India win | ಯಶಸ್ವಿ ಜೈಸ್ವಾಲ್ ಶತಕ; ರೋಹಿತ್​, ಕೊಹ್ಲಿ ಅರ್ಧಶತಕ: ಹರಿಣಗಳ ವಿರುದ್ಧ ಸರಣಿ ಗೆದ್ದ ಭಾರತ

India win |  ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾ
India win | ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾ
Published on
ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇಯ ಏಕದಿನ ಪಂದ್ಯದಲ್ಲಿ ಭಾರತ(India win) 9 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ರಿಂದ ಗೆದ್ದುಕೊಂಡಿದೆ.
ಹರಿಣಗಳು ನೀಡಿದ 271 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್​ ಶರ್ಮಾ ಅಮೋಘ 155 ರನ್​ಗಳ ಜತೆಯಾಟ ಆಡಿತು. ಯುವ ಆಟಗಾರ ಜೈಸ್ವಾಲ್ 121 ಎಸೆತಗಳಲ್ಲಿ 116ರನ್​ ಸಿಡಿಸುವ ಮೂಲಕ ತಮ್ಮ ಮೊದಲ ಏಕದಿನ ಶತಕ ಬಾರಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದ ಕಿಂಗ್​ ಕೊಹ್ಲಿ ತಮ್ಮ 45 ಎಸೆತಗಳಲ್ಲಿ 65 ರನ್​ ಗಳಿಸುವ ಮೂಲಕ 76ನೇ ಏಕದಿನ ಅರ್ಧಶತಕ ಪೂರೈಸಿದ್ದಾರೆ. ಇದಕ್ಕೆ ಮೊದಲು ಮಾಜಿ ನಾಯಕ ರೋಹಿತ್​ 73 ಬಾಲ್​ಗಳಲ್ಲಿ 75 ರನ್​ಗಳಿಸಿ ಕೇಶವ ಮಹಾರಾಜ್ ವಿಕೆಟ್​ ಒಪ್ಪಿಸಿದರು.
ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಲು ಬಂದ ಹರಿಣಗಳ ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ನಂತರ ಜತೆಯಾದ ನಾಯಕ ಟೆಂಬಾ ಬವುಮ ಮತ್ತು ಆಫ್ರಿಕಾ ಸ್ಟಾರ್​ ಓಪನರ್​ ಕ್ವಿಂಟನ್ ಡಿ ಕಾಕ್ ಸೇರಿ 113 ರನ್​ಗಳ ಉತ್ತಮ ಜತೆಯಾಟವಾಡಿದರು. ನಾಯಕ 48 ರನ್​ಗಳಿಸಿ ರವೀಂದ್ರ ಜಡೇಜಾಗೆ ತಮ್ಮ ವಿಕೆಟ್​ ಒಪ್ಪಿಸಿದರು.
ಹರಿಣಗಳ ಪರ ಏಕಾಂಗಿ ಹೋರಾಟ ನಡೆಸಿದ ಡಿ ಕಾಕ್(106ರನ್​,89 ಬಾಲ್​) ಅದ್ಬುತ ಶತಕ ಸಿಡಿಸಿ ಸಂಭ್ರಮಿಸಿದರು. ನಂತರ ಬಂದ ಮ್ಯಾಥ್ಯೂ ಬ್ರೀಟ್ಜ್ಕೆ(24 ರನ್​) ಮತ್ತು ಐಡೆನ್ ಮಾರ್ಕ್ರಾಮ್(01) ರನ್​ಗಳಿಸಿ ಬಹುಬೇಗ ಪೆವಿಲಿಯನ್​ ಸೇರಿದರು. ನಂತರ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದ ಡೆವಾಲ್ಡ್ ಬ್ರೆವಿಸ್ (29ರನ್​) ಹಾಗೂ ಮಾರ್ಕೊ ಜಾನ್ಸೆನ್ (17ರನ್​) ಗಳಿಸಿ ನಿರಾಸೆ ಪ್ರದರ್ಶನ ನೀಡಿದರು.
ಭಾರತ ಪರವಾಗಿ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 4 ವಿಕೆಟ್​ ಕಿತ್ತು ಹರಿಣಗಳ ಸರ್ವಪತನಕ್ಕೆ ಕಾರಣರಾದರು. ಅಲ್ಲದೆ, ಅರ್ಶ್ದೀಪ್ ಸಿಂಗ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್​ ಪಡೆದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net