ಈ ಹಿಂದೆ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಚಹಾಲ್, ತಾವು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಮಗೆ ಮತ್ತೆ ಪ್ರೀತಿಯಲ್ಲಿ ಬೀಳಲು ಸಮಯ ಬೇಕು ಮತ್ತು ಸದ್ಯಕ್ಕೆ ತಮ್ಮ ಮೇಲೆಯೇ ತಾವು ಗಮನ ಹರಿಸುತ್ತಿರುವುದಾಗಿ ಹೇಳಿದ್ದರು. ಅಲ್ಲದೆ, ಪಾಪರಾಜಿಗಳು ತಮ್ಮ ಸ್ನೇಹಿತರ ಜೊತೆಗಿರುವ ಫೋಟೋಗಳನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.