ಕುದಿಯುತ್ತಿದ್ದ ಬೆಲ್ಲದ ಕಡಾಯಿಗೆ ಬಿದ್ದ ಕಾರ್ಮಿಕ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ | Worker Dies in Jaggery Pan

ಕುದಿಯುತ್ತಿದ್ದ ಬೆಲ್ಲದ ಕಡಾಯಿಗೆ ಬಿದ್ದು ಕಾರ್ಮಿಕ ಸಾವು
ಕುದಿಯುತ್ತಿದ್ದ ಬೆಲ್ಲದ ಕಡಾಯಿಗೆ ಬಿದ್ದು ಕಾರ್ಮಿಕ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ಬೆಲ್ಲ ತಯಾರಿಕಾ ಘಟಕದಲ್ಲಿ ಭೀಕರ ದುರಂತ
  • ಕುದಿಯುತ್ತಿದ್ದ ಬೆಲ್ಲದ ಕಡಾಯಿಗೆ ಬಿದ್ದು ಕಾರ್ಮಿಕ ಸಾವು
  • ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ದುರ್ಮರಣ
ಮಹಾರಾಷ್ಟ್ರ: ಕೆಲಸ ಮಾಡುತ್ತಿದ್ದಾಗ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕುದಿಯುತ್ತಿದ್ದ ಬೆಲ್ಲದ ಬೃಹತ್ ಕಡಾಯಿಗೆ ಬಿದ್ದು ಮೃತಪಟ್ಟಿದ್ದಾನೆ. ಈ ಭೀಕರ ಅಪಘಾತದ ದೃಶ್ಯ ಘಟಕದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉತ್ತರ ಪ್ರದೇಶದ ಲಖಿಂಪುರ ಮೂಲದ ದಾನಿಶ್ (40), ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ತೆರಳಿ ಬೆಲ್ಲ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುದಿಯುತ್ತಿದ್ದ ಬೆಲ್ಲದ ಕಡಾಯಿಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಸಹ ಕಾರ್ಮಿಕರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದಾನಿಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಸಿಸಿಟಿವಿಯಿಂದ ಕುಟುಂಬಸ್ಥರ ಅನುಮಾನಕ್ಕೆ ತೆರೆ


ಭೀಕರ ಘಟನೆಯ ದೃಶ್ಯ ಘಟಕದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ದಾನಿಶ್‌ ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಕುಟುಂಬಸ್ಥರು ಸಹ ಕಾರ್ಮಿಕರ ಮೇಲೆ ಅನುಮಾನ ವ್ಯಕ್ತಪಡಿಸಿ ಗಲಾಟೆ ಮಾಡಿದ್ದರು. ನಂತರ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ದಾನಿಶ್‌ ಆಕಸ್ಮಿಕವಾಗಿ ಕಡಾಯಿಗೆ ಬಿದ್ದಿರುವುದು ಸ್ಪಷ್ಟವಾಗಿದೆ.

ಆಕಸ್ಮಿಕವಾಗಿ ಕುದಿಯುವ ಕಡಾಯಿ ಬಿದ್ದ 

ದಾನಿಶ್‌

ಇನ್ನು, ಮಾಹಿತಿ ತಿಳಿದು ಈಸಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಕುಟುಂಬಸ್ಥರಿಗೂ ಸಿಸಿಟಿವಿ ದೃಶ್ಯಗಳನ್ನು ತೋರಿಸಿದ್ದು, ದಾನಿಶ್‌ ಕೆಲಸ ಮಾಡುವಾಗಲೇ ಆಕಸ್ಮಿಕವಾಗಿ ಕುದಿಯುತ್ತಿದ್ದ ಬೆಲ್ಲದ ಕಡಾಯಿಗೆ ಬಿದ್ದಿರುವುದು ಸ್ಪಷ್ಟವಾಗಿದೆ. ಇದಾದ ಬಳಿಕ ಕುಟುಂಬಸ್ಥರು ಸುಮ್ಮನಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net