ಒಂದೇ ಒಂದು ಸಣ್ಣ ಎಡವಟ್ಟು! ಸ್ನೇಹಿತರ ಕಣ್ಣೆದುರೇ ಹಾರಿಹೋಯ್ತು ಉದ್ಯಮಿಯ ಪ್ರಾಣಪಕ್ಷಿ | Snake Bite

ಸಾಂದರ್ಭಿಕ ಚಿತ್ರ, ಫೋಟೋ ಕೃಪೆ: ಶಟರ್ಸ್​ ಸ್ಟಾಕ್​
ಸಾಂದರ್ಭಿಕ ಚಿತ್ರ, ಫೋಟೋ ಕೃಪೆ: ಶಟರ್ಸ್​ ಸ್ಟಾಕ್​
Published on

ಪ್ರಮುಖ ಮುಖ್ಯಾಂಶಗಳು

  • ಸ್ನೇಹಿತರಿಗೆ ಹೆದರಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಯುವಕ
  • ಸಣ್ಣ ಕಾಮನ್ ಕ್ರೇಟ್​ ಹಾವಿನ ಕಡಿತಕ್ಕೆ ಉದ್ಯಮಿ ಬಲಿ
ಹೈದರಾಬಾದ್: ಸ್ನೇಹಿತರ ಜೊತೆಗೆ ತನ್ನ ಫಾರ್ಮ್​ಹೌಸ್​ನಲ್ಲಿ ಮೋಜು ಮಸ್ತಿಯಲ್ಲಿದ್ದ ಉದ್ಯಮಿ ಮಾಡಿದ ಸಣ್ಣ ಎಡವಟ್ಟಿನಿಂದ ಆತನ ಪ್ರಾಣಪಕ್ಷಿಯೇ ಹಾರಿಹೋದ ಘಟನೆ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್‌ನಲ್ಲಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ರಾಜೇಂದ್ರನಗರದ ಪ್ರಮುಖ ಉದ್ಯಮಿ ಸೈಯದ್ ಮೊಹಿದ್ದೀನ್ ಹುಸೇನಿ (30) ಎಂದು ಗುರುತಿಸಲಾಗಿದೆ. ತನ್ನ ಫಾರ್ಮ್​ಹೌಸ್​ನಲ್ಲಿ ಸ್ನೇಹಿತರೊಂದಿಗೆ ಖುಷಿಯ ಕ್ಷಣವನ್ನು ಆನಂದಿಸುತ್ತಿದ್ದ ಸೈಯದ್​, ಬೆಳಗ್ಗೆ ಎದ್ದಾಗ ಒಂದು ಸಣ್ಣ ಕಾಮನ್ ಕ್ರೈಟ್ ವಿಷಕಾರಿ ಹಾವಿನ ಮರಿಯನ್ನು ನೋಡಿದ್ದಾರೆ. ಉರಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಉದ್ಯಮಿ, ಸಣ್ಣ ಹಾವೇನು ಮಾಡುತ್ತೆ? ಕಚ್ಚಿದರೂ ಅಷ್ಟೊಂದು ವಿಷವೇನು ಹೋಗಲ್ಲ ಎಂದು ಭಾವಿಸಿ, ಅದನ್ನು ಕೈಯಲ್ಲಿ ಹಿಡಿದು, ಸ್ನೇಹಿತರಿಗೆ ಹೆದರಿಸಲು ಹೋಗಿದ್ದೇ ಈ ದುರಂತ ಸಂಭವಿಸಲು ಕಾರಣ. 

ಹಾವುಗಳ ಬಗ್ಗೆ ಇರಲಿ ಎಚ್ಚರ 

ಮಲಗಿದ್ದ ಸ್ನೇಹಿತರಿಗೆ ಹಾವು ಬಿಡುವುದಾಗಿ ತಮಾಷೆ ಮಾಡಲು ಹೋದ ಸೈಯದ್​ ಬಲಗೈಗೆ ಸಣ್ಣ ಕಾಮನ್​ ಕ್ರೇಟ್​ ಹಾವಿನ ಕಡಿದಿದೆ. ಇದನ್ನು ಕಡೆಗಣಿಸಿದ ಉದ್ಯಮಿ, ಅಷ್ಟಾಗಿ ತಲೆಕಡಿಸಿಕೊಳ್ಳಲಿಲ್ಲ. ಆದರೆ, ಹಾವಿನಲ್ಲಿದ್ದ ಅತ್ಯಂತ ಅಪಾಯಕಾರಿ ನ್ಯೂರೋಟಾಕ್ಸಿಕ್ ವಿಷವು ಆತನ ದೇಹದಲ್ಲಿನ ಕೆಲಸಗಳನ್ನು ಕೆಲವು ನಿಮಿಷಗಳಲ್ಲೇ ನಿಲ್ಲಿಸಿತು. ಉಸಿರಾಡಲು ಪರದಾಡಿ, ದಿಢೀರ್ ಕುಸಿದ ಸೈಯದ್​ನನ್ನು ನೋಡಿ ಆತಂಕಗೊಂಡ ಸ್ನೇಹಿತರು, ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರೊಳಗೆ ಯುವಕನ ಪ್ರಾಣಪಕ್ಷಿ ಹಾರಿಹೋಗಿತ್ತು,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net