

ವಿದೇಶಿ ಬಾಸ್ ಮುಂದೆ ಬಾಲಿವುಡ್ ಹಾಡಿಗೆ ಕುಣಿದ ಯುವತಿ ವಿಡಿಯೋ ವೈರಲ್.
ಎಲ್ಲರ ಮುಂದೆ ನೃತ್ಯ ಮಾಡೋಕೆ ಮುಜುಗರ ಆಗೋದಿಲ್ವೇ? ಇದೇನಾ ನಿಮ್ಮ ವೃತಿಪರತೆ ಎಂದು ಕಿಡಿ.
ವಿದೇಶಿಗರ ಆತಿಥ್ಯವನ್ನು ಮಾಡಿ ಆದರೆ, ಅವರನ್ನು ಮೆಚ್ಚಿಸಲು ಗುಲಾಮರಾಗಲು ಹೋಗಬೇಡಿ ಎಂದ ನೆಟ್ಟಿಗರು.
Woman Dance viral: ಅತಿಥಿಗಳ ಆತಿಥ್ಯ ಮುಖ್ಯ ಅತಿರೇಕ ಒಳ್ಳೆಯದಲ್ಲ. ವಿದೇಶಿ ಉದ್ಯೋಗಿಗಳು ಹೀಗೆ ಕುಣಿದಿರುವುದು ನೋಡಿದ್ದೀರಾ. ಆಫೀಸಲ್ಲಿ ಇರಬೇಕಾದ ಕನಿಷ್ಠ ಮ್ಯಾನರ್ಸ್ ಇಲ್ವಾ?, ಹೀಗೆ ಸಾಲು ಸಾಲು ಬೈಗುಳ, ಟೀಕೆಗಳು ಕೇಳಿಬಂದಿರುವುದು ಇಂಟರ್ನೆಟ್ನಲ್ಲಿ. ದೀಪಾವಳಿ ಹಬ್ಬದ ಪ್ರಯುಕ್ತ ವಿದೇಶದಿಂದ ಕಚೇರಿಗೆ ಬಂದ ಅತಿಥಿಗಳನ್ನು ರಂಜಿಸಲು ಡ್ಯಾನ್ಸ್ ಮಾಡಿದ ಯುವತಿಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಸದ್ಯ ಟೀಕೆಗೆ ಒಳಗಾಗಿದ್ದಾರೆ.
ದೀಪಾವಳಿ ಹಬ್ಬಕ್ಕೂ ಮುನ್ನವೇ ಕಾರ್ಪೋರೇಟ್ ಕಂಪನಿಗಳಲ್ಲಿ ಬಂಪರ್ ಗಿಫ್ಟ್ ಪ್ಯಾಕ್, ಸ್ವೀಟ್ ಕೊಟ್ಟು ಉದ್ಯೋಗಿಗಳ ಮನ ತಣಿಸಲಾಗುತ್ತಿದೆ. ಆಫೀಸಿನಲ್ಲಿ ಕಾರ್ಯಕ್ರಮ ಆಯೋಜಿಸಿ ಒಂದು ದಿನ ಮಟ್ಟಿಗೆ ಕೆಲಸ ಮುಕ್ತ, ಟೆನ್ಷನ್ ಫ್ರೀಯಾಗಿರಲು ಎಚ್ಆರ್ಗಳು ನಾನಾ ರೀತಿ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಕಾರ್ಪೋರೇಟ್ ಕಂಪನಿಯೊಂದರಲ್ಲಿ ಯುವತಿಯೊಬ್ಬರು ಡ್ಯಾನ್ಸ್ ಮಾಡಿರುವ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು, ಭಾರತೀಯರ ನಡೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಯಾರನ್ನೋ ಮೆಚ್ಚಿಸಲು ಗುಲಾಮರಾಗಬೇಡಿ ಎಂದು ಸಲಹೆ ಕೊಟ್ಟಿದ್ದಾರೆ.
ಏನಾಗಿತ್ತು?
ಇಂಟರ್ನೆಟ್ನಲ್ಲಿ ವೈರಲ್ ಆದ ವಿಡಿಯೋ ಪ್ರಕಾರ, ಹಳದಿ, ರೇಷ್ಮೇ ಬಣ್ಣ ಮಿಶ್ರಿತ ಸೀರೆಯುಟ್ಟ ಯುವತಿಯೊಬ್ಬರು, ವೆಲ್ಕಮ್ 2 ಕರಾಚಿ ಚಿತ್ರದ 2015 ರ ಶಕೀರಾ ಹಾಡಿಗೆ ಎರ್ರಾಬಿರ್ರಿ ಕುಣಿದಿದ್ದಾರೆ. ಇನ್ನೂ ಕೆಲವರು ಅವರ ನೃತ್ಯಕ್ಕೆ ಬೆಂಬಲ ಕೊಟ್ಟರು. ಅವರ ಮುಂದೆ ಕುಳಿತ ವಿದೇಶಿ ಮಹಿಳೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು...ಡ್ಯಾನ್ಸ್ ನೋಡುತ್ತಾ ರಂಜಿಸುತ್ತಿರುವುದು ಕಂಡುಬಂದಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..ಈ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಚೇರಿಯಲ್ಲಿ ಹೀಗೆ ನೃತ್ಯ ಮಾಡಲು ಮುಜುಗರ ಆಗೋದಿಲ್ವೆ? ಯಾವುದೇ ಸ್ವಾಭಿಮಾನ ಇಲ್ಲವೇ, ಹೀಗೆ ವಿದೇಶಿ ಹಿಳೆಯರ ಮುಂದೆ..ನೃತ್ಯ ಮಾಡೋದು ಸರಿಯಲ್ಲ. ವಿದೇಶಿ ಮಹಿಳೆಯರು ಎಂದಾದರೂ ಹೀಗೆ ಮಾಡಿದ್ದೂ ನೋಡಿದ್ದೀರಾ ಎಂದು ಕಿಡಿಕಾರಿದ್ದಾರೆ.
ಅತಿಥಿಗಳನ್ನು ಸತ್ಕರಿಸುವುದು ನಮ್ಮ ಗುಣ..ಹಾಗೆ ಮಾಡುವುದು ಸರಿ. ಆದರೆ, ಆತಿಥ್ಯವು ಅತಿರೇಕವಾಗಬಾರದು. ಇದು ನಿಲ್ಲಬೇಕು. ಅತಿಥಿಗಳನ್ನು ಗೌರವದಿಂದ ನಡೆಸಿಕೊಳ್ಳಿ, ಆದರೆ ಎಲ್ಲೆ ಮೀರಬೇಡಿ ಎಂದು ಹೇಳಿದ್ದಾರೆ. ಇತರರನ್ನು ಮೆಚ್ಚಿಸುವ ಭಾರತೀಯರ ಗುಲಾಮಗಿರಿ ದೂರವಾಗ ಬೇಕು ಎಂದು ಹೇಳಿದ್ದಾರೆ.
ಮತ್ತೊಬ್ಬರು ಬಾಸ್ ಬಂದ ತಕ್ಷಣ ಅವರಿಗೆ ಸೆಲ್ಯೂಟ್ ಹಾಕುವುದು, ಹಾಡು-ನೃತ್ಯ ಪ್ರದರ್ಶಿಸುವುದು ನಿಲ್ಲಿಸಿ. ಭಾರತೀಯರಾಗಿರಲಿ ಅಥವಾ ವಿದೇಶಿಯಾಗಿರಲಿ ಎಲ್ಲಿ ಹೇಗಿರ್ಬೇಕೋ ಹಾಗೆಯೇ ನಡೆದುಕೊಳ್ಳಬೇಕು. ವೃತ್ತಿಪರರಾಗಿರಿ ಎಂದು ಗುಡುಗಿದ್ದಾರೆ
ಇನ್ನೂ ಕೆಲವರು ಈಕೆ ವಿದೇಶಿಯ ಬಿಳಿ ಸ್ಕಿನ್ ಟೋನ್ ಬಾಸ್ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾಳೆ. ಒಂದೇ ಒಂದು ಸೋನ್ ಪಪ್ಪಡಿಗಾಗಿ ಹೀಗೆ ಕುಣಿಯೋದು ಸರಿಯಲ್ಲ, ಇದು ನಿಜಕ್ಕೂ ಅಸಹ್ಯವಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).