ಕೆಲವರಂತು ಇದು ನಮ್ಮಿಂದ ಮಾತ್ರ ಸಾಧ್ಯವೇ ಇಲ್ಲ ಎಂದಿದ್ದಾರೆ. ಈ ಹಿಂದೆಯೆಲ್ಲ ಕೂಡು ಕುಟುಂಬಗಳು ಹಳ್ಳಿ-ಪಟ್ಟಣಗಳಲ್ಲಿದ್ದವು. ಒಂದೇ ಮನೆಯಲ್ಲಿ 20ಕ್ಕೂ ಹೆಚ್ಚು ಮಂದಿ ವಾಸ ಮಾಡುವುದಲ್ಲದೇ, ಜೀವನವನ್ನು ಖುಷಿ, ನೆಮ್ಮದಿಯಿಂದ ಬದುಕಿದ ಹಲವು ನಿದರ್ಶನಗಳಿವೆ. ಆದರೆ, ಇಂದಿನ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳು ತೀರ ವಿರಳ. ಆದರೆ, ಭಾರತದ ಒಂದು ದೂರದ ಹಳ್ಳಿಯಲ್ಲಿ, ವಿಚಿತ್ರ ಮತ್ತು ಅಸಾಮಾನ್ಯ ಮಹಾ ಸಾಮ್ರಾಜ್ಯಯೊಂದು ಇರುವುದು ನಿಜಕ್ಕೂ ಅಚ್ಚರಿ ಉಂಟುಮಾಡುತ್ತದೆ.