ಮಹಿಳಾ ವಿಶ್ವಕಪ್ ಗೆಲುವು: ಆಲ್​ರೌಂಡರ್ ಶ್ರೀ ಚರಣಿಗೆ ₹2.5 ಕೋಟಿ ಹಣ, ನಿವೇಶನ ಹಾಗೂ ಗ್ರೂಪ್-1 ಅಧಿಕಾರಿ ಹುದ್ದೆ ನೀಡಿದ ಸಿಎಂ ನಾಯ್ಡು| Sree Charani

ಸಿಎಂ ಚಂದ್ರಬಾಬು ನಾಯ್ಡು ಮತ್ತು ಆಲ್​ರೌಂಡರ್ ಶ್ರೀ ಚರಣಿ
ಸಿಎಂ ಚಂದ್ರಬಾಬು ನಾಯ್ಡು ಮತ್ತು ಆಲ್​ರೌಂಡರ್ ಶ್ರೀ ಚರಣಿ
Published on
ವಿಜಯವಾಡ: ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಲ್​ರೌಂಡರ್ ಶ್ರೀ ಚರಣಿ(Sree Charani) ಅವರಿಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅಭಿನಂದಿಸಿದ್ದು, ಜೊತೆಗೆ 2.5 ಕೋಟಿ ರೂ. ಹಣ, ಕಡಪದಲ್ಲಿ 1000 ಚದರ ಮೀಟರ್ ವಸತಿ ನಿವೇಶನ ಹಾಗೂ ಗ್ರೂಪ್-1 ಅಧಿಕಾರಿ ಹುದ್ದೆಯನ್ನು ಬಹುಮಾನವಾಗಿ ಘೋಷಿಸಿದ್ದಾರೆ.
ಶುಕ್ರವಾರ(ನ. 07) ಉಂಡವಳ್ಳಿಯಲ್ಲಿರುವ ಸಿಎಂ ಚಂದ್ರಬಾಬು ನಾಯ್ಡು ನಿವಾಸಕ್ಕೆ ಆಗಮಿಸಿದ ಶ್ರೀ ಚರಣಿ ಮತ್ತು ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಸಿಎಂ ಮತ್ತು ಅವರ ಪುತ್ರ ನಾರಾ ಲೋಕೇಶ್ ಅಭಿನಂದಿಸಿದ್ದಾರೆ.
ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿಗೆ ಶ್ರೀ ಚರಣಿ ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಸಿಎಂ ನಾಯ್ಡು, ಈ ಗೆಲುವು ಮತ್ತೊಮ್ಮೆ ಭಾರತೀಯ ಮಹಿಳೆಯರ ಶಕ್ತಿ ಮತ್ತು ಪ್ರತಿಭೆಯನ್ನು ಸಾಬೀತುಪಡಿಸಿದೆ. ಶ್ರೀ ಚರಣಿ ಈಗ ದೇಶಾದ್ಯಂತ ಮಹಿಳಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ ಮತ್ತು ಭವಿಷ್ಯದಲ್ಲಿ ಅವರಿಗೆ ಇನ್ನೂ ಅನೇಕ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಇದಕ್ಕೂ ಮುನ್ನ ಗನ್ನವರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶ್ರೀ ಚರಣಿ ಮತ್ತು ಮಿಥಾಲಿ ರಾಜ್ ಅವರನ್ನು ಸಚಿವರಾದ ವಂಗಲಪುಡಿ ಅನಿತಾ, ಎಸ್.ಸವಿತಾ, ಜಿ.ಸಂಧ್ಯಾ ರಾಣಿ, ಆಂಧ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಕೇಸಿನೇನಿ ಶಿವನಾಥ್ (ಚಿನ್ನಿ), ಕಾರ್ಯದರ್ಶಿ ಸನಾ ಸತೀಶ್ ಹಾಗೂ ಎಸ್‌ಎಪಿ ಅಧ್ಯಕ್ಷ ಅನಿಮಿನಿ ರವಿ ನಾಯ್ಡು ಸ್ವಾಗತಿಸಿದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net