ಮುಂದಿನ ಪ್ರಧಾನಿ ಅಭ್ಯರ್ಥಿ ಹೀಗೆ ಮಾಡ್ತಾರಾ? ರಾಹುಲ್ ಗಾಂಧಿ ಮೊಳಕೈ ಏಟಿಗೆ ಬಿಜೆಪಿ ಸಂಸದನ ಆಕ್ರೋಶ! Ravi Kishan

ದೆಹಲಿ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಆಕ್ರಮಣಕಾರಿ ವರ್ತನೆ ತೋರಿದ್ದಾರೆಂದು ಬಿಜೆಪಿ ಸಂಸದ ರವಿ ಕಿಶನ್ ಕಿಡಿಕಾರಿದ್ದಾರೆ. ಡಿಕೆಶಿ ತಳ್ಳಾಟದ ವಿಡಿಯೋ ಹಾಗೂ ಸ್ಪಷ್ಟನೆಯ ಸಂಪೂರ್ಣ ವಿವರ ಇಲ್ಲಿದೆ.
BJP MP Ravi Kishan condemns Rahul Gandhi's conduct during the protest
ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ವರ್ತನೆ ಖಂಡಿಸಿದ ಬಿಜೆಪಿ ಸಂಸದ ರವಿ ಕಿಶನ್
Published on: 

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ರಾಜೀನಾಮೆಯನ್ನು ಆಗ್ರಹಿಸಿ, ಲೋಕ ಸಭಾ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಇಂಡಿ ಮೈತ್ರಿಕೂಟ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿಸಿದೆ.

ಈ ಸಂದರ್ಭದಲ್ಲಿ, ದೆಹಲಿ ಪೊಲೀಸರು ಹಾಗು ಪ್ರತಿಭಟನೆಯಲ್ಲಿ ಸೇರಿದ್ದ ಜನರೊಂದಿಗೆ ರಾಹುಲ್​ ಗಾಂಧಿ ತೋರಿರಿವ ವರ್ತನೆ ಈಗ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ. ರಾಹುಲ್​ ಗಾಂಧಿಯ ಆಕ್ರಮಣ ಭರಿತ ಶೈಲಿಗೆ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್​ ಆಕ್ರೋಶ ಹೊರಹಾಕಿದ್ದಾರೆ.

ಮುಂದಿನ ಪ್ರಧಾನಿ ಹೀಗೆ ಮಾಡ್ತಾರಾ?

ಸರ್ಕಾರದ ವಿರುದ್ಧ ಪ್ರತಿಭಟನೆ ಹೋರಾಟ ಮಾಡುವುದು ಇದೇ ಮೊದಲ ಬಾರಿಯಲ್ಲ. ಆದರೆ ದೇಶದ ಮುಂದಿನ ಪ್ರಧಾನಿ ಆಗಬೇಕಿರುವ ರಾಹುಲ್​ ಗಾಂಧಿ, ತನ್ನ ಪಕ್ಷದವರನ್ನೇ ತಳ್ಳುತ್ತಾ, ಮೊಳಕೈ ಇಂದು ಗುದ್ದುವುದು ಎಷ್ಟು ಸರಿ ಎಂದು ರವಿ ಕಿಶನ್​ ವ್ಯಂಗ್ಯವಾಡಿದ್ದಾರೆ.

ಅಧಿಕಾರಕ್ಕೆ ಬರುವ ಮೊದಲೇ, ತನ್ನ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ಈ ಆಸಾಮಿ, ಅಪ್ಪಿತಪ್ಪಿ ದೇಶದ ಪ್ರಧಾನಮಂತ್ರಿ ಆದರೆ, ದೇಶಕ್ಕೆ ಅದೆಷ್ಟು ಮೊಳಕೈ ಏಟು ಕೊಡುತ್ತಾನೋ? ಎಂದು ರವಿ ಕಿಶನ್​ ಕಳವಳ ವ್ಯಕ್ತಪಡಿಸಿದ್ದಾರೆ.

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ!

ಈ ಮೊದಲು ರಾಯಪುರ್​ದಲ್ಲಿ ರಾಹುಲ್​ ಗಾಂಧಿ ವಿರುದ್ಧ ಹರಿಹಾಯ್ದಿದ್ದ ರವಿ ಕಿಶನ್​, ಬಿಜೆಪಿಯನ್ನು ಸೋಲಿಸಲು ರಾಹುಲ್​ ಗಾಂಧಿಗೆ ಸಾಧ್ಯವಾಗುತ್ತಿಲ್ಲ. ಅವರ ನೇತೃತ್ವದಲ್ಲಿ ಪಕ್ಷ ಸಾರ್ವಕಾಲಿಕ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ ಅವರ ಮಾನಸಿಕ ಸ್ಥಿಮಿತ ಕಳೆದುಕೊಂಡು, ತನ್ನ ಮನಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆಂದು ಬಿಜೆಪಿ ಸಂಸದ ಆರೋಪಿಸಿದ್ದರು.

Also Read
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾದರೆ ಮೀಸಲಾತಿ ದೊರೆಯಲ್ಲ! ಐತಿಹಾಸಿಕ ತೀರ್ಪು ಪ್ರಕಟಿಸಿದ Supreme Court
BJP MP Ravi Kishan condemns Rahul Gandhi's conduct during the protest

ಡಿಕೆ ತಳ್ಳಿದ ರಾಗಾ?

ನವದೆಹಲಿಯಲ್ಲಿ ಸೋಮವಾರ(ಅ. 12) ನಡೆದ ಇಂಡಿಯಾ ಕೂಟದ ಸುಪ್ರೀಂಕೋರ್ಟ್​ವರೆಗಿನ ಪ್ರತಿಭಟನಾ ಮೆರವಣಿಗೆ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕರ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ತಳ್ಳಿದ ರೀತಿಯ ಒಂದು ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗಿತ್ತು. ಈ ಘಟನೆ ಸುಮಾರು 7.4 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಟ್ರೋಲ್​ ಮಾಡಲಾಗಿತ್ತು.

ಆದರೆ, ಈ ಬಗ್ಗೆ ಸ್ಪಷ್ಟಣೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್​, ಪ್ರತಿಭಟನೆಯ ಸಮಯದಲ್ಲಿ ಯಾರೂ ನನ್ನನ್ನು ತಳ್ಳಲಿಲ್ಲ. ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ರಾಹುಲ್ ಗಾಂಧಿ ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಹಿಂದೆ ಬರುತ್ತಿದ್ದ ವಾಹನವನ್ನು ಹತ್ತುವಂತೆ ಹೇಳಿದರು. ಬಿಜೆಪಿಗೆ ನನ್ನ ಮೇಲೆ ಅಪಾರ ಪ್ರೀತಿ ಇದೆ, ಅದಕ್ಕಾಗಿಯೇ ಅವರು ಇಂತಹ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net