'ಶ್ರಮವಹಿಸೋ ಅಗತ್ಯವಿಲ್ಲ, ನಾನು ಪೋಸ್ಟ್ ಡಿಲೀಟ್ ಮಾಡಲ್ಲ'; ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಬೆನ್ನಲ್ಲೇ BJP ಸಂಸದೆ ಮಗಳ ಇನ್​ಸ್ಟಾ ಸ್ಟೋರಿ ವೈರಲ್

Archita Sarangi Instagram Post on Dharmendra Pradhan Resignation
Archita Sarangi Instagram Post on Dharmendra Pradhan Resignation
Published on

ಪ್ರಮುಖ ಮುಖ್ಯಾಂಶಗಳು

  • NEET ಪೇಪರ್ ಲೀಕ್, ವಿದ್ಯಾರ್ಥಿಗಳ ಪ್ರತಿಭಟನೆಗೆ ಬಾಗಿದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ.
  • ವಿದ್ಯಾರ್ಥಿಗಳನ್ನು ಬೆಂಬಲಿಸಿ ಪೋಸ್ಟ್ ಹಂಚಿಕೊಂಡ ಬಿಜೆಪಿ ಸಂಸದೆ ಮಗಳು ಅರ್ಚಿತಾ ಸಾರಂಗಿ
  • ಯಾರ ಒತ್ತಡಕ್ಕೂ ಮಣಿದು ಪೋಸ್ಟ್ ಅಳಿಸಿ ಹಾಕೋಲ್ಲ ಎಂದು ಖಡಕ್​ ಟಾಂಗ್​ ಕೊಟ್ಟ ಅರ್ಚಿತಾ
Archita Sarangi Instagram Post on Dharmendra Pradhan Resignation: ಧರ್ಮೇಂದ್ರ ಪ್ರಧಾನ್​ ಅವರು ನೀಟ್​ ಪ್ರಶ್ನೆ ಪತ್ರಿಕೆ ಲೀಕ್​ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಜೈ ಹಿಂದ್​​ ಎಂದು ಒಡಿಶಾದ ಬಿಜೆಪಿ ಸಂಸದೆ ಹಾಗೂ ಮಾಜಿ ಐಎಎಸ್ ಅಧಿಕಾರಿ ಅಪರಾಜಿತಾ ಸಾರಂಗಿ ಅವರ ಮಗಳು ಅರ್ಚಿತಾ ಸಾರಂಗಿ ಹಾಕಿದ್ದ ಪೋಸ್ಟ್ ಹಂಚಿಕೊಂಡಿದ್ದರು. ಆದರೆ, ಅವರ ತಾಯಿಗೆ ಪೋಸ್ಟ್​ ಡಿಲೀಟ್​ ಮಾಡಿಸುವಂತೆ ಕರೆ ಬಂದ ಬೆನ್ನಲ್ಲೇ, ನಾನು ಪೋಸ್ಟ್ ಡಿಲೀಟ್ ಮಾಡುವ ಮಾತೆ ಇಲ್ಲ ಎಂದು ಬಹಿರಂಗವಾಗಿ ಟಾಂಗ್​ ಕೊಟ್ಟಿದ್ದಾರೆ.
NEET ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರು.

ಅರ್ಚಿತಾ ಹೇಳಿದ್ದೇನು?

ಆ ಬೆನ್ನಲ್ಲೇ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ಮಗಳು ಅರ್ಚಿತಾ ಸಾರಂಗಿ ಅವರು ಇಂಗ್ಲಿಷ್​ ನ್ಯೂಸ್​ವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಹೀಗೆ ಬರೆದುಕೊಂಡಿದ್ದರು, ಜೈ ಹಿಂದ್. NEET ಸೋರಿಕೆ ವೈಫಲ್ಯದ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ಹಿನ್ನೆಲೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ ಎಂದು ಪೋಸ್ಟ್ ಮಾಡಿದ್ದರು. ಆ ಬೆನ್ನಲ್ಲೇ ನೆಟ್ಟಿಗರು ಸ್ಕ್ರೀನ್​ ಶಾಟ್​ಗಳನ್ನು ತೆಗೆದು, ಆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸತೊಡಗಿದರು.

ಡಿಲೀಟ್ ಮಾಡುವಂತೆ ಒತ್ತಾಯ

ಧರ್ಮೇಂದ್ರ ಪ್ರಧಾನ್ ಅವರ ಪಿಎ ನನ್ನ ಹಿಂದಿನ ಸ್ಟೋರಿಯನ್ನು ಡಿಲೀಟ್ ಮಾಡುವಂತೆ ಕೋರಿ ನನ್ನ ತಾಯಿಗೆ ಸಂದೇಶ ಕಳುಹಿಸುತ್ತಾರೆ. ಅದು ನನಗೆ ಗೊತ್ತಿದೆ. ಆದರೆ ಈ ಬಗ್ಗೆ ಇನ್ನು ತೊಂದರೆ ತೆಗೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ನಾನು ಈ ಪೋಸ್ಟ್ ಅನ್ನು ಡಿಲೀಟ್ ಮಾಡುವುದಿಲ್ಲ. ಜೈ ಜಗನ್ನಾಥ್! ಜೈ ಹಿಂದ್!ಎಂದು ಖಡಕ್ ಆಗಿ ಬರೆದುಕೊಂಡಿದ್ದರು. ಇದರಲ್ಲಿ ಅವರು ತಮ್ಮ ತಾಯಿಯೊಂದಿಗೆ ವಾಟ್ಸಾಪ್​ನಲ್ಲಿ ಚಾಟ್​ ಮಾಡಿದ್ದ ಸ್ಕ್ರೀನ್​ ಶಾಟ್​ ಅನ್ನು ಸಹ ಶೇರ್​ ಮಾಡಿದ್ದರು.

ಅಪರಾಜಿತಾ ಸಾರಂಗಿ ಹೇಳಿದ್ದಿಷ್ಟು

ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ರಾಜೀನಾಮೆ ಕೊಡಲು ಸಾಕಷ್ಟು ಧೈರ್ಯ ಬೇಕು. ಈ ಕಷ್ಟದ ಸಮಯದಲ್ಲಿ ನಾನು ಧರ್ಮೇಂದ್ರ ಪ್ರಧಾನ್​ ಅವರ ಬೆಂಬಲಕ್ಕೆ ನಿಲ್ಲುತ್ತೇನೆ, ಜಗನ್ನಾಥ ದೇವರ ಆಶೀರ್ವಾದ ಅವರ ಮೇಲೆ ಸದಾ ಇರಲಿ ಎಂದು ಅಪರಾಜಿತಾ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕರು ಕಿಡಿ

ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ರಹರ್ ಮಾತನಾಡಿ, 'ಬಿಜೆಪಿ ಒಂದು ಕುಟುಂಬ ಮತ್ತು ಎಲ್ಲಾ ಸದಸ್ಯರು ಕಷ್ಟದಲ್ಲಿದ್ದಾಗ ಪರಸ್ಪರ ಬೆಂಬಲವಾಗಿ ನಿಲ್ಲಬೇಕು. ಸಾರಂಗಿ ಅವರ ಮಗಳು ಪಕ್ಷದ ನಾಯಕನ ವಿರುದ್ಧ ಹೋಗುವುದು ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿ ಸ್ವೀಕಾರಾರ್ಹವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2024 ರ ಭುವನೇಶ್ವರ ಕೇಂದ್ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಜಗನ್ನಾಥ್ ಪ್ರಧಾನ್ ಮಾತನಾಡಿ, ಪ್ರಧಾನ್ ಮಣ್ಣಿನ ಮಗ. ಅವರ ರಾಜೀನಾಮೆ ನಮಗೆ ನೋವುಂಟು ಮಾಡಿದೆ. ಅಪರಾಜಿತಾ ಮಗಳು ಇದನ್ನು ಸ್ವಾಗತಿಸಿದ್ದಾರೆ. ಸಾರಂಗಿಗೆ ತನ್ನ ಕುಟುಂಬ ಸದಸ್ಯರ ಮೇಲೆ ನಿಯಂತ್ರಣ ಇರಬೇಕು. ಪ್ರಧಾನ್ ವಿರುದ್ಧ ತನ್ನ ಮಗಳು ಪ್ರತಿಕೂಲ ಹೇಳಿಕೆ ನೀಡಿದ್ದಕ್ಕಾಗಿ ಅವರುಕ್ಷಮೆಯಾಚಿಸಬೇಕು. ಒಬ್ಬ ವಿದ್ಯಾವಂತ ವ್ಯಕ್ತಿಯಾಗಿ, ಸಂಸದರ ಮಗಳು ಪ್ರಧಾನ್ ವಿರುದ್ಧ ಅಂತಹ ಹೇಳಿಕೆಗಳನ್ನು ನೀಡಬಾರದು ಎಂದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net