ಈ ಘಟನೆಯು ನಡೆದಿರುವುದು 3ರಿಂದ 4 ವರ್ಷದ ಹಿಂದೆ. ಸ್ಥಳೀಯ ಇ-ಮಿತ್ರಾ ಸೇವಾ ಕೇಂದ್ರದ ಮಹಿಪಾಲ್ ಎಂಬುವವನು,ತನ್ನ ಹಿರಿಯ ಸಹೋದರಿಯನ್ನು ಪ್ರೀತಿಯ ಬಲೆಗೆ ಬೀಳುವಂತೆ ಮಾಡಿ ಆಕೆಯ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿದ್ದ. ಈ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿದ. ಆತನ ಸ್ನೇಹಿತರಾದ ಶಿವರಾಜ್, ಗೋಪಾಲ್, ವೀಜಾರಾಮ್, ದಿನೇಶ್, ಮನೋಜ್ ಮತ್ತು ಪುಖರಾಜ್ ಎಂಬುವವರನ್ನು ಕರೆಸಿ, ಆಕೆಯ ಮೇಲೆ ನಾಲ್ಕು ವರ್ಷದಿಂದ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗದಿದ್ದ ಕಾರಣ, ಸುದೀರ್ಘ ಕಿರುಕುಳಕ್ಕೆ ಬೇಸತ್ತು ದೊಡ್ಡ ಸಹೋದರಿ ಕಳೆದ ಮಾರ್ಚ್ 20 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.