ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ: ಪೆಟ್ರೋಲ್, ಡೀಸೆಲ್ ದಾಸ್ತಾನು ಎಷ್ಟಿದೆ ಬಹಿರಂಗಪಡಿಸಿ; ಕೇಂದ್ರಕ್ಕೆ ಕೇಜ್ರಿವಾಲ್ ಚಾಲೆಂಜ್! Arvind Kejriwal Challenges Central Government
ಭಾರತದಲ್ಲಿ ತೈಲ ಹಾಗೂ ಗ್ಯಾಸ್ ದಾಸ್ತಾನು ಎಷ್ಟಿದೆ? ಬಹಿರಂಗ ಪಡಿಸಿ: ಅರವಿಂದ್ ಕೇಜ್ರಿವಾಲ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಧ್ಯಪ್ರಾಚ್ಯದಲ್ಲಿ ನಿಲ್ಲದ ಸಂಘರ್ಷ
ಭಾರತದಲ್ಲಿ ತೈಲ ಹಾಗೂ ಗ್ಯಾಸ್ ದಾಸ್ತಾನು ಎಷ್ಟಿದೆ? ಬಹಿರಂಗ ಪಡಿಸಿ: ಅರವಿಂದ್ ಕೇಜ್ರಿವಾಲ್
ಕೇಂದ್ರ ಸರ್ಕಾರಕ್ಕೆ ಸವಾಲಾಕಿದ ಆಮ್ ಆದ್ಮಿ ಮುಖ್ಯಸ್ಥ
ಯಾರು ಅವಸರದ ಖರೀದಿ ಮಾಡಬೇಡಿ: ಇಂಧನ ಸಚಿವಾಲಯ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಈಡೀ ವಿಶ್ವದಲ್ಲಿಯೇ ಅಶಾಂತಿ ನೆಲೆಸಿರುವುದಂತು ನಿಜವಾಗಿದೆ. ಅದರಂತೆ ಇದರ ಬಿಸಿ ಭಾರತಕ್ಕೂ ಸಹ ತಟ್ಟಿದ್ದು, ಸಿಲಿಂಡರ್ ಹಾಗೂ ಪೆಟ್ರೋಲ್-ಡೀಸೆಲ್ಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ.
ಈಗ ಇದರ ಕುರಿತಂತೆ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥನಾಗಿರುವ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ (Arvind Kejriwal Challenges Central Government) ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ನಮಗೆ ಮೊದಲು ಮಾಹಿತಿ ಕೊಡಿ!
ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಡೀಸೆಲ್ಗಾಗಿ ಜನ ಮುಗಿ ಬೀಳುತ್ತಿರುವ ವಿಡಿಯೀವೊಂದನ್ನು ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, ನಮ್ಮ ಸರ್ಕಾರ ನಮಗೆ ಯಾವುದರ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ.
ನಮ್ಮ ದೇಶದಲ್ಲಿ ಇಂಧನ ಹಾಗೂ ಗ್ಯಾಸ್ನ ತೊಂದತೆ ಇರುವುದು ಎಲ್ಲರಿಗೂ ತಿಳಿದಿದೆ. ಆದರೆ ನಮ್ಮ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ನ ಎಷ್ಟು ದಿನಗಳ ದಾಸ್ತಾನನ್ನು ಹೊಂದಿದೆ ಎಂದು ಏಕೆ ಬಹಿರಂಗ ಪಡಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ಶೇರ್ ಮಾಡಿರುವ ವಿಡಿಯೋಲೇನಿದೆ?
ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಜನ ಕೈಗೆ ಸಿಕ್ಕ, ಬಕೆಟ್, ಚೆಂಬು, ಪಾತ್ರೆಗಳನ್ನು ಹಿಡಿದು ಪೆಟ್ರೋಲ್ ಬಂಕ್ಗೆ ಜನ ದೌಡಾಯಿಸುತ್ತಿರುವ ವಿಡಿಯೋವೊಂದನ್ನು ಅರವಿಂದ್ ಕೇಜ್ರಿವಾಲ್ ಹಂಚಿಕೊಂಡಿದ್ದಾರೆ.
ಪೆಟ್ರೋಲ್ ಬಂಕ್ನಲ್ಲಿ ತೈಲ ಖಾಲಿಯಾಗುತ್ತಿರುವ ವದಂತಿ ಹಿನ್ನಲೆ ಈ ರೀತಿ ನೂಕಾಟದಲ್ಲಿ ತೊಡಗಿದ್ದಾರೆ. ಸರ್ಕಾರದಿಂದ ಸೂಕ್ತ ಮಾಹಿತಿ ದೊರೆತದ ಹಿನ್ನಲೆ ಈ ರೀತಿಯ ಘಟನೆಗಳು ದೇಶಾದ್ಯಂತ ನಡೆಯುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಯಾರು ಅವಸರದ ಖರೀದಿ ಮಾಡಬೇಡಿ!
ಕೆಲ ದಿನಗಳ ಹಿಂದೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಇಂಧನ ಸಚಿವಾಲಯದ ಅಧಿಕಾರಿಗಳು, ನಮ್ಮ ದೇಶದಲ್ಲಿ ಸುಮಾರು 45 ದಿನಗಳಿಗಾಗುವಷ್ಟು ಗ್ಯಾಸ್ ಹಾಗೂ 75 ದಿನಗಳಿಗೆ ಸಾಕಾಗುವಷ್ಟು ತೈಲದ ಪೂರೈಕೆಯಿದೆ.
ಆದರೆ ಜನ ವದಂತಿಗಳಿಗೆ ಕಿವಿಕೊಟ್ಟು ಅವಸರದ ಖರೀದಿ (Panic Buying) ಮಾಡಿದರೆ ತೊಂದರೆ ಉಂಟಾಗುತ್ತದೆ. ಹಾಗೆಯೇ ನಾವು ಮಧ್ಯಪ್ರಾಚ್ಯದಿಂದ ನಮ್ಮ ಹಡಗುಗಳು ಅಗತ್ಯ ಸಮಾಗ್ರಿಗಳನ್ನು ಹೊತ್ತು ತರುವಂತೆ ಮಾಡಲು ಪ್ರಯತ್ನಶೀಲರಾಗಿದ್ದವೆ ಎಂದು ತಿಳಿಸಿದ್ದರು,(ಏಜನ್ಸೀಸ್).