ಕೊನೆಗೊಂಡಿತು ವರ್ಷಗಳ ಹೋರಾಟ: ಜಲಾಲಾಬಾದ್ ಇನ್ಮುಂದೆ 'ಪರಶುರಾಮ್‌ಪುರಿ'; ಹೆಸರು ಬದಲಾವಣೆಗೆ ಯೋಗಿ ಸರ್ಕಾರ ಗ್ರೀನ್ ಸಿಗ್ನಲ್! Jalalabad Changed as Parashurampuri
ಜಲಾಲಾಬಾದ್ ಅನ್ನು ಪರಶುರಾಮ್‌ಪುರಿ ಎಂದು ಮರುನಾಮಕರಣ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉತ್ತರ ಪ್ರದೇಶದ ಶಹಾಜಾನ್‌ಪುರ ಜಿಲ್ಲೆಯ ಜಲಾಲಾಬಾದ್ ನಗರದ ಹೆಸರು ಬದಲಾವಣೆ
ಜಲಾಲಾಬಾದ್ ಅನ್ನು ಪರಶುರಾಮ್‌ಪುರಿ ಎಂದು ಮರುನಾಮಕರಣ
ಮರುನಾಮಕರಣ ಮಾಡಲು ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ಒಪ್ಪಿಗೆ
ಲಖನೌ: ಉತ್ತರಪ್ರದೇಶ ರಾಜ್ಯದ ಶಹಾಜಾನ್‌ಪುರ ಜಿಲ್ಲೆಯ ಜಲಾಲಾಬಾದ್ ಎಂಬ ನಗರವನ್ನು ಪರಶುರಾಮ್‌ಪುರಿ (Jalalabad Changed as Parashurampuri) ಎಂದು ಮರುನಾಮಕರಣ ಮಾಡಲು ಯೋಗಿ ಆದಿತ್ಯನಾಥ ನೇತೃತ್ವದ ಕ್ಯಾಬಿನೇಟ್ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಬ್ರಿಜೆಶ್ ಪಾಠಕ್, ಜಲಾಲಾಬಾದ್ ಅನ್ನು ಮುಂದಿನ ದಿನಗಳಲ್ಲಿ ಪರಶುರಾಮ್‌ಪುರಿ ಎಂದು ಕರೆಯಲಾಗುವುದೆಂದು ತಿಳಿಸಿದ್ದಾರೆ.
ಈ ಜಲಾಲಾಬಾದ್ನ ಹೆಸರನ್ನು ಬದಲಿಸಬೇಕೆಂದು ಅಲ್ಲಿಯ ಜನರು ಬಹಳ ಕಾಲದಿಂದ ಹೋರಾಟ ನಡೆಸುತ್ತಿದ್ದರು. ನಂಬಿಕೆ ಪ್ರಕಾರ ಭಗವಾನ್ ಪರಶುರಾಮರು ಇದೇ ಪ್ರದೇಶದಲ್ಲಿ ಜನಿಸಿದ್ದರೆಂದು ಹೇಳಲಾಗುತ್ತಿರುವ ಕಾರಣ ಈ ನಗರಕ್ಕೆ ಪರಶುರಾಮ್‌ಪುರಿ ಎಂದೇ ಹೆಸರನ್ನು ಇಡಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.
ಈ ನಗರದ ಹೆಸರನ್ನು ಬದಲಾವಣೆ ಮಾಡಬೇಕೆನ್ನುವುದು ಕಳೆದ ವರ್ಷವೇ ನಿರ್ಧಾರವಾಗಿತ್ತು. ಆದರೆ ಕೆಲ ಆಡಳಿತ ಕಾರ್ಯಗಳಿಂದ ಇದು ವಿಳಂಬವಾಗಿದ್ದು, ಇಂದು ಇದಕ್ಕೆ ಸರಿಯಾದ ಸಮಯ ಕೂಡಿ ಬಂದಿದೆ. ಇದು ಪ್ರತಿ ಸನಾತನಿಗೆ ಖಂಡಿತವಾಗಿ ಸಂತೋಷವನ್ನು ತಂದಿದೆ ಎಂದು ಕೇಂದ್ರ ಸಚಿವ ಜತಿನ್ ಪ್ರಸಾದ್ ಹೇಳಿದ್ದಾರೆ.
ಈದೀಗ ಹೆಸರನ್ನು ಬದಲಾವಣೆ ಮಾಡಲು ಕ್ಯಾಬಿನೆಟ್ ಒಪ್ಪಿಗೆ ದೊರೆತಿದೆ. ಇನ್ನು ಸರ್ಕಾರದ ಅಧಿಸೂಚನೆ ಹೊರಬೀಳುತ್ತಿದ್ದಂತೆ ಜಲಾಲಾಬಾದ್ ಎಂಬ ಹೆಸರು ಕೊನೆಗೊಂಡು ಪರಶುರಾಮ್‌ಪುರಿ ಎಂಬ ಹೆಸರು ಅಮರವಾಗಲಿದೆ ಎಂದಿದ್ದಾರೆ, (ಏಜನ್ಸೀಸ್).