TMC slams EC over SIR | ಎಸ್​ಐಆರ್​ ಹೃದಯಹೀನ ವಿಧಾನ; ಮುಖ್ಯ ಚುನಾವಣಾ ಆಯುಕ್ತರ ಕೈಗೆ ರಕ್ತ ಅಂಟಿದೆ ಎಂದು ಟಿಎಂಸಿ ಆರೋಪ

TMC slams EC over SIR  | ಚುನಾವಣಾ ಆಯೋಗದ ಕೇಂದ್ರ ಕಚೇರಿ
TMC slams EC over SIR | ಚುನಾವಣಾ ಆಯೋಗದ ಕೇಂದ್ರ ಕಚೇರಿ
Published on
ದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ಒತ್ತಡದಿಂದಾಗಿ ರಾಜ್ಯದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ರ ಕೈಗಳಿಗೆ ರಕ್ತ ಅಂಟಿದೆ ಎಂದು ಟೀಕಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು ಪಶ್ಚಿಮ ಬಂಗಾಳದಲ್ಲಿ ದೊಡ್ಡ ಸದ್ದು ಮಾಡಿದ್ದು, ಇದು ಬಂಗಾಳಿ ಮತ್ತು ಅಲ್ಪಸಂಖ್ಯಾತ ಮತದಾರ ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳಲು ಬಿಜೆಪಿ ರೂಪಿಸಿದ ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರೇನ್ ನೇತೃತ್ವದ 10 ಸದಸ್ಯರ ಟಿಎಂಸಿ ನಿಯೋಗವು, ಅಶೋಕ ರಸ್ತೆಯ ನಿರ್ವಚನ ಸದನದಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಅವರ ತಂಡದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದು, ಈ ಸಭೆಯು ಏಕಪಕ್ಷೀಯವಾಗಿತ್ತು, ಸಿಇಸಿ ಒಂದು ಗಂಟೆ ನಿರಂತರವಾಗಿ ಮಾತನಾಡಿದರು. ನಾವು ಮಾತನಾಡುವಾಗ ಅವರು ನಮಗೆ ಅಡ್ಡಿಪಡಿಸಲಿಲ್ಲ ಎಂದು ಟಿಎಂಸಿ ನಾಯಕರು ಹೇಳಿಕೊಂಡಿದ್ದು. ಈ ಸಂದರ್ಭದಲ್ಲಿ ನಾವು ಐದು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದು, ಇದರಲ್ಲಿ ಚುನಾವಣಾ ಆಯುಕ್ತರು ಯಾವುದಕ್ಕೂ ಉತ್ತರಿಸಲಿಲ್ಲ ಎಂದು ತಿಳಿಸಿದರು.
ಸಭೆಯ ಬಳಿಕ ಚುನಾವಣಾ ಆಯೋಗದ ಕೇಂದ್ರ ಕಚೇರಿಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಡೆರೆಕ್ ಒ'ಬ್ರೇನ್, ಈ ಕ್ರೂರ ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಸಾವನ್ನಪ್ಪಿದ 38 ಬಿಎಲ್‌ಒಗಳು ಮತ್ತು ಇತರ ಅಧಿಕಾರಿಗಳ ಪಟ್ಟಿಯನ್ನು ನಾವು ಹಸ್ತಾಂತರಿಸಿದ್ದೇವೆ. ಆಯೋಗವು ನಮ್ಮ ಪ್ರಶ್ನೆಗಳಿಗೆ ಯಾವುದೇ ಉತ್ತರವನ್ನು ನೀಡಲಿಲ್ಲ ಎಂದು ತಿಳಿಸಿದ್ದಾರೆ.
ಈ ನಿಯೋಗದಲ್ಲಿ ಸಂಸದರಾದ ಮಹುವಾ ಮೊಯಿತ್ರಾ, ಕಲ್ಯಾಣ್ ಬ್ಯಾನರ್ಜಿ, ಸಾಕೇತ್ ಗೋಖಲೆ, ಡೋಲಾ ಸೇನ್, ಶತಾಬ್ದಿ ರಾಯ್, ಸಜ್ದಾ ಅಹ್ಮದ್, ಪ್ರತಿಮಾ ಮೊಂಡಲ್, ಮಮತಾ ಬಾಲಾ ಠಾಕೂರ್ ಮತ್ತು ಪ್ರಕಾಶ್ ಚಿಕ್ ಬರಾಕ್ ಇದ್ದರು ಎಂದು ತಿಳಿದುಬಂದಿದೆ.
ಟಿಎಂಸಿ ಎಸ್‌ಐಆರ್ ಪರಿಕಲ್ಪನೆಯನ್ನು ವಿರೋಧಿಸುವುದಿಲ್ಲ, ಆದರೆ ಚುನಾವಣಾ ಆಯೋಗ ಮಾಡುತ್ತಿರುವ ಯೋಜಿತವಲ್ಲದ ವಿಧಾನವನ್ನು ಬಲವಾಗಿ ವಿರೋಧಿಸುತ್ತದೆ, ಎಸ್‌ಐಆರ್ ಪ್ರಕ್ರಿಯೆಯ ವಿಧಾನ ಹೃದಯಹೀನವಾಗಿದೆ ಎಂದು ಓ'ಬ್ರೇನ್ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net