ಅನುದಾನ ಹೆಚ್ಚಳ: ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಲಡಾಖ್ ಬಜೆಟ್ನ್ನು 1,100 ಕೋಟಿ ರೂ.ಗಳಿಂದ 6,000 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಈ ಹಣವನ್ನು ಲಡಾಖ್ ಜನರ ಅಭಿವೃದ್ಧಿಗೆ ಮತ್ತು ಇಲ್ಲಿನ ಸೌಲಭ್ಯಗಳನ್ನು ಹೆಚ್ಚಿಸಲು ಬಳಸಲಾಗುತ್ತಿದೆ. ರಸ್ತೆಗಳು, ನೀರು, ಶಿಕ್ಷಣ, ವಿದ್ಯುತ್ ಸರಬರಾಜು ಮತ್ತು ಉದ್ಯೋಗದ ವಿಷಯದಲ್ಲಿ ಲಡಾಖ್ ಬದಲಾಗುತ್ತಿದೆ. ಕಾರ್ಗಿಲ್ ಸೇರಿದಂತೆ ಲಡಾಖ್ ಪ್ರದೇಶವನ್ನು 4ಜಿ ನೆಟ್ವರ್ಕ್ನೊಂದಿಗೆ ಸಂಪರ್ಕಿಸುವ ಕೆಲಸವೂ ನಡೆಯುತ್ತಿದೆ. ಕೆಲ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಆಮೂಲಾಗ್ರವಾಗಿ ಬದಲಾವಣೆ ಕಂಡಿದೆ. ಹಿಮಾವೃತ್ತ ಪರ್ವತಗಳು, ಹಸಿರಿನ ಪರಿಸರ, ಪುರಾತನ ಮಠ ಮತ್ತು ಮಂದಿರಗಳು, ಮಸೀದಿಗಳು, ಬೌದ್ಧ ವಿಹಾರಗಳನ್ನು ನೋಡಲು ದೇಶ ಹಾಗೂ ವಿದೇಶದ ಜನರು ಕಾರ್ಗಿಲ್ ಮತ್ತು ಲೇಹ್ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕದಾಗಿ ಮೂಲಸೌಕರ್ಯಗಳೂ ವಿಕಾಸಗೊಂಡಿವೆ. ಮಾತ್ರವಲ್ಲ, ಇದರಿಂದ ಸ್ಥಳೀಯ ಆರ್ಥಿಕತೆಗೆ ಬಲ ಬಂದಿದೆ.