ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ ಯುವಕ: ಪ್ರಾಣ ಉಳಿಸಿದ ರೈಲ್ವೆ ಪೊಲೀಸ್​; ವಿಡಿಯೋ ವೈರಲ್​! Viral Video

ರೈಲು ಹಾಗೂ ಫ್ಲಾಟ್​ಪಾರ್ಮ್​ ನಡುವೆ ಸಿಲುಕಿಕೊಂಡಿರುವ ಯುವಕನನ್ನು ರಕ್ಷಿಸುತ್ತಿರುವ ಆರ್​.ಪಿ.ಎಫ್​ ಸಿಬ್ಬಂದಿ
ರೈಲು ಹಾಗೂ ಫ್ಲಾಟ್​ಪಾರ್ಮ್​ ನಡುವೆ ಸಿಲುಕಿಕೊಂಡಿರುವ ಯುವಕನನ್ನು ರಕ್ಷಿಸುತ್ತಿರುವ ಆರ್​.ಪಿ.ಎಫ್​ ಸಿಬ್ಬಂದಿ
Published on
ವೈರಲ್​: ಭಾರತದಲ್ಲಿ ದಿನಕ್ಕೆ ಲಕ್ಷಾಂತರ ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ರೈಲನ್ನು ಅವಲಂಭಿಸಿದ್ದಾರೆ. ಆದರೆ ಈ ರೈಲನ್ನು ಏರುವಾಗ ಅಥವಾ ಇಳಿಯುವಾಗ ನಡೆಯುವ ಚಿಕ್ಕ ತಪ್ಪು ಸಹ ದೊಡ್ಡ ಅಪಾಯವನ್ನುಂಟು ಮಾಡಬಲ್ಲದು.
ಕೆಲದಿನಗಳಿಂದ ಸೋಷಿಯಲ್​ ಮೀಡಿಯಾನಲ್ಲಿ ರೈಲಿನಿಂದ ಇಳಿಯುಲು ಹೋಗಿ ಸಾವಿನ ದವಡೆ ತಲುಪಿದ ವ್ಯಕ್ತಿಯೊಬ್ಬನನ್ನು ರೈಲ್ವೆ ಪೊಲೀಸ್​ (RPF) ಪ್ರಾಣ ರಕ್ಷಣೆ ಮಾಡಿರುವ ವಿಡಿಯೋ ಎಲ್ಲಡೆ ವೈರಲ್ (Viral Video)​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ರೈಲು ಇನ್ನೇನು ಫ್ಲಾಟ್​ಪಾರ್ಮ್​ ತಲುಪಿತು ಎನ್ನುವಷ್ಟರಲ್ಲಿ ರೈಲಿನಿಂದ ಇಳಿಯ ಯತ್ನಿಸಿದ ಯುವಕನೊಬ್ಬ ರೈಲು ಹಾಗೂ ಫ್ಲಾಟ್​ಪಾರ್ಮ್​ ನಡುವೆ ಸಿಲುಕಿಕೊಂಡಿದ್ದಾನೆ.
ಇದನ್ನು ನೋಡಿದ ರೈಲ್ವೆ ಪೊಲೀಸ್​ ಸಿಬ್ಬಂದಿ ತಕ್ಷಣ ಆ ವ್ಯಕ್ತಿಯನ್ನು ಹಿಡಿದು ಎಳೆದ ಪರಿಣಾಮ ಯಾವುದೇ ಪ್ರಾಣಾಪಾಯವಿಲ್ಲದೆ, ಜೀವಂತವಾಗಿ ಹೊರಬಂದಿರುವುದನ್ನು ನಾವು ನೋಡಬಹುದಾಗಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಯುವಕನ ಪ್ರಾಣವನ್ನು ಕಾಪಾಡಿದ ಆರ್​ಪಿಎಫ್​ ಅಧಿಕಾರಿಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ಹರಿದುಬಂದಿದೆ. ಈ ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ನನ್ನದೊಂದು ಸಲಾಂ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
ರೈಲ್ವೆಯಲ್ಲಿ ಈ ರೀತಿಯ ಅಫಘಾತಗಳು ನಿರಂತರವಾಗಿ ನಡೆಯುತ್ತಿವೆ, ಇದಕ್ಕೊಂದು ಶಾಶ್ವತ ಪರಿಹಾರದ ಅಗತ್ಯವಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಸಾಹಸಕ್ಕೆ ಮುಂದಾದ ಅಧಿಕಾರಿಗೆ ಇಲಾಖೆ ಪ್ರಮೋಷನ್​ ಅಥವಾ ಧನ ಸಹಾಯ ನೀಡಬೇಕು ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net