ಮಕರ ಸಂಕ್ರಾಂತಿ ಹಿನ್ನಲೆ, ಪ್ರಯಾಗ್‌ರಾಜ್, ಕಾನ್ಪುರ, ವಾರಣಾಸಿ, ಉನ್ನಾವ್, ಮೀರತ್ ಮತ್ತು ಬಿಜ್ನೋರ್ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಪ್ರಮುಖ ಗಂಗಾ ಘಾಟ್‌ಗಳಲ್ಲಿ ಭಕ್ತರ ದಂಡು ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಯಾತ್ರಿಕರು ಗಂಗಾ ಮತ್ತು ಸರಯು ಮುಂತಾದ ನದಿಗಳಲ್ಲಿ ಸ್ನಾನ ಮಾಡಿ ದೇಣಿಗೆ ನೀಡುತ್ತಾರೆ. ಹಾಗಾಗಿ ಅವರುಗಳಿಗೆ ಅನುಕೂಲವಾಗುವಂತೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.