ಬಾಗಿಲು ತೆಗೆಯೋದು ಹೆಂಗೇ? ಹೋಟೆಲ್‌ನ ಕೀ ಕಾರ್ಡ್ ನೋಡಿ ಕಂಗಾಲಾದ ಅಜ್ಜಿ! ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ ಕ್ಯೂಟ್ ವೀಡಿಯೋ..Hotel Key Card

Hotel Key Card (ಚಿತ್ರ X)
Hotel Key Card (ಚಿತ್ರ X)
Published on

Hotel Key Card: ಮೊದಲ ಬಾರಿಗೆ ಹೋಟೆಲ್‌ಗೆ ಭೇಟಿ ನೀಡಿದ ಅಜ್ಜಿಯೊಬ್ಬರು ರೂಮ್ ತೆರೆಯಲು 'ಕೀ ಕಾರ್ಡ್' ಬಳಸಲು ಹೆಣಗಾಡಿದ ಮುದ್ದಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮೊಗದಲ್ಲಿ ನಗು ತರಿಸಿದೆ.

ವೈರಲ್ ವೀಡಿಯೋದಲ್ಲೇನಿದೆ?

'ದಿವಾ ದಾದಿ' (Diva Dadi) ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೀಡಿಯೋ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಅಜ್ಜಿಯವರು ಹೋಟೆಲ್ ಕೋಣೆಯ ಬಾಗಿಲಿನ ಮುಂದೆ ನಿಂತು, ಕೈಯಲ್ಲಿದ್ದ ಕೀ ಕಾರ್ಡ್‌ ಅನ್ನು ಗೊಂದಲದಿಂದ ನೋಡುತ್ತಾ, "ಇದೇಗೆ ಬಾಗಿಲು ತೆರೆಯುತ್ತೆ? ಚಾವಿ ಎಲ್ಲಿದೆ?" ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾರೆ.
ಈ ವೇಳೆ ಅವರ ಮೊಮ್ಮಗಳು ತನ್ನ ಕೈಯಲ್ಲಿದ್ದ ಕಾರ್ಡ್ ಅನ್ನೇ ತೋರಿಸಿ, "ಇದೇ ಕೀಲಿ" ಎಂದು ವಿವರಿಸುತ್ತಾಳೆ. ಇದನ್ನು ಕೇಳಿದ ಅಜ್ಜಿ, "ಇದನ್ನು ಹೇಗೆ ಬಳಸಬೇಕು?" ಎಂದು ಕೇಳುತ್ತಾರೆ. ನಂತರ ಮೊಮ್ಮಗಳ ಸೂಚನೆಯಂತೆ ಅಜ್ಜಿ ಮೊದಲು ಕಾರ್ಡ್ ಅನ್ನು ಲಾಕ್‌ಗೆ ಅಡ್ಡಲಾಗಿ ಸ್ವೈಪ್ ಮಾಡಲು ಪ್ರಯತ್ನಿಸುತ್ತಾರೆ.
ಆಗ ಮೊಮ್ಮಗಳು "ಕಾರ್ಡ್ ಅನ್ನು ಟ್ಯಾಪ್ ಮಾಡಬೇಕು" ಎಂದು ಹೇಳಿದಾಗ, ಅವರು ಕಾರ್ಡ್ ಬದಲಿಗೆ ತನ್ನ ಬೆರಳಿನಿಂದಲೇ ಲಾಕ್ ಅನ್ನು ಟ್ಯಾಪ್ ಮಾಡುತ್ತಾರೆ. ತಕ್ಷಣವೇ ತಾನು ಕಾರ್ಡ್ ಟ್ಯಾಪ್ ಮಾಡಬೇಕಿತ್ತೆಂದು ಅರಿತುಕೊಂಡು, ಕಾರ್ಡ್‌ನಿಂದ ಸ್ಪರ್ಶಿಸಿದಾಗ ಬಾಗಿಲು ತೆರೆಯುತ್ತದೆ. ಬಾಗಿಲು ತೆರೆಯುತ್ತಿದ್ದಂತೆ ಅಜ್ಜಿಯ ಮುಖದಲ್ಲಿ ಮೂಡಿದ ಸಂತೋಷದ ನಗು ಎಲ್ಲರ ಮನ ಗೆದ್ದಿದೆ.
"ಹೊಸ ಅನುಭವವನ್ನು ಪಡೆಯಲು ಯಾರೂ ವಯಸ್ಸಾದವರಲ್ಲ" ಎಂಬ ಸುಂದರ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಅಜ್ಜಿಯ ಹೊಸದನ್ನು ಕಲಿಯುವ ಉತ್ಸಾಹಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ನೆಟ್ಟಿಗರ ಮನಸ್ಸನ್ನು ಗೆದ್ದ ಅಜ್ಜಿಯ ಮುಗ್ಧತೆ

ಈ ಕ್ಯೂಟ್ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಲಕ್ಷಾಂತರ ಬಳಕೆದಾರರ ಗಮನ ಸೆಳೆದಿದೆ. ಅಜ್ಜಿಯ ಮುಗ್ಧ ಹಾಗೂ ಉತ್ಸಾಹಭರಿತ ನಡವಳಿಕೆಯನ್ನು ಕಂಡ ನೆಟ್ಟಿಗರು "ತುಂಬಾ ಮುದ್ದಾದ ಕ್ಷಣ" ಎಂದು ಕೊಂಡಾಡಿದ್ದಾರೆ. ಅವರ ಈ ಹರ್ಷಚಿತ್ತದ ಶಕ್ತಿಯೇ ವೀಡಿಯೋವನ್ನು ಮತ್ತಷ್ಟು ಸುಂದರವಾಗಿಸಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವರು ಕಾಮೆಂಟ್ ಮಾಡಿ, "ಹಳೆಯ ಪೀಳಿಗೆಯ ಜನರಿಗೆ ಇಂತಹ ಎಲೆಕ್ಟ್ರಾನಿಕ್ ಕೀ ಕಾರ್ಡ್‌ಗಳು ದಿನನಿತ್ಯದ ಜೀವನದ ಭಾಗವಾಗಿರಲಿಲ್ಲ. ಹೀಗಾಗಿ ಅವರಲ್ಲಿ ಮೂಡಿದ ಗೊಂದಲ ತೀರಾ ಸಹಜವಾದದ್ದು. ಅದೇ ಕಾರಣಕ್ಕೆ ಈ ಕ್ಷಣ ಪ್ರತಿಯೊಬ್ಬರ ಮನಸ್ಸಿಗೆ ಇಷ್ಟವಾಗುತ್ತದೆ" ಎಂದು ಹಿರಿಯರ ಅನುಭವವನ್ನು ಬೆಂಬಲಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net