ಜೀವಂತ ಇಲಿಗಳೊಂದಿಗೆ ರೆಡ್ ಕಾರ್ಪೆಟ್ ಮೇಲೆ ಮಾಡೆಲ್ ನಡಿಗೆ: ವೈರಲ್ ವಿಡಿಯೋ ಹಿಂದಿನ ಅಸಲಿಯತ್ತೇನು? Live rats
ಜೀವಂತ ಇಲಿಗಳೊಂದಿಗೆ ರೆಡ್ ಕಾರ್ಪೆಟ್ ಮೇಲೆ ಮಾಡೆಲ್ ನಡಿಗೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಅಪ್ಲೋಡ್ ಆಗುತ್ತಲೇ ಇರುತ್ತವೆ
ಕೆಲವೇ ಕೆಲವು ವಿಡಿಯೋಗಳು ಮಾತ್ರ ವೀಕ್ಷಕರ ಗಮನ ಸೆಳೆದು ವೈರಲ್ ಆಗಿಬಿಡುತ್ತವೆ
ಮಾಡೆಲ್ ಒಬ್ಬರು ಜೀವಂತ ಇಲಿಗಳನ್ನೇ ಬಟ್ಟೆಯಂತೆ ಧರಿಸಿ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ
Live rats : ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಮತ್ತು ಫೋಟೋಗಳು ಅಪ್ಲೋಡ್ ಆಗುತ್ತಲೇ ಇರುತ್ತವೆ. ಆದರೆ, ಕೆಲವೇ ಕೆಲವು ಮಾತ್ರ ವೀಕ್ಷಕರ ಗಮನ ಸೆಳೆದು ವೈರಲ್ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಮಾಡೆಲ್ಗಳು ಬಗೆಯ ಬಗೆಯ ಉಡುಗೆ ಧರಿಸಿ ಕಾರ್ಯಕ್ರಮಗಳಿಗೆ ಬರುವುದನ್ನು ನೋಡಿದ್ದೇವೆ. ರೆಡ್ ಕಾರ್ಪೆಟ್ ಕಾರ್ಯಕ್ರಮಗಳಲ್ಲಿ ಕೆಲ ಮಾಡೆಲ್ಗಳು ತುಂಬಾ ಹಾಟ್ ಆಗಿ ಕಾಣಿಸಿಕೊಂಡರೆ, ಇನ್ನು ಕೆಲವರು ಸಾಂಪ್ರದಾಯಿಕ ಉಡುಗೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ, ಜೀವಂತ ಇಲಿಗಳನ್ನೇ ಬಟ್ಟೆ ರೀತಿ ಧರಿಸಿ ಬಂದಿದ್ದನ್ನು ನೀವು ಎಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ಇಲ್ಲಾ ಅಲ್ವಾ? ಕೇಳಿರುವುದಕ್ಕೇ ಸಾಧ್ಯವೇ ಇಲ್ಲ.
ಆದರೆ, ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಸಾಧ್ಯವಿದೆ. ನಾವಿಂದು ಅಂಥದ್ದೇ ಒಂದು ವಿಚಿತ್ರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲೊಬ್ಬ ಮಾಡೆಲ್ ಜೀವಂತ ಇಲಿಗಳನ್ನೇ ಬಟ್ಟೆ ರೀತಿ ಧರಿಸಿ, ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
sherrysoni.wav ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಜೀವಂತ ಇಲಿಗಳ ಗೌನ್ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಮೂರು ದಿನಗಳ ಹಿಂದೆ ಅಪ್ಲೋಡ್ ಮಾಡಿರುವ ಈ ವಿಡಿಯೋವನ್ನು ಈವರೆಗೆ 96 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.
ವಿಡಿಯೋ ಏನೋ ವೈರಲ್ ಆಗುತ್ತಿದೆ, ಅದರ ಜೊತೆಗೆ ಒಂದು ಅನುಮಾನವೂ ಮೂಡಿದೆ. ಅದೇನೆಂದರೆ, ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ಸಹಾಯದಿಂದ ರಚಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಆಕೆಯ ಇನ್ಸ್ಟಾಗ್ರಾಂ ಖಾತೆಯಲ್ಲಿ ಇಂತಹ ಅನೇಕ ವಿಡಿಯೋಗಳಿವೆ.
ಕೇವಲ ಇಲಿಗಳು ಮಾತ್ರವಲ್ಲ, ಪಾರಿವಾಳ, ಬೆಂಕಿ ಹಚ್ಚಿದ ಸಿಗರೇಟ್, ಕುಕ್ಕರ್ಗಳು, ರಣಹದ್ದುಗಳು ಹಾಗೂ ನಾಯಿಗಳು ಸೇರಿದಂತೆ ಚಿತ್ರ-ವಿಚಿತ್ರ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಹೀಗಾಗಿ, ಅವುಗಳೆಲ್ಲ ಎಐನಿಂದ ರಚಿಸಲಾದ ವಿಡಿಯೋ ಎಂಬುದು ಸ್ಪಷ್ಟವಾಗುತ್ತದೆ, (ಏಜೆನ್ಸೀಸ್).