ಮಹಿಳಾ ಸೇನಾ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್​ನಲ್ಲಿ ಜಯ; ಶಾಶ್ವತ ಆಯೋಗ ನೀಡಲು ಶಿಫಾರಸು..Women Short Service Commission

ಮಹಿಳಾ ಸೇನಾ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್​ನಲ್ಲಿ ಜಯ; ಶಾಶ್ವತ ಆಯೋಗ ನೀಡಲು ಶಿಫಾರಸು
ಮಹಿಳಾ ಸೇನಾ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್​ನಲ್ಲಿ ಜಯ; ಶಾಶ್ವತ ಆಯೋಗ ನೀಡಲು ಶಿಫಾರಸು
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಸೇನಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್ ನೀಡಲು ಆದೇಶಿಸಿದ ಸುಪ್ರೀಂ ಕೋರ್ಟ್
  • ಮಹಿಳಾ ಅಧಿಕಾರಿಗಳ ವಾರ್ಷಿಕ ರಹಸ್ಯ ವರದಿ ಅತ್ಯಂತ ನಿರ್ಲಕ್ಷ್ಯದಿಂದ ಸಿದ್ಧಪಡಿಸಿರುವ ಬಗ್ಗೆ ಬೇಸರ
  • ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಕೋರ್ಟ್​​ ಮಹತ್ವದ ತೀರ್ಪು
ನವದೆಹಲಿ: ಭಾರತೀಯ ಸೇನೆಯಲ್ಲಿ ಲಿಂಗ ಸಮಾನತೆ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್​ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. Women Short Service Commission (SSC) ಅಧಿಕಾರಿಗಳು ಶಾಶ್ವತ ಆಯೋಗ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್​ ಆದೇಶ ಹೊರಡಿಸಿದೆ.

ಕೋರ್ಟ್​ ಹೇಳಿದ್ದೇನು?

ಮಹಿಳೆಯರಿಗೆ ಸಮಾನ ಹಕ್ಕು ನೀಡಲು ಸಂವಿಧಾನದ ವಿಧಿ 142ರ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿದೆ. ಈಗಾಗಲೇ ನೀಡಿರುವ Permanent commission​ ತೀರ್ಪಿನಲ್ಲಿ ಯಾವುದೇ ಬದಲಾವಣೆ ತರದಂತೆ ಕೋರ್ಟ್​ ತಾಕೀತು ಮಾಡಿದೆ.
ಶಾಶ್ವತ ಆಯೋಗ ಪುರುಷರಿಗೆ ಮಾತ್ರ ಸೀಮಿತ ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಪುರುಷ ಎಸ್​ಎಸ್​ಸಿ ಅಧಿಕಾರಿಗಳಿಗೆ ಅರ್ಥ ಮಾಡಿಸುವ ಮೂಲಕ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
ಇನ್ನು ಎಸಿಆರ್​ಗಳು ಮಹಿಳೆಯರಿಗೆ ಎಂದೂ Permnent Commision ಸಿಗೋದಿಲ್ಲ ಎಂಬ ಪೂರ್ವಾಗ್ರಹದಿಂದ ವಾರ್ಷಿಕ ರಹಸ್ಯ ವರದಿಗಳನ್ನು ಬೇಕಾಬಿಟ್ಟಿ ಮೌಲ್ಯಮಾಪನ ಮಾಡಲಾಗಿದೆ. ಇದರಿಂದ ಅವರ ವೃತ್ತಿ ಜೀವನದ ಬೆಳವಣಿಗೆಗೆ ಅಡ್ಡಿಯಾಗಿದೆ. ಮಹಿಳಾ ಅಧಿಕಾರಿಗಳ ಅರ್ಹತೆ ಮೇಲೆ ಅವಕಾಶಗಳ ಅಸಮಾನತೆ ಪರಿಣಾಮ ಬೀರಿದೆ ಎಂದು ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತು.
ಖಾಲಿ ಇರುವ ಹುದ್ದೆಗಳು ಕೇವಲ ಪುರುಷರಿಗೆ ಮಾತ್ರ ಮೀಸಲಿವೆ ಎನ್ನುವಂತಿಲ್ಲ. ಮಹಿಳೆಯರಿಗೆ ಶಾಶ್ವತ ಆಯೋಗ ನಿರಾಕರಣೆಯು ಸಾಂಸ್ಥಿಕ ತಾರತಮ್ಯದ ಪರಿಣಾಮವಾಗಿದೆ ಎಂದು ಕೋರ್ಟ್​ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಾ, ಮಹಿಳಾ ಅಧಿಕಾರಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಸಶಸ್ತ್ರ ಪಡೆಗಳು ವಿಫಲವಾಗಿವೆ. ಸೇನೆಯು ಮಹಿಳಾ ಅಧಿಕಾರಿಗಳ ವಿಷಯದಲ್ಲಿ ಉದಾರವಾಗಿರಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ, ಇಲ್ಲಿ ಕಂಡುಬರುತ್ತಿರುವುದು ಕೇವಲ ತಾಂತ್ರಿಕ ಕಾರಣಗಳನ್ನು ಒಡ್ಡಿ ಅವರನ್ನು ಹೊರಗಿಡುವ ಪ್ರಯತ್ನಗಳು ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಪೆನ್ಷನ್​ ಹಕ್ಕು ಯಾರಿಗಿದೆ?

ಕಾನೂನು ಪ್ರಕ್ರಿಯೆಯ ಸಂದರ್ಭದಲ್ಲಿ ಸೇವೆಯಿಂದ ಬಿಡುಗಡೆಯಾದ ಮಹಿಳಾ ಅಧಿಕಾರಿಗಳು 20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಇದರ ಅನ್ವಯ ಅವರು ನಿವೃತ್ತಿ ವೇತನಕ್ಕೆ ಅರ್ಹರಾಗಿರುತ್ತಾರೆ. ಆದರೆ, ಅವರಿಗೆ ಹಿಂದಿನ ವೇತನದ ಬಾಕಿ ಸಿಗುವುದಿಲ್ಲ ಎಂದು ಕೋರ್ಟ್​ ಹೇಳಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net