ಮಹಿಳೆಯರು ಗಂಡಂದಿರೊಂದಿಗೆ; ಪ್ರದರ್ಶನಕ್ಕಲ್ಲ ; ನಾಲಿಗೆ ಹರಿಬಿಟ್ಟ ಸಿಪಿಐ ಮುಖಂಡ; ವ್ಯಾಪಕ ಆಕ್ರೋಶ | CPI leader
ಸೈದಲಿ ಮಜೀದ್
Published on:
Copied
Follow Us
ಮಲ್ಲಪುರಂ: ಕೇರಳದಲ್ಲಿ ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದ ಸಿಪಿಐ(ಎಂ)(CPI leader) ಪಕ್ಷದ ಮುಖಂಡರೊಬ್ಬರು ತಮ್ಮ ವಿಜಯೋತ್ಸವ ಭಾಷಣದಲ್ಲಿ ನಾಲಿಗೆ ಹರಿಬಿಟ್ಟಿದ್ದು, ಮಹಿಳೆಯರಿರುವುದು ಗಂಡಂದರೊಂದಿಗೆ ಮಲಗಲು, ಪ್ರದರ್ಶನಕ್ಕಲ್ಲ ಎಂದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸೈದಲಿ ಮಜೀದ್ ಅವಹೇಳನಕಾರಿಯಾಗಿ ಮಾತನಾಡಿದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೆದ್ದಿದ್ದ ಸಿಪಿಐ(ಎಂ) ಮುಖಂಡ. ಮುಸ್ಲಿಂ ಲೀಗ್ ಅನ್ನು ಗುರಿಯಾಗಿಸಿಕೊಂಡು ಅದರ ಮಹಿಳಾ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದ ಹುಟ್ಟು ಹಾಕಿದ್ದಾರೆ.
ಭಾಷಣದಲ್ಲಿ, ಮುಸ್ಲಿಂ ಲೀಗ್ ಚುನಾವಣೆಗಳನ್ನು ಗೆಲ್ಲಲು ವಿವಾಹಿತ ಮಹಿಳೆಯರನ್ನು ಮೆರವಣಿಗೆ ಮಾಡುತ್ತಿದೆ. ನನ್ನ ಸೋಲಿಸಿ ಈ ವಾರ್ಡ್ ಅನ್ನು ವಶಪಡಿಸಿಕೊಳ್ಳಲು ಮುಸ್ಲಿಂ ಲೀಗ್ನ ಪುರುಷರು ತಮ್ಮ ವಿವಾಹಿತ ಮಹಿಳೆಯರನ್ನು ಪ್ರದರ್ಶನ ಮಾಡಬಾರದಿತ್ತು. ನಾವು ಕೂಡ ವಿವಾಹಿತರು ಮತ್ತು ನಮಗೂ ಹೆಣ್ಣು ಮಕ್ಕಳಿದ್ದಾರೆ. ಅವರು ಗಂಡಂದಿರೊಂದಿಗೆ ಮಲಗಿ ಮಕ್ಕಳನ್ನು ಹೆರಲು ಅಷ್ಟೇ ಎಂದು ಹೇಳಿದ್ದಾರೆ.
ನೀವು 20, 25 ಅಥವಾ 200 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ನಮ್ಮ ಮನೆಯಲ್ಲಿ ವಿವಾಹಿತ ಮಹಿಳೆಯರೂ ಇರುತ್ತಾರೆ. ಅದಕ್ಕಾಗಿಯೇ ಕುಟುಂಬಗಳು ಸಾಂಪ್ರದಾಯಿಕವಾಗಿ ಮದುವೆಗಳನ್ನು ಏರ್ಪಡಿಸುವಾಗ ವಂಶಾವಳಿ ಮತ್ತು ಹಿನ್ನೆಲೆಯನ್ನು ಪರಿಶೀಲಿಸುತ್ತವೆ ಎಂದಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಸಿಪಿಐ(ಎಂ) ರಾಜ್ಯಾದ್ಯಂತ ಹಿನ್ನಡೆಯನ್ನು ಅನುಭವಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿದೆ. ಜೊತೆಗೆ ರಾಜ್ಯದಲ್ಲಿ ನೆಲಯೇ ಇಲ್ಲದಿದ್ದ ಬಿಜೆಪಿ ತಿರುವನಂತಪುರಂ ಪಾಲಿಕೆಯಲ್ಲಿ ಗದ್ದುಗೆ ಹಿಡಿದು ಇತಿಹಾಸ ಸೃಷ್ಟಿಸಿದೆ (ಏಜೆನ್ಸೀಸ್).