ಭರತನಾಟ್ಯದ ಅರ್ಥೈಸುವಿಕೆಗೆ ಪ್ರಾತ್ಯಕ್ಷಿಕೆ ಅಗತ್ಯ ನೃತ್ಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಡಾ.ಹರಿಕೃಷ್ಣ ಪುನರೂರು

mng--13 Feb Natyaradana
Published on


ಮಂಗಳೂರು: ಭರತನಾಟ್ಯ ಕಲೆಯ ತಲಸ್ಪರ್ಶಿ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಭರತನಾಟ್ಯ ರಸಗ್ರಹಣದಂತಹ ಪ್ರಾತ್ಯಕ್ಷಿಕೆಗಳು ಹೆಚ್ಚು ಹೆಚ್ಚು ನಡೆಯಬೇಕು. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸಾಮಾನ್ಯ ಪ್ರೇಕ್ಷಕರಿಗೂ ಉತ್ತಮ ಕಲಾಪ್ರೇಕ್ಷಕರಾಗಲು ಸಹಾಯಕ ಎಂದು ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು.


ಸುರತ್ಕಲ್ ಲಲಿತ ಕಲಾ ಸಂಘ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ- ವಿದ್ಯಾರ್ಥಿ ಸಮಿತಿಯ ಸಹಯೋಗದೊಂದಿಗೆ ಸುರತ್ಕಲ್ ಗೋವಿಂದದಾಸ ಕಾಲೇಜಿನ ರಂಗಮಂದಿರದಲ್ಲಿ ಇತ್ತೀಚೆಗೆ ನಡೆದ ಹಮ್ಮಿಕೊಂಡ ನೃತ್ಯಾಮೃತ 1 ‘ಭರತನಾಟ್ಯ ರಸಗ್ರಹಣ’ ನೃತ್ಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಉದ್ಯಮಿ ರಾಜಾರಾಮ್ ಸಾಲ್ಯಾನ್ ಉದ್ಘಾಟಿಸಿದರು. ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ಚಂದ್ರಶೇಖರ ನಾವಡ, ಸುರತ್ಕಲ್ ಕಲಾನಿಧಿ ನೃತ್ಯ ನಿಲಯದ ನಿರ್ದೇಶಕಿ ಶೈಲಜ ಶಿವಶಂಕರ್, ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿಯ ಹಿರಿಯ ವಲಯ ಪ್ರಬಂಧಕ ಯಾದವ ದೇವಾಡಿಗ, ಉಮಾದೇವಿ, ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಎಚ್. ಜಯಚಂದ್ರ ಹತ್ವಾರ್, ಶಕುಂತಲಾ ಭಟ್ , ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ಅನುಧೀರಜ್ ಉಪಸ್ಥಿತರಿದ್ದರು.


ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು, ಟ್ರಸ್ಟಿ ರತ್ನಾಕರ ರಾವ್ ವಂದಿಸಿದರು, ಸಮಿತಿಯ ಸಂಘಟನಾ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ನಿರೂಪಿಸಿದರು.


ದೀಪಕ್ ಕುಮಾರ್ ಪುತ್ತೂರು , ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಹಾಗೂ ನಾಟ್ಯಾರಾಧನಾದ ನಿರ್ದೇಶಕಿ ಸುಮಂಗಲಾ ರತ್ನಾಕರ್ ರಾವ್ ಸಂಪನ್ಮೂಲ ಕಲಾವಿದರಾಗಿ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಿದರು.


ಪ್ರೀತಿಕಲಾ ದೀಪಕ್ ಮತ್ತು ಮನೋಹರ ರಾವ್ ಮಂಗಳೂರು ಹಿನ್ನೆಲೆ ಸಹಕಾರ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net