

ರಾಣೆಬೆನ್ನೂರ: ಇಂದಿನ ಯುವ ಪೀಳಿಗೆ ಡಿಜೆ, ರಿಯಾಲಿಟಿ ಶೋಗಳಿಗೆ ಮಾರು ಹೋಗಿದ್ದರಿಂದ ದೇಶಿಯ ಜಾನಪದ, ಕಲೆ, ಸಂಗೀತ, ಜಾನಪದ ನೃತ್ಯಗಳು ಹೆಚ್ಚು ಪ್ರಚಲಿತ ಇರದೆ ಇರುವುದು ವಿಪರ್ಯಾಸದ ಸಂಗತಿ ಎಂದು ಶಹರ ಠಾಣೆ ಸಿಪಿಐ ಡಾ. ಶಂಕರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಾತೋಶ್ರೀ ಮಹದೇವಕ್ಕ ಮಂಗಳ ವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ವತಿಯಿಂದ ಲಿಂ.ಪಂ. ಪಂಚಾಕ್ಷರಿ ಗವಾಯಿಗಳವರ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಂಗೀತ ಹಾಗೂ ಸಾಂಸತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆ ಪ್ರದಶಿರ್ಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದು ದೇಶಿಯ ಕಲೆಗಳು ಉಳಿಸಿ ಬೆಳಸಬೇಕ ಎಂದರು. ವಿವಿಧ ಜಿಲ್ಲೆಯಿಂದ ಆಗಮಿಸಿದ ಕಲಾವಿದರು ಸಂಗೀತ ಪ್ರಸ್ತುತ ಪಡಿಸಿದರು.
ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಪ್ರಮುಖರಾದ ಬಸವರಾಜ ಸಾವಕ್ಕನವರ, ನಿತ್ಯಾನಂದ ಕುಂದಾಪುರ, ಮಲೇಶಪ್ಪ ಮದ್ಲೇರ, ಗುಡ್ಡಪ್ಪ ಹಿಂದಿನಮನಿ, ಪ್ರಕಾಶಗೌಡ ಪರಪಗೌಡ್ರು, ತಿಪ್ಪೇಶಪ್ಪ ಚಲವಾದಿ ಮತ್ತಿತರರು ಉಪಸ್ಥಿತರಿದ್ದರು.