ರಿಯ ಪಂಚಮಿಯಂದು ಈಕೆಯ ಉಪಾಸನೆಯನ್ನು ಸಾಧಕರು, ಭಕ್ತರು ಮಾಡುತ್ತಾರೆ. ಭಕ್ತಿ ಪಕ್ವವಾದಲ್ಲಿ, ಭಕ್ತನ ಮನಸ್ಸು ವಿಶುದ್ಧ ಚಕ್ರದಲ್ಲಿ ನೆಲೆಸುತ್ತದೆ. ಆಗ ಸಮಸ್ತ ಬಾಹ್ಯ ಚಟುವಟಿಕೆಗಳು ಹಾಗೂ ಚಿತ್ತವೃತ್ತಿಗಳು ಲಯವಾಗುತ್ತವೆ. ಐದನೇ ಚಕ್ರದ ಪ್ರಮುಖ ಆಸ್ತಿಯೆಂದರೆ ಆಂತರಿಕ ಧ್ವನಿಯ ಜಾಗೃತಿ, ನಮಗೆ ಸತ್ಯವನ್ನು ಹೇಳಲು ಸಾಧ್ಯವಾಗುತ್ತದೆ. ಆಂತರಿಕ ಸ್ವಾತಂತ್ರ್ಯ ಲಭಿಸಿ, ಮನಸ್ಸು ಶುದ್ಧ, ಸ್ವತಂತ್ರವಾಗುತ್ತದೆ.
ಐಂ ಬಿಜಾಲಿಂಕಾ ದೇವಿ ಪದ್ಯುಗ್ಮಧರಾಪರಾ
ಹೃದಯಂ ಪಾತು ಸ ದೇವಿ ಕಾರ್ತಿಕೇಯಾಯುತಾ
ಶ್ರೀ ಹ್ರೀಂ ಹೂಂ ಐಂ ದೇವೀ ಪರ್ವಸ್ಯಾ ಪಾತು ಸರ್ವದಾ
ಸರ್ವಾಂಗ ಮೇ ಸದಾ ಪಾತು ಸ್ಕಂದಮಾತಾ ಪುತ್ರಪ್ರದಾ
ವಾಣವಾಣಾಮೃತೇ ಹುಂ ಫಟ್ ಬಿಜಾ ಸಮಾನ್ವಿತಾ
ಉತ್ತರಸ್ಯಾ ತಥಾಗ್ರೇ ಚ ವಾರುಣೇ ನೈರುತೆ ಅವತು
ಇಂದ್ರಾಣಿ ಭೈರವೀ ಚೈವಾಸಿತಾಡಿ ಚ ಸಂಹಾರಿಣಿ
ಸರ್ವದಾ ಪಾತು ಮಾಂ ದೇವಿ ಚಾನ್ಯಾನ್ಯಾಸು ಹಿ ದೀಕ್ಷು ವೈ
ದೇವಿ ಸ್ಕಂದ ಮಾತಾ ಮಂತ್ರ: ಓಂ ದೇವಿ ಸ್ಕಂದಮಾತಾಯ ನಮಃ