ಈ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ, ಗಡಿ ಭಾಗದ ಪ್ರತಿಯೊಬ್ಬ ನಾಗರಿಕ, ರಾಜ್ಯ ಆಡಳಿತ ಯಂತ್ರ ಮತ್ತು ಕೇಂದ್ರೀಯ ಭದ್ರತಾ ಏಜೆನ್ಸಿಗಳನ್ನು ಒಟ್ಟಿಗೆ ಜೋಡಿಸಿ ಪ್ರತಿಯೊಂದು ಜಿಲ್ಲೆಗೂ ‘360-ಡಿಗ್ರಿ ಭದ್ರತಾ ಕವಚವನ್ನು ರೂಪಿಸಬೇಕು ಎಂದು ಒತ್ತಿಹೇಳಿದ್ದಾರೆ. ಅಲ್ಲದೆ, ನುಸುಳುವಿಕೆ, ಭಯೋತ್ಪಾದನೆಗೆ ಧನಸಹಾಯ ಮತ್ತು ಗಡಿಯಾಚೆಗಿನ ಅಪರಾಧಗಳನ್ನು ತಡೆಯಲು ಗಡಿ ರಕ್ಷಣಾ ಪಡೆ (BSF), ಸಿಬಿಡಿಟಿ (CBDT), ಎನ್‌ಸಿಬಿ (NCB) ಮತ್ತು ರಾಜ್ಯ ಪೊಲೀಸರು ಒಟ್ಟಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.