ನೌಕಾದಳದಿಂದ ನೇಮಕಾತಿ ಅಧಿಸೂಚನೆ ಪ್ರಕಟ;ವಿವಿಧ ತರಬೇತಿ ಸ್ಥಾನಗಳಿಗೆ ನಡೆಯಲಿದೆ ಅಭ್ಯರ್ಥಿಗಳ ಆಯ್ಕೆ

job (1)
Published on

ಬೆಂಗಳೂರು: ಭಾರತೀಯ ನೌಕಾದಳದ ಅಧೀನದಲ್ಲಿರುವ ನೇವಲ್ ಡಾಕ್‌ಯಾರ್ಡ್ ಅಪ್ರೆಂಟಿಸ್ ಸ್ಕೂಲ್‌ನ ವಿವಿಧ ವಿಭಾಗಗಳಲ್ಲಿ ತರಬೇತಿ ಸ್ಥಾನಗಳು ಖಾಲಿ ಇದ್ದು, ಇವುಗಳಿಗೆ ಶೀಘ್ರವೇ ನೇಮಕಾತಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ಹುದ್ದೆಗಳ ಮಾಹಿತಿ (ವಿಭಾಗ-ಹುದ್ದೆ ಸಂಖ್ಯೆ)

ಎಲೆಕ್ಟ್ರಾನಿಕ್ ಮೆಕ್ಯಾನಿಕ್ 36
ಫಿಟ್ಟರ್ 33
ಮೆಟಲ್ ವರ್ಕರ್ 33
ಮೆಕ್ಯಾನಿಕ್ 23
ಪೈಪ್ ಫಿಟ್ಟರ್ 23
ಎಲೆಕ್ಟ್ರೆಷಿಯನ್ 21
ಇತರ 75

ಅರ್ಜಿ ಸಲ್ಲಿಕೆ
ಅಭ್ಯರ್ಥಿಯು https://www.apprenticeshipindia.gov.in/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.

ಅರ್ಹತೆಗಳು
ವಯಸ್ಸು: ಅಪ್ರೆಂಟಿಸ್ ಕಾಯಿದೆ ಅನ್ವಯ ಎಲ್ಲ ಅಭ್ಯರ್ಥಿಗಳು ಕನಿಷ್ಠ 14 ವರ್ಷ ಮೇಲ್ಪಟ್ಟವರಾಗಿರಬೇಕಿದ್ದು, ಗರಿಷ್ಠ ಕೆಲವು ಹುದ್ದೆಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಬಹುದು.

ಶಿಕ್ಷಣ: ಎಲ್ಲ ವರ್ಗದ ಅಭ್ಯರ್ಥಿಯು ಶೇ.50 ಅಂಕಗಳೊಂದಿಗೆ 10ನೇ ತರಗತಿ ತೇರ್ಗಡೆಯಾಗಿರಬೇಕಿದ್ದು, ಐಟಿಐ (ಎನ್‌ಸಿವಿಟಿ/ಎಸ್ಸಿವಿಟಿ)ಯಲ್ಲಿ ಶೇ.65 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು. 

ಅಭ್ಯರ್ಥಿಯ ಆಯ್ಕೆ
ಅಭ್ಯರ್ಥಿಯನ್ನು ಎಸ್ಸೆಸ್ಸೆಲ್ಸಿ ಹಾಗೂ ಐಟಿಐನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅಂದರೆ 70:30 ಅನುಪಾತದಲ್ಲಿ ಮೆರಿಟ್‌ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ. ಬಳಿಕ ಲಿಖಿತ ಪರೀಕ್ಷೆ ನಡೆಯಲಿದ್ದು, ಎರಡೂ ಹಂತಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಅಂತಿಮ ಸುತ್ತಿನಲ್ಲಿ ದಾಖಲೆ ಪರಿಶೀಲನೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. 

ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗೆ ಅಪ್ರೆಂಟಿಸ್ ಕಾಯಿದೆ ಅನ್ವಯ ಪ್ರತಿ ತಿಂಗಳು 7,700 ರೂ.-8,050 ರೂ. ಸ್ಟೈಪೆಂಡ್ ನೀಡಲಾಗುತ್ತದೆ.

ಬಾಕ್ಸ್....
ಸಂದರ್ಶನ ದಿನಾಂಕಗಳು
ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರೆಷಿಯನ್ ಹುದ್ದೆಗಳಿಗೆ 2024ರ ಮಾ.5ರಂದು ಸಂದರ್ಶನ ನಡೆಯಲಿದೆ. ಅದೇ ರೀತಿ ಫಿಟ್ಟರ್, ಪೈಂಟರ್, ಮೆಟಲ್ ವರ್ಕರ್ ಹುದ್ದೆಗೆ ಮಾ.6ರಂದು, ಉಳಿದ ಕೆಲವು ಹುದ್ದೆಗಳಿಗೆ ಕ್ರಮವಾಗಿ ಮಾ.7 ಹಾಗೂ 8ರಂದು ಸಂದರ್ಶನ ನಡೆಯಲಿದೆ.

ಒಟ್ಟು ಹುದ್ದೆಗಳು-275 

ಅರ್ಜಿ ಸಲ್ಲಿಕೆಗೆ ಅಂತಿಮ ದಿನ-1.01.2024

ಲಿಖಿತ ಪರೀಕ್ಷೆ ನಡೆಯಲಿರುವ ಸಂಭಾವ್ಯ ದಿನಾಂಕ- 28.2.2024

ಫಲಿತಾಂಶ ಪ್ರಕಟವಾಗುವ ಸಂಭಾವ್ಯ ದಿನ-2.3.2023

ಪ್ರಮುಖ ಮಾಹಿತಿಗಳು 
*ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆಗಳನ್ನು ಕೂಡ ನಡೆಸಲಾಗುತ್ತದೆ.
* ಅಭ್ಯರ್ಥಿಗಳು ಅರ್ಜಿ ಜತೆಗೆ ಗುರುತಿನ ಪುರಾವೆ, ಶಿಕ್ಷಣಕ್ಕೆ ಸಂಬಂಧಿಸಿದ ಪುರಾವೆ ಹಾಗೂ ವೈದ್ಯಕೀಯ ಫಿಟ್‌ನೆಸ್ ಪ್ರಮಾಣ ಪತ್ರ ಸಹಿತ ಪ್ರಮುಖ ದಾಖಲೆಗಳ ನಕಲು ಪ್ರತಿಗಳನ್ನು ಕಡ್ಡಾಯ ಸಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net