ಮಕ್ಕಳ ಭವಿಷ್ಯಕ್ಕಾಗಿ ಆಸ್ತಿ ಮಾರಾಟ ಮಾಡಲು ಪತ್ನಿ ಹಿಂದೇಟು: ಖಾಸಗಿ ಅಂಗಾಂಗ ಸೇರಿದಂತೆ ದೇಹದ 6 ಕಡೆ ಕರೆಂಟ್​ ಶಾಕ್​ ಕೊಟ್ಟು ಕೊಂದ ಪತಿ!..UP

uttar pradesh rampur murder case
uttar pradesh rampur murder case
Published on

ಪ್ರಮುಖ ಮುಖ್ಯಾಂಶಗಳು

  • ವಂಶವಾಹಿಯಾಗಿ ಬಂದಿರುವ ಆಸ್ತಿ ಮಾರಾಟಕ್ಕೆ ಹಿಂದೇಟು ಹಾಕಿದ ಪತ್ನಿ.
  • ಆಸ್ತಿ ಮಾರಾಟ ಮಾಡಲು ಬಿಟ್ಟಿಲ್ಲ ಎಂಬ ಸಿಟ್ಟಿಗೆ ಖಾಸಗಿ ಅಂಗಾಂಗಕ್ಕೆ ಶಾಕ್ ಕೊಟ್ಟು ಕೊಂದ ಪತಿ.
  • ಪತ್ನಿಯ ಖಾಸಗಿ ಅಂಗಗಳೂ ಸೇರಿದಂತೆ ದೇಹದ 6 ಕಡೆಗಳಲ್ಲಿ ವಿದ್ಯುತ್ ಶಾಕ್ ಕೊಟ್ಟು ಕೊಲೆ.

ಉತ್ತರ ಪ್ರದೇಶ: 

ಹೆತ್ತವರಿಂದ ಬಂದ ಆಸ್ತಿ ಮಾರಾಟ ಮಾಡಲು ಹಿಂದೇಟು ಹಾಕಿದ ಕಾರಣಕ್ಕೆ ಪತ್ನಿಯ ಖಾಸಗಿ ಅಂಗಾಂಗ ಹಾಗೂ ದೇಹದ ವಿವಿಧ ಭಾಗಗಳಿಗೆ ಎಲೆಕ್ಟ್ರಿಕ್​ ಶಾಕ್​ ಕೊಟ್ಟು  ಪತಿಯೇ ಕೊಂದ  ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ  ಬೆಳಕಿಗೆ ಬಂದಿದೆ. 

ಪತಿ ಇಸ್ರಾರ್​ನಿಂದ ಪತ್ನಿ ನಸ್ರೀನ್​ರನ್ನು ಕೊಲೆ ಮಾಡಲಾಗಿದೆ. ಇಬ್ಬರು 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ನಸ್ರೀನ್ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯುತ್ ಶಾಕ್‌ನಿಂದ ಉಂಟಾದ ಹಲವು ಸುಟ್ಟ ಗಾಯಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಏನಾಗಿತ್ತು?

ನಸ್ರೀನ್​ ಹೆತ್ತವರಿಂದ ಬಂದಿದ್ದ ಜಮೀನನ್ನು ಮಾರಾಟ ಮಾಡುವಂತೆ ಪತ್ನಿಯ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಆದರೆ, ಈ ಆಸ್ತಿಯನ್ನು ಮಾರಿದರೆ ತಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಆತಂಕಕ್ಕೆ ಒಳಗಾಗಿದ್ದ ನಸ್ರೀನ್ ಜಮೀನು ಬಿಟ್ಟುಕೊಡಲು ಸಿದ್ಧಳಿರಲಿಲ್ಲ. ಹೀಗಾಗಿ ಪತ್ನಿಯ ಖಾಸಗಿ ಅಂಗಗಳೂ ಸೇರಿದಂತೆ ದೇಹದ 6 ಕಡೆಗಳಲ್ಲಿ ವಿದ್ಯುತ್ ಶಾಕ್ ನೀಡಿ ಕೊಂದಿದ್ದಾನೆ ಎನ್ನುವುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢಪಡಿಸಲಾಗಿದೆ.
'ಆಸ್ತಿ ವಿಚಾರಕ್ಕಾಗಿ ಇಸ್ರಾರ್ ಆಗಾಗ್ಗೆ ನಸ್ರೀನ್ ಮೇಲೆ ದೌರ್ಜನ್ಯ ಎಸಗಿ ಕೊಲೆ ಬೆದರಿಕೆ ಹಾಕುತ್ತಿದ್ದನು. ನಸ್ರೀನ್ ತಂಗಿ ಹಸೀನ್ ಜಹಾನ್ ಮಾತನಾಡಿ, ನಸ್ರೀನ್ ಮುಖದ ಮೇಲೆ ಗಾಯಗಳಾಗಿದ್ದರೂ ಕೂಡ ತನ್ನ ಮೇಲಿನ ಹಲ್ಲೆ ಹಾಗೂ ಕಿರುಕುಳದ ಬಗ್ಗೆ ಮನೆಯವರಿಗೆ ಹೇಳದೆ ತನ್ನಲ್ಲೇ ನೋವನ್ನು ಮುಚ್ಚಿಟ್ಟುಕೊಂಡಳು' ಎಂದು ನಸ್ರೀನ್​ ಕುಟುಂಬಸ್ಥರು ಗೋಗೆರೆದರು.
ಮೃತ ನಸ್ರೀನ್​ ಚಿಕ್ಕಪ್ಪ  ಕೊಟ್ಟ ದೂರಿನ ಮೇರೆಗೆ ಪತಿಯ ಕುಟುಂಬಸ್ಥರ  ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಹೇಳಿದ್ದಿಷ್ಟು

ಈ ಕುರಿತು ಮಾತನಾಡಿರುವ ರಾಂಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸಿಂಗ್, "ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಿದ್ಯುತ್ ಆಘಾತದಿಂದ ಉಂಟಾದ ಗಾಯಗಳು ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಗಾಯಗಳಾಗಿರುವುದು ದೃಢಪಟ್ಟಿದೆ. ವಿಶೇಷವಾಗಿ ಮಹಿಳೆಯ ಖಾಸಗಿ ಅಂಗಗಳ ಮೇಲೂ ವಿದ್ಯುತ್ ಶಾಕ್ ನೀಡಿರುವ ಗುರುತುಗಳು ಪತ್ತೆಯಾಗಿವೆ. ಆರೋಪಿ ವಿಚಾರಣೆ ಮುಂದುವರೆಸಲಾಗಿದೆ ಎಂದು ಹೇಳಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net