ವ್ಲಾಗರ್ ಆಕೆಯ ಶಕ್ತಿಯನ್ನು ಕಂಡು, "ನೀವು ನಿಜಕ್ಕೂ ತುಂಬಾ ಬಲಿಷ್ಠ ಮಹಿಳೆ" ಎಂದು ಹೊಗಳಿದಾಗ, ಆಕೆ ನೀಡಿದ ಉತ್ತರ ಇಡೀ ವಿಡಿಯೋದ ಹೈಲೈಟ್. "ನಾನು ಬಲಿಷ್ಠಳಲ್ಲ. ನೀವು ಪ್ರತಿದಿನ ಕೆಲಸ ಮಾಡಿದರೆ, ನೀವೂ ಕೂಡ ಬಲಿಷ್ಠರಾಗುತ್ತೀರಿ" ಎಂದು ಅತ್ಯಂತ ಸರಳವಾಗಿ ಜೀವನದ ದೊಡ್ಡ ಪಾಠವನ್ನು ಆಕೆ ಇಂಗ್ಲಿಷ್‌ನಲ್ಲಿ ವಿವರಿಸಿದ್ದಾರೆ. ತಲೆಯ ಮೇಲೆ ಅಷ್ಟು ಭಾರವಿದ್ದರೂ ಮುಖದಲ್ಲಿ ಮಂದಹಾಸ ಮಾಸಿರಲಿಲ್ಲ.