ಗಾಯಕ ಜುಬೀನ್ ಪ್ರಕರಣಕ್ಕೆ ಟ್ವಿಸ್ಟ್..ಗರ್ಗ್​ ಸಾವಿನ ಕೊನೆಯ ಕ್ಷಣಗಳ ಬಗ್ಗೆ ಸಿಂಗಾಪುರ ಪೊಲೀಸರ ಶಾಕಿಂಗ್ ರಿಪೋರ್ಟ್! | Zubeen Garg

Zubeen Garg | ಅಸ್ಸಾಮಿ ಗಾಯಕ ಜುಬೀನ್ ಗರ್ಗ್
Zubeen Garg | ಅಸ್ಸಾಮಿ ಗಾಯಕ ಜುಬೀನ್ ಗರ್ಗ್
Published on
Zubeen Garg: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಉತ್ಸವವೊಂದರಲ್ಲಿ ಪ್ರದರ್ಶನ ನೀಡಲು ಸಿಂಗಾಪುರ್​ಗೆ ತೆರಳಿದ್ದ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದರು.
ಸದ್ಯ ಈ ತನಿಖೆಯ ವರದಿ ಬಂದಿದ್ದು, ಜುಬೀನ್ ಗರ್ಗ್ ಲೈಫ್ ಜಾಕೆಟ್ ಧರಿಸದೆ ಲಾಜರಸ್ ದ್ವೀಪದಲ್ಲಿ ಮುಳುಗಿದಾಗ ತೀವ್ರ ಕುಡಿದ ಅಮಲಿನಲ್ಲಿದ್ದರು ಎಂದು ಸಿಂಗಾಪುರ ಪೊಲೀಸರು ಬುಧವಾರ ಕೊರೋನರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ, ಅವರ ಸಾವಿನ ಕುರಿತಾದ ಎಲ್ಲಾ ರೀತಿಯ ಊಹಾಪೋಹಗಳನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಜುಬೀನ್ ಗರ್ಗ್ ಕುಡಿದಿದ್ದರು, ಬೇರೆಯವರ ತಪ್ಪಿಲ್ಲ: ಪೊಲೀಸರು

ನೀರಿಗೆ ಇಳಿಯುವ ಮುನ್ನ ಜುಬೀನ್​ ತುಂಬಾ ಕುಡಿದಿದ್ದರು, ಈ ವೇಳೆ ದೋಣಿಗೆ ಹಿಂತಿರುಗಲು ಈಜಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ಸಿಗದೆ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲಿದ್ದ ಜುಬೀನ್ ಸ್ನೇಹಿತರು ಅವರನ್ನು ಬೇಗನೆ ದೋಣಿಗೆ ಎಳೆದುಕೊಂಡು, ಸಿಪಿಆರ್​ ಮಾಡಲಾಯಿತು, ಅದೇ ದಿನದ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಗರ್ಗ್ ದೇಹದಲ್ಲಿ ಕಂಡುಬಂದ ಗಾಯಗಳಿಗೆ ರಕ್ಷಣಾ ಮತ್ತು ಸಿಪಿಆರ್ ಪ್ರಯತ್ನಗಳೇ ಕಾರಣ ಎನ್ನಲಾಗಿದ್ದು, ಅವರ ಸಾವಿನ ವಿಷಯದಲ್ಲಿ ಯಾರ ಕೈವಾಡವಿಲ್ಲ ಎನ್ನುವುದನ್ನು ಅಧಿಕಾರಿಗಳಿ ಸ್ಪಷ್ಟಪಡಿಸಿದ್ದಾರೆ.

ಜುಬೀನ್ ಸಂಬಂಧಿಕರ ಕಳವಳಗಳು

ವಿಚಾರಣೆ ಪ್ರಾರಂಭವಾಗುವ ಮುನ್ನವೇ ಗರ್ಗ್ ಚಿಕ್ಕಪ್ಪ ನ್ಯಾಯಾಲಯಕ್ಕೆ ಸಿದ್ಧಪಡಿಸಿದ ಹೇಳಿಕೆಯನ್ನು ಓದಿ, ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಕುಟುಂಬದ ಕಳವಳಗಳನ್ನು ವ್ಯಕ್ತಪಡಿಸಿದರು. ಗಾರ್ಗ್ 2025 ಸೆಪ್ಟೆಂಬರ್ 19 ರಂದು ತಮ್ಮ ಹೋಟೆಲ್ ಕೋಣೆಯಿಂದ ಜೀವಂತವಾಗಿ ಮತ್ತು ಲವಲವಿಕೆಯಿಂದಿದ್ದರು, ಆದರೆ ಆ ದಿನದ ಅಂತ್ಯದ ವೇಳೆಗೆ ನಿಧನದ ಸುದ್ದಿ ತಲುಪಿತು ಎಂದರು.
ಆ ಎರಡು ಕ್ಷಣಗಳ ನಡುವೆ ಕುಟುಂಬಕ್ಕೆ ತಿಳಿಯದ ಘಟನೆಗಳಿವೆ ಎಂದು ಆರೋಪಿಸಿ ಘಟನೆಗಳ ಪೂರ್ಣ ಮತ್ತು ಕಾಲಾನುಕ್ರಮದ ವಿವರಣೆಯನ್ನು ಕೋರಿದರು, ಅದರಲ್ಲಿ ಗರ್ಗ್ ಜೊತೆ ಯಾರು ಪ್ರವಾಸವನ್ನು ಯೋಜಿಸಿದ್ದರು, ಗರ್ಗ್ ಸಮುದ್ರಕ್ಕೆ ಹಾರಿದ್ದೇಕೆ..? ಎನ್ನುವುದು ಅವರ ಚಿಕ್ಕಪ್ಪನ ಪ್ರಮುಖ ಪ್ರಶ್ನೆಯಾಗಿದೆ. ಜುಬೀನ್​ ನೀರಿಗೆ ಹಾರಿದ್ದು ಸ್ವಇಚ್ಛೆಯಿಂದಲೋ ಅಥವಾ ಯಾರಾದರೂ ಇದಕ್ಕೆ ಪ್ರೋತ್ಸಾಹಿಸಿದ್ದಾರೋ ಅಥವಾ ಒತ್ತಾಯಿಸಿದ್ದಾರೋ ಎಂದು ಅನುಮಾನಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net