ಈ ಕುರಿತು ಮಾತನಾಡಿರುವ ವಾರಣಾಸಿ ಕೇಂದ್ರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆಶಿಶ್ ಸಿಂಗ್, ಶುಕ್ರವಾರ ಘಟನೆ ನಡೆದಾಗ ಜಿಲ್ಲಾ ನ್ಯಾಯಾಧೀಶರು ರಜೆಯಲ್ಲಿದ್ದರು. ಆ ಮಹಿಳೆ ನ್ಯಾಯಾಲಯದ ಕೋಣೆಯೊಳಗೆ ಹೋಗಿ, ಜಿಲ್ಲಾ ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತು, ಅಲ್ಲಿದ್ದವರಿಗೆ ತಾನು ಜಿಲ್ಲಾ ನ್ಯಾಯಾಧೀಶೆ ಎಂದು ಹೇಳಿಕೊಂಡು ಸೂಚನೆಗಳನ್ನು ನೀಡಲು ಪ್ರಾರಂಭಿಸಿದಳು ಎಂದು ತಿಳಿಸಿದ್ದಾರೆ.