ಬಿಜೆಪಿಗೆ ಪಕ್ಷಾಂತರಗೊಂಡ ಚಡ್ಡಾ ಅವರು ತಮ್ಮ ನಿರ್ದಾರವನ್ನು ಸಮರ್ಥಿಸಿಕೊಂಡು ಮಾತನಾಡಿದ್ದರು. ನಾನು ಕಳೆದ 15 ವರ್ಷದಿಂದ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ನಾನು ಸರಿಯಾದ ವ್ಯಕ್ತಿ ಆದರೆ, ತಪ್ಪು ಪಕ್ಷದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಅನಿಸುತ್ತಿದೆ. ಭಯದಿಂದ ಪಕ್ಷ ಬಿಡುತ್ತಿಲ್ಲ. ವಿಷಕಾರಿ ವಾತಾವರಣದಿಂದ ಹೊರಬರುತ್ತಿದ್ದೇನೆ ಎಂದು ಹೇಳಿದ್ದರು. ಕೇವಲ ಒಬ್ಬರಲ್ಲ, ಏಳು ಸಂಸದರು ಪಕ್ಷದೊಂದಿಗೆ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದರೆ ಪಕ್ಷದಲ್ಲೇ ದೋಷವಿದೆ ಎಂದಿದ್ದರು, (ಏಜೆನ್ಸೀಸ್).